• Home
  • »
  • News
  • »
  • entertainment
  • »
  • Avatar 2: ಅವತಾರ್ 2 ಮಾಸ್ಟರ್ ಪೀಸ್, ಪಾರ್ಟ್ 1ಕ್ಕಿಂತಲೂ ಸೂಪರ್ ಎಂದ ಜನ

Avatar 2: ಅವತಾರ್ 2 ಮಾಸ್ಟರ್ ಪೀಸ್, ಪಾರ್ಟ್ 1ಕ್ಕಿಂತಲೂ ಸೂಪರ್ ಎಂದ ಜನ

ಅವತಾರ್ 2 ಟ್ರೈಲರ್ ರಿಲೀಸ್

ಅವತಾರ್ 2 ಟ್ರೈಲರ್ ರಿಲೀಸ್

ಬಹುನಿರೀಕ್ಷಿತ ಅವತಾರ್ 2 ಸಿನಿಮಾದ ಪ್ರೀಮಿಯರ್ ಶೋ ಲಂಡನ್​ನಲ್ಲಿ ನಡೆದಿದೆ. ಸಿನಿಮಾ ಭಾರತದಲ್ಲಿ ಡಿಸೆಂಬರ್ 16ರಂದು ರಿಲೀಸ್ ಆಗಲಿದೆ. ಪ್ರೀಮಿಯರ್ ಶೋ ನೋಡಿ ಜನರ ಪ್ರತಿಕ್ರಿಯೆ ಹೇಗಿದೆ ಗೊತ್ತೇ?

  • News18 Kannada
  • 4-MIN READ
  • Last Updated :
  • Bangalore, India
  • Share this:

ಅವತಾರ್‌ (Avatar) ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರೂನ್‌ ಅವರ ಮಹತ್ವಾಕಾಂಕ್ಷೆಯ ಸಿನಿಮಾದ (Cinema) ಎರಡನೇ ಭಾಗದ ಪ್ರೀಮಿಯರ್ ಶೋ ಆಗಿದೆ. ಅವತಾರ 2 ಸಿನಿಮಾ ಲಂಡನ್‌ನಲ್ಲಿ (London) ಪ್ರೀಮಿಯರ್ ಶೋ ಪ್ರದರ್ಶನ ಕಂಡಿದೆ. ಅವತಾರ್ ದಿ ವೇ ಆಫ್ ವಾಟರ್‌ನ (Avatar the way of water) ಪ್ರಥಮ ಪ್ರದರ್ಶನದ ನಂತರ, ಸಿನಿಮಾಗೆ ಮೊದಲ ಪ್ರತಿಕ್ರಿಯೆಗಳು ಬಂದಿವೆ. ಸಾಮಾಜಿಕ ಮಾಧ್ಯಮದ ಟ್ವಿಟರ್ ರಿವ್ಯೂ ಹೊರಬಿದ್ದಿದ್ದು ಜನರ ವಿಮರ್ಶೆ ಪಾಸಿಟಿವ್ ಆಗಿದೆ. ಕೆಲವು ವಿಮರ್ಶಕರು (Critics) ಸಿನಿಮಾದಲ್ಲಿ ಕೆಲವೊಂದು ತಪ್ಪುಗಳನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಮೂರು ಗಂಟೆಗಳ ಕಾಲದ ಸಿನಿಮಾದಲ್ಲಿ ಹೆಚ್ಚಿನವರು ಮೊದಲ ಚಿತ್ರಕ್ಕಿಂತಲೂ ಡೀಪ್ ಆಗಿರುವ ಎಫೆಕ್ಟಿವ್ ಆಗಿರುವಂತಹ ದೃಶ್ಯ ಪರಿಣಾಮಗಳು ಈ ಸಿನಿಮಾದಲ್ಲಿ ಇವೆ ಎಂದಿದ್ದಾರೆ. 


ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ 2009ರಲ್ಲಿ ರಿಲೀಸ್ ಆದಂತ ಮೆಗಾ ಹಿಟ್ ಸಿನಿಮಾ ಅವತಾರ್‌ನ ಎರಡನೇ ಭಾಗವಾಗಿದೆ. ಐದು ಸಿನಿಮಾಗಳ ಯೋಜಿತ ಫ್ರ್ಯಾಂಚೈಸ್‌ನಲ್ಲಿ ಇದು ಎರಡನೆಯದು.


ಮೊದಲ ಭಾಗದ 13 ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ವಿಶುವಲ್ ಗ್ರ್ಯಾಂಡ್ ಆಗಿದ್ದು ಜನರ ನಿರೀಕ್ಷೆ ಮಟ್ಟ ತಲುಪುವಲ್ಲಿ ಸಿನಿಮಾ ಸಕ್ಸಸ್ ಆಗಿದೆ. ಅಂತೂ ಸಿನಿಮಾದ ಮೊದಲ ಪ್ರತಿಕ್ರಿಯೆಗಳು ಪಾಸಿಟಿವ್ ಆಗಿದ್ದು ಈ ಬಗ್ಗೆ ಇನ್ನಷ್ಟು ಕುತೂಹಲ ಶುರುವಾಗಿದೆ.


Hollywood Avatara-2 Film Trailer Got Viral
ಒಂದೇ ದಿನಕ್ಕೆ 16 ಮಿಲಿಯನ್ ಜನರಿಂದ ಟ್ರೈಲರ್ ವೀಕ್ಷಣೆ


ಇತ್ತೀಚೆಗೆ ಸಿನಿಮಾ ಪ್ರೀಮಿಯರ್ ಶೋ ನಂತರ ಅವತಾರ್ 2 ವೀಕ್ಷಿಸಿದ ಅನೇಕ ವಿಮರ್ಶಕರು ಮತ್ತು ಹಾಲಿವುಡ್ ಮಂದಿ ಅದರ ಬಗ್ಗೆ ಟ್ವಿಟರ್‌ ರಿವ್ಯೂ ಕೊಟ್ಟಿದ್ದಾರೆ. ಜೇಮ್ಸ್ ಕ್ಯಾಮರೂನ್ ಅವರು ಎಫೆಕ್ಟ್​ಗಳೊಂದಿಗೆ ಸಿನಿಮಾ ರೇಂಜ್ ಅನ್ನು ಹೆಚ್ಚಿಸಿದ್ದಾರೆ. ನನಗೆ ಈ ಸಿನಿಮಾ ಬಗ್ಗೆ ನಂಬಿಕೆ ಇತ್ತು. ಆದರೆ ಈ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ ಎಂದಿದ್ದಾರೆ.


ಇದನ್ನೂ ಓದಿ: Avatar 2: ಬಹುನಿರೀಕ್ಷಿತ ಚಿತ್ರ 'ಅವತಾರ್ 2' ರಿಲೀಸ್​ ಡೇಟ್​ ಫಿಕ್ಸ್​, 160 ಭಾಷೆಗಳಲ್ಲಿ ಬರ್ತಿದೆ ಪ್ಯಾನ್ ವರ್ಲ್ಡ್ ಸಿನಿಮಾ!


ತಾಂತ್ರಿಕ ವಿಚಾರಗಳು ಯಾವಾಗಲೂ ಪಾತ್ರ ಮತ್ತು ಸಿನಿಮ್ಯಾಟಿಕ್ ವರ್ಲ್ಡ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೊಂದು ದೃಶ್ಯ ವೈಭವ ಎಂದು ಹೊಗಳಿದ್ದಾರೆ. ಗಿಜ್ಮೊಡೊದ ಜರ್ಮೈನ್ ಲುಸಿಯರ್ ಅವರು ಈ ಸಿನಿಮಾ ನೋಡಿ ಈ ಸಿನಿಮಾ ಕೆಲವು ಎಫೆಕ್ಟಿವ್ ಸಾಹಸ ದೃಶ್ಯಗಳನ್ನು ಒಳಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.


Hollywood Avatara-2 Film Trailer Got Viral
ಅವತಾರ್-2 ಚಿತ್ರದ ಅಧಿಕೃತ ಟ್ರೈಲರ್​ ನಲ್ಲಿ ಕಥೆ ರಿವೀಲ್?


ಚಲನಚಿತ್ರ ವಿಮರ್ಶಕ ಅಮಂಡಾ ಸಲಾಸ್ ಇದನ್ನು ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ. ನಾನು ಈ ಸಿನಿಮಾವನ್ನು ಮೊದಲನೆಯದಕ್ಕಿಂತ ಹೆಚ್ಚು ಎಂಜಾಯ್ ಮಾಡಿದೆ. ಇದು ಆನ್-ಸ್ಕ್ರೀನ್‌ನಲ್ಲಿ ಬೆರಗುಗೊಳಿಸುವ ಸಿನಿಮಾ. ಜೀವನದಲ್ಲಿ ಮುಖ್ಯವಾದುದನ್ನು ನಮಗೆ ನೆನಪಿಸುವ ದೃಶ್ಯಗಳು ಮನಮುಟ್ಟುತ್ತದೆ ಎಂದಿದ್ದಾರೆ.


ಅವತಾರ್ ದಿ ವೇ ಆಫ್ ವಾಟರ್ ಅದ್ಭುತವಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ! ಇದು ಅವತಾರ್‌ಗಿಂತ ದೊಡ್ಡದು, ಉತ್ತಮ ಮತ್ತು ಭಾವನಾತ್ಮಕವಾಗಿದೆ ಎಂದು ಫಾಂಡಾಂಗೊ ಅವರ ಎರಿಕ್ ಡೇವಿಸ್ ಬರೆದಿದ್ದಾರೆ.


ಸಿನಿಮಾ ಸಮಯದ ಜಾಸ್ತಿ ಆಯ್ತು


ಸಿನಿಮಾ ಬಗ್ಗೆ ಕೆಲವು ಟೀಕೆಗಳೂ ಇದ್ದವು. ಹೆಚ್ಚು ಜನರು ಟೀಕಿಸಿದ್ದು ಸಿನಿಮಾದ ಟೈಮಿಂಗ್ ಬಗ್ಗೆ. ಚಿತ್ರದ 3 ಗಂಟೆ 10 ನಿಮಿಷಗಳ ಅವಧಿಯ ಬಗ್ಗೆ ಜನ ಪ್ರತಿಕ್ರಿಯಿಸಿದ್ದಾರೆ. ನಿರ್ಮಾಪಕ ಸ್ಕಾಟ್ ಮಾಂಟ್ಜ್, ಈ ಸ್ಟೋರಿ ಮೊದಲಿನಷ್ಟು ಗಟ್ಟಿ ಇಲ್ಲ. 3 ಗಂಟೆ ಮತ್ತು 10 ನಿಮಿಷಗಳಲ್ಲಿ ಚಿತ್ರಿಸಲಾಗಿದೆ. ಆದರೂ ಸಿನಿಮಾ ನೋಡಲು ಅದ್ಭುತವಾಗಿದೆ ಎಂದಿದ್ದಾರೆ.

Published by:Divya D
First published: