• Home
  • »
  • News
  • »
  • entertainment
  • »
  • ASN Hands Up Challenge: ವಿದೇಶಿ ಅಭಿಮಾನಿಗಳನ್ನೂ ಬಿಟ್ಟಿಲ್ಲ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸ್​ ಅಪ್​ ಚಾಲೆಂಜ್​

ASN Hands Up Challenge: ವಿದೇಶಿ ಅಭಿಮಾನಿಗಳನ್ನೂ ಬಿಟ್ಟಿಲ್ಲ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸ್​ ಅಪ್​ ಚಾಲೆಂಜ್​

ಹ್ಯಾಂಡ್ಸ್​ ಅಪ್​ ಹಾಡಿನ ಸ್ಟೆಪ್​ ಹಾಕುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ

ಹ್ಯಾಂಡ್ಸ್​ ಅಪ್​ ಹಾಡಿನ ಸ್ಟೆಪ್​ ಹಾಕುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ

ASN Hands Up Challengeಯಾವುದೇ ಸಿನಿಮಾದ ಹಾಡುಗಳು ಹಿಟ್​ ಆಯಿತು ಎಂದರೆ, ಆ ಚಿತ್ರ ಮುಕ್ಕಾಲು ಪಾಲು ಹಿಟ್​ ಎಂದೇ ಸಿನಿ ಇಂಡಸ್ಟ್ರಿಯಲ್ಲಿ ಪರಿಗಣಿಸಲಾಗುತ್ತದೆ. ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ 'ಹ್ಯಾಂಡ್ಸ್ ಅಪ್​' ಹಾಡು ಸಹ ಈಗಾಗಲೇ ಹಿಟ್​ ಆಗಿದ್ದು, ಎಲ್ಲರೂ ಈ ಹಾಡಿನ ಸಿಗ್ನೇಚರ್​ ಸ್ಟೆಪ್​ ಹಾಕಿ ವಿಡಿಯೋ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ರಕ್ಷಿತ್​ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಅವನೇ ಶ್ರೀಮನ್ನರಾಯಣ' ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ.  ಹೀಗಿರುವಾಗಲೇ ಚಿತ್ರದ ಹ್ಯಾಂಡ್ಸ್​ಅಪ್​ ಹಾಡು ಬಿಡುಗಡೆಯಾಯಿತು. ಈ ಹಾಡಿನ ಗುಂಗು ಎಷ್ಟರ ಮಟ್ಟಿಗೆ ಇದೆ ಎಂದರೆ ವಯಸ್ಸಿನ ಮಿತಿ ಇಲ್ಲದೆ ಚಿಣ್ಣರಿಂದ ಹಿಡಿದು ಹಿರಿಯ ನಾಗರಿಕರಿಗೂ ಡಾನ್ಸ್​ ಮಾಡುವ ಹುಚ್ಚಿಡಿಸಿದೆ.

ಯಾವುದೇ ಸಿನಿಮಾದ ಹಾಡುಗಳು ಹಿಟ್​ ಆಯಿತು ಎಂದರೆ, ಆ ಚಿತ್ರ ಮುಕ್ಕಾಲು ಪಾಲು ಹಿಟ್​ ಎಂದೇ ಸಿನಿ ಇಂಡಸ್ಟ್ರಿಯಲ್ಲಿ ಪರಿಗಣಿಸಲಾಗುತ್ತದೆ. ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ 'ಹ್ಯಾಂಡ್ಸ್ ಅಪ್​' ಹಾಡು ಸಹ ಈಗಾಗಲೇ ಹಿಟ್​ ಆಗಿದ್ದು, ಎಲ್ಲರೂ ಈ ಹಾಡಿನ ಸಿಗ್ನೇಚರ್​ ಸ್ಟೆಪ್​ ಹಾಕಿ ವಿಡಿಯೋ ಮಾಡುತ್ತಿದ್ದಾರೆ.ಈ ಹಾಡು ಕೇವಲ ಕರ್ನಾಟಕದವರಲ್ಲ ಬೇರೆ ದೇಶದವರನ್ನೂ ಅಭಿಮಾನಿಗಳನ್ನಾಗಿ ಮಾಡಿದೆ. ಹೌದು, ವಿದೇಶಿಗರೂ ಹ್ಯಾಂಡ್ಸ್​ ಅಪ್​ ಎನ್ನುತ್ತಾ ಕುಣಿದು ವಿಡಿಯೋ ಮಾಡಿ ಪೋಸ್ಟ್​ ಮಾಡಿದ್ದಾರೆ.

Hey @rakshitshetty , check this out .ASN dance from @grow_jan pic.twitter.com/63RQt1008f


ಇಷ್ಟೇ ಅಲ್ಲ ಪುಟ್ಟ ಪುಟ್ಟ ಮಕ್ಕಳು, ನಾಟಕ ಕಲಾವಿದರು,ಭರತನಾಟ್ಯ ಕಲಾವಿದೆಯರು,


ಈ ಹಿಂದೆ ರಕ್ಷಿತ್​ ಶೆಟ್ಟಿ 'ಹ್ಯಾಂಡ್ಸ್​ ಅಪ್​' ಹಾಡಿನ ಸಿಗ್ನೇಚರ್​ ಸ್ಟೆಪ್​ ಅನ್ನು ಚೆನ್ನೈನ ಮರೀನಾ ಬೀಚ್​ನಲ್ಲಿ ಹಾಕುವ ಮೂಲಕ ಪುನೀತ್​ ರಾಜ್​ಕುಮಾರ್​, ಇಮ್ರಾನ್​ ಸರ್ದಾರಿಯಾ, ಸಂಯುಕ್ತಾ ಹೆಗಡೆ ಹಾಗೂ ದಿಗಂತ್​ ಅವರಿಗೆ ಸವಾಲು ಹಾಕಿದ್ದರು.


ಈ ಸವಾಲು ಪಾಸ್​ ಮಾಡುವ ಕೆಲಸ ನಿರಂತರವಾಗಿ ಸಾಗುತ್ತಿದ್ದು, ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳೂ ಹ್ಯಾಂಡ್ಸ್​ ಅಪ್​ ಎನ್ನುತ್ತಿದ್ದಾರೆ. ಬಿಡುಗಡೆಗೂ ಮುನ್ನವೇ ಮನೆಮಾತಾಗಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರ ಇನ್ನೇನು ಮುಂದಿನ ವಾರ ಅಂದರೆ ಡಿ. 27ಕ್ಕೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: 400 ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ಬಲ್ಲಿ: ಚುಲ್​ಬುಲ್​ ಪಾಂಡೆಯನ್ನು ಸ್ವಾಗತಿಸಿ ಎಂದ ಸಲ್ಲು..!

Bold Photos: ಮತ್ತಷ್ಟು ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಅಮೀರ್​ ಖಾನ್​ ಮಗಳು ಇರಾ ಖಾನ್​..!

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು