ಅವತಾರ್ (Avatar) ಸಿನಿಮಾ (Film) ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಮಹತ್ವಾಕಾಂಕ್ಷೆಯ ಸಿನಿಮಾದ ಎರಡನೇ ಭಾಗದ ಪ್ರೀಮಿಯರ್ ಶೋ ಆಗಿದೆ. ಅವತಾರ 2 ಸಿನಿಮಾ ಲಂಡನ್ನಲ್ಲಿ ಪ್ರೀಮಿಯರ್ ಶೋ ಪ್ರದರ್ಶನ ಕಂಡಿದೆ. ಅವತಾರ್ ದಿ ವೇ ಆಫ್ ವಾಟರ್ನ ಪ್ರಥಮ ಪ್ರದರ್ಶನದ ಕಂಡಿದೆ. ಕೆಲವು ವಿಮರ್ಶಕರು ಸಿನಿಮಾದಲ್ಲಿ ಕೆಲವೊಂದು ತಪ್ಪುಗಳನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಮೂರು ಗಂಟೆಗಳ ಕಾಲದ ಸಿನಿಮಾದಲ್ಲಿ ಹೆಚ್ಚಿನವರು ಮೊದಲ ಚಿತ್ರಕ್ಕಿಂತಲೂ ಡೀಪ್ ಆಗಿರುವ ಎಫೆಕ್ಟಿವ್ ಆಗಿರುವಂತಹ ದೃಶ್ಯ ಪರಿಣಾಮಗಳು ಈ ಸಿನಿಮಾದಲ್ಲಿ ಇವೆ ಎಂದಿದ್ದಾರೆ. ಸಿನಿಮಾ ಭಾರತದಲ್ಲಿ (India) ಮೊದಲ ವಾರದಲ್ಲಿ ರೂ 193 ಕೋಟಿ ಕಲೆಕ್ಷನ್ (Collection) ಗಳಿಸಿದೆ. ವಿಶ್ವದಾದ್ಯಂತ $600 ಮಿಲಿಯನ್ ದಾಟಿದೆ.
ಭಾರತದಲ್ಲಿ ಮೊದಲ ವಾರ ನಿರೀಕ್ಷೆ ಎಷ್ಟಿತ್ತು?
ಅವತಾರ್ ಸಿನಿಮಾವೂ ಭಾರತದಲ್ಲಿ ಹೆಚ್ಚು ಲಾಭ ಗಳಿಸುವ ನಿರೀಕ್ಷೆಯಲ್ಲಿತ್ತು. ಆದ್ರೆ ಅಂದುಕೊಂಡಂತೆ ಆಗಿಲ್ಲ. ಪಿಂಕ್ವಿಲ್ಲಾ ವರದಿಯ ಪ್ರಕಾರ, ವೈಜ್ಞಾನಿಕ ಕಾಲ್ಪನಿಕ ಮಹಾಕಾವ್ಯವು ಬಿಡುಗಡೆಯಾದ ವಾರದಲ್ಲಿ 200 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿತ್ತು. ಆದ್ರೆ 193 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಅವತಾರ್ ಸಿನಿಮಾ ಭಾರತದಲ್ಲಿ ಮೊದಲ ದಿನದಲ್ಲಿ 53 ಕೋಟಿ ಗಳಿಸಿತು. ಶನಿವಾರ 42 ಕೋಟಿ, ಭಾನುವಾರ 47 ಕೋಟಿ, ಸೋಮವಾರ 18.5 ಕೋಟಿ, ಮಂಗಳವಾರ 16.5 ಕೋಟಿ, ಬುಧವಾರ 15 ಕೋಟಿ, ಗುರುವಾರ ಅಂದಾಜು 14 ಕೋಟಿ ರೂಪಾಯಿ ಗಳಿಸಿದೆ.
ಅವತಾರ್ ನ ಎರಡನೇ ಭಾಗ
ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ 2009ರಲ್ಲಿ ರಿಲೀಸ್ ಆದಂತ ಮೆಗಾ ಹಿಟ್ ಸಿನಿಮಾ ಅವತಾರ್ ನ ಎರಡನೇ ಭಾಗವಾಗಿದೆ. ಐದು ಸಿನಿಮಾಗಳ ಯೋಜಿತ ಫ್ರ್ಯಾಂಚೈಸ್ನಲ್ಲಿ ಇದು ಎರಡನೆಯದು.
ಇದನ್ನೂ ಓದಿ: Bigg Boss Kannada: ತಲೆಗೆ ಎಣ್ಣೆ ಹಚ್ಚುವ ವಿಷಯಕ್ಕೆ ಮನಸ್ತಾಪ, ಅಮೂಲ್ಯಗೆ ಅಹಂಕಾರ ಹೆಚ್ಚು ಎಂದ ರಾಕಿ!
ಮೊದಲ ಭಾಗದ 13 ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ವಿಶುವಲ್ ಗ್ರ್ಯಾಂಡ್ ಆಗಿದ್ದು ಜನರ ನಿರೀಕ್ಷೆ ಮಟ್ಟ ತಲುಪುವಲ್ಲಿ ಸಿನಿಮಾ ಸಕ್ಸಸ್ ಆಗಿದೆ. ಅಂತೂ ಸಿನಿಮಾದ ಮೊದಲ ಪ್ರತಿಕ್ರಿಯೆಗಳು ಪಾಸಿಟಿವ್ ಆಗಿವೆ.
ಸಿನಿಮಾ ಹೇಗಿದೆ?
ಅವತಾರ್ ಸಿಕ್ವೇಲ್ಗೆ 'ದಿ ವೇ ಆಫ್ ವಾಟರ್' ಎಂದು ಹೆಸರಿಡಲಾಗಿದೆ. ಮೊದಲ ಸಿಕ್ವೇಲ್ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿದ್ದು, ವಿಚಿತ್ರ ಪ್ರಾಣಿಗಳನ್ನು ಪರಿಚಯಿಸಲಾಗಿದೆ. 'ಅವತಾರ್' ಸಿನಿಮಾದಿಂದ ಒಟ್ಟೂ ಐದು ಸಿಕ್ವೇಲ್ ಹೊರಬರಲಿವೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕಥೆ ಕಟ್ಟುವ ಬಗೆ, ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್, ವಿಶ್ಯುವಲ್ ಎಫೆಕ್ಟ್, ಆಕ್ಷನ್ ಸೀನ್, ಭಾವನಾತ್ಮಕ ವಿಷಯಗಳಿಗೆ ಈ ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನೊಂದೆಡೆ ಇನ್ನೂ ಚೆನ್ನಾಗಿ ಕಥೆ, ಚಿತ್ರಕಥೆ ಮಾಡಬಹುದಿತ್ತು, ಸಿನಿಮಾ ಸಮಯ ಜಾಸ್ತಿ ಆಯ್ತು ಎಂದು ಕೂಡ ಹೇಳಲಾಗಿದೆ.
3Dಯಲ್ಲಿ ಮೂಡಿಬಂದ ಈ ಸಿನಿಮಾ ನಿಜಕ್ಕೂ ದೃಶ್ಯ ವೈಭವವನ್ನೇ ನೀಡಿದೆ. 'ಅವತಾರ್' ಮೊದಲ ಪಾರ್ಟ್ನಲ್ಲಿ ಜೇಕ್ ಸುಲ್ಲಿ, ನೆಯ್ಟಿರಿ ಪಾತ್ರಗಳು ಸಖತ್ ಆಗಿ ಮೂಡಿಬಂದಿದ್ದವು. Sam Worthington, Zoe Saldaña, Joel David Moore, CCH Pounder, Giovanni Ribisi ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Darling Krishna-Milana Nagaraj: ಪತ್ನಿ ಮಿಲನಾಗೆ ಸುಬ್ಬಲಕ್ಷ್ಮಿ ಹುಕ್ ಸ್ಟೆಪ್ ಕಲಿಸಿದ ಡಾರ್ಲಿಂಗ್ ಕೃಷ್ಣ
ಮೂರು ವರ್ಷಗಳ ಕಾಲ ಶೂಟಿಂಗ್ ಮಾಡಿ, 2020ರಲ್ಲಿ ಈ ಸಿನಿಮಾದ ಬಹುತೇಕ ಕೆಲಸ ಮುಗಿದಿತ್ತು. ಲಂಡನ್ನಲ್ಲಿ ಈ ಚಿತ್ರ ಡಿಸೆಂಬರ್ 3ರಂದು ರಿಲೀಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ