ಕೆಜಿಎಫ್​ ಹಾದಿಯಲ್ಲಿ ಅವನೇ ಶ್ರೀಮನ್ನಾರಾಯಣ; ರಕ್ಷಿತ್​ ಸಿನಿಮಾ ಮುರಿಯಲಿರುವ ದಾಖಲೆಗಳೆಷ್ಟು ಗೊತ್ತಾ?

ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವುದು ಗೊತ್ತಿದ್ದ ವಿಚಾರವೇ. ಆದರೆ, ಇದನ್ನು ನಿರ್ದೇಶಕ ಸಚಿನ್​ ರವಿ ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಇದಕ್ಕೆ ಟ್ರೈಲರ್​ನಲ್ಲಿ ಉತ್ತರ ಸಿಕ್ಕಿದೆ.

Rajesh Duggumane | news18-kannada
Updated:December 2, 2019, 3:26 PM IST
ಕೆಜಿಎಫ್​ ಹಾದಿಯಲ್ಲಿ ಅವನೇ ಶ್ರೀಮನ್ನಾರಾಯಣ; ರಕ್ಷಿತ್​ ಸಿನಿಮಾ ಮುರಿಯಲಿರುವ ದಾಖಲೆಗಳೆಷ್ಟು ಗೊತ್ತಾ?
ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವುದು ಗೊತ್ತಿದ್ದ ವಿಚಾರವೇ. ಆದರೆ, ಇದನ್ನು ನಿರ್ದೇಶಕ ಸಚಿನ್​ ರವಿ ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಇದಕ್ಕೆ ಟ್ರೈಲರ್​ನಲ್ಲಿ ಉತ್ತರ ಸಿಕ್ಕಿದೆ.
  • Share this:
ರಕ್ಷಿತ್​ ಶೆಟ್ಟಿ ಅಭಿನಯದ ‘ಕಿರಿಕ್​ ಪಾರ್ಟಿ’ ಸಿನಿಮಾ 2016ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸಿನಿಮಾ 150 ದಿನ ಪ್ರದರ್ಶನ ಕಂಡಿದ್ದು ‘ಕಿರಿಕ್​ ಪಾರ್ಟಿ’ಯ ಹೆಚ್ಚುಗಾರಿಕೆ. ಈಗ ಸರಿಯಾಗಿ ಮೂರು ವರ್ಷಗಳ ನಂತರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿರುವ ನಿರೀಕ್ಷೆ ಇದೆ.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟ್ರೈಲರ್​ ಇತ್ತೀಚೆಗೆ ತೆರೆಗೆ ಬಂದಿತ್ತು. ಈ ವಿಡಿಯೋ ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 75 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆಯ ಮಟ್ಟವನ್ನು ತಿಳಿಸುತ್ತದೆ.

ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವುದು ಗೊತ್ತಿದ್ದ ವಿಚಾರವೇ. ಆದರೆ, ಇದನ್ನು ನಿರ್ದೇಶಕ ಸಚಿನ್​ ರವಿ ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಇದಕ್ಕೆ ಟ್ರೈಲರ್​ನಲ್ಲಿ ಉತ್ತರ ಸಿಕ್ಕಿದೆ. ‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್​ ಅತ್ಯತ್ತಮವಾಗಿ ಮೂಡಿ ಬಂದಿದ್ದು, ಮೂರು ವರ್ಷಗಳ ಪರಿಶ್ರಮ ಎದ್ದು ಕಾಣುತ್ತಿದೆ. ಈ ಚಿತ್ರ ಸಾಲು ಸಾಲು ದಾಖಲೆ ಸೃಷ್ಟಿಸಲಿದೆ ಎಂಬುದು ಸಿನಿಮಾ ತಜ್ಞರ ಅಭಿಪ್ರಾಯ.

ಲಕ್ಕಿ ಡಿಸೆಂಬರ್​:

ಕಿರಿಕ್​ ಪಾರ್ಟಿ ಡಿ.30ರಂದು ತೆರೆಗೆ ಬಂದಿತ್ತು. ಈಗ ‘ಅವನೇ ಶ್ರೀಮನ್ನಾರಾಯಣ’ ಡಿ.27ರಂದು ತೆರೆಗೆ ಬರುತ್ತಿದೆ. ಅಂದರೆ, ಸರಿಯಾಗಿ ಮೂರು ವರ್ಷಗಳ ಬಳಿಕ ರಕ್ಷಿತ್​ ಶೆಟ್ಟಿ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ರಕ್ಷಿತ್​ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುವುದು ಸಹಜ. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿದೆ ಎಂಬುದು ‘ಅವನೇ ಶ್ರೀಮನ್ನಾರಾಯಣ’ ಚಿತ್ರತಂಡದ ಮಾತು. ಇನ್ನು, ಈ ಚಿತ್ರಕ್ಕೂ ಡಿಸೆಂಬರ್​ ಲಕ್ಕಿ ಆಗಲಿದೆಯಾ ಎನ್ನುವ ಪ್ರಶ್ನೆಗೆ ಈ ತಿಂಗಳಲ್ಲೇ ಉತ್ತರ ಸಿಗಲಿದೆ.

ಫುಲ್​ ಕಾಂಪಿಟೇಷನ್​:

ಡಿಸೆಂಬರ್​ 25ಕ್ಕೆ ಕ್ರಿಸಮಸ್​. ಅದಾದ ನಂತರ ಹೊಸವರ್ಷ. ಈ ವಿಶೇಷ ದಿನಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ ಆಗುವುದು ವಾಡಿಕೆ. ಈ ಬಾರಿಯೂ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಜೊತೆ ಸಾಕಷ್ಟು ಸ್ಟಾರ್​ ನಟನರ ಸಿನಿಮಾಗಳು ರಿಲೀಸ್​ ಆಗುತ್ತಿದೆ. ಸಲ್ಮಾನ್​ ಖಾನ್​ ನಟನೆಯ ‘ದಬಾಂಗ್​ 3’ ಡಿಸೆಂಬರ್​ 20ರಂದು ತೆರೆಗೆ ಬರುತ್ತಿದೆ. ಡಿಸೆಂಬರ್​ 27ಕ್ಕೆ ಅಕ್ಷಯ್​ ಕುಮಾರ್​ ಅಭಿನಯದ ‘ಗುಡ್​ನ್ಯೂಸ್​’ ತೆರೆಗೆ ಬರುತ್ತಿದೆ. ಹೀಗಾಗಿ, ‘ಅವನೇ ಶ್ರೀಮನ್ನಾರಾಯಣ’ ಮಟ್ಟಿಗೆ ಇದೊಂದು ಅಗ್ನಿ ಪರೀಕ್ಷೆಯೇ ಸರಿ.ಕೆಜಿಎಫ್​ ಹಾದಿಯಲ್ಲಿ ‘ಶ್ರೀಮನ್ನಾರಾಯಣ’:

ಕಜಿಎಫ್​ ಸಿನಿಮಾ 2018ರ ಡಿಸೆಂಬರ್​ ತಿಂಗಳಲ್ಲಿ ತೆರೆಗೆ ಬಂದಿತ್ತು. ಬಾಲಿವುಡ್​ನ ‘ಜೀರೋ’ ಸಿನಿಮಾ ಕೂಡ ಇದೇ ಸಮಯದಲ್ಲಿ ರಿಲೀಸ್​ ಆಗಿತ್ತು. ಆದರೆ, ಬಾಕ್ಸ್​ ಆಫೀಸ್​ನಲ್ಲಿ ಮೇಲುಗೈ ಸಾಧಿಸಿದ್ದು ಕೆಜಿಎಫ್​. ಈಗ ‘ಅವನೇ ಶ್ರೀಮನ್ನಾರಾಯಣ’ ಕೂಡ ಬಾಲಿವುಡ್​ನಲ್ಲಿ ಮೇಲುಗೈ ಸಾಧಿಸಲಿದೆ.

ಪರಭಾಷೆಯಲ್ಲೂ ಮೆಚ್ಚುಗೆ:

ಕನ್ನಡ ಭಾಷೆ ಸಿನಿಮಾಗಳು ಬೇರೆ ಭಾಷೆಗೆ ಡಬ್​ ಆಗಿ ತೆರೆಕಾಣುವುದು ಬಹಳ ಕಡಿಮೆ. ಆದರೆ, ರಕ್ಷಿತ್​ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ತೆಲುಗು ಮಾಧ್ಯಮಗಳೂ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕೆಜಿಎಫ್​ ಸಿನಿಮಾ ತೆರೆಕಂಡಾಗ ಇಡೀ ಟಾಲಿವುಡ್​ ಮಂದಿ ನಿಬ್ಬೆರಗಾಗಿದ್ದರು. ಈಗ ಶ್ರೀಮನ್ನಾರಾಯಣನೂ ಇದೇ ಕೆಲಸ ಮಾಡುತ್ತಾನೆ” ಎಂದು ಅಲ್ಲಿನ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಮೂರು ವರ್ಷಗಳ ಶ್ರಮ:

ರಕ್ಷಿತ್​ ಶೆಟ್ಟಿ ಆ್ಯಂಡ್​ ಟೀಂ ಈ ಸಿನಿಮಾಗಾಗಿ ಮೂರು ವರ್ಷ ಶ್ರಮವಹಿಸಿದ್ದಾರೆ. ಅವರು​ ಈ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಜೊತೆ ಜೊತೆ ಹಾಸ್ಯವನ್ನು ಬೆರೆಸಿದ್ದಾರೆ ನಿರ್ದೇಶಕ ಸಚಿನ್ ರವಿ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶಾನ್ವಿ ಶ್ರೀವಾಸ್ತವ ಚಿತ್ರದ ನಾಯಕಿ. ಪ್ರಮೋದ್​ ಶೆಟ್ಟಿ, ಅಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚರಣ್​ ರಾಜ್​ ಸಂಗೀತ ಸಂಯೋಜನೆ, ಅಜ್ನೀಶ್​ ಲೋಕನಾಥ್​ ಹಿನ್ನೆಲೆ ಸಂಗೀತ ಸಿನಿಮಾಕ್ಕಿದೆ.
First published: December 2, 2019, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading