ಬೆಂಗಳೂರಿನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೊದಲ ದಿನ ಎಷ್ಟು ಶೋ ಪ್ರದರ್ಶನ ಕಾಣ್ತಿದೆ ಗೊತ್ತಾ?

ಇತ್ತೀಚೆಗೆ ‘ಹ್ಯಾಂಡ್ಸ್​ ಅಪ್’ ಸಾಂಗ್​ ರಿಲೀಸ್​ ಆಗಿತ್ತು. ಈ ಸಾಂಗ್​ನ ಹವಾ ಕೂಡ ಜೋರಾಗಿದೆ. ಚಿತ್ರತಂಡ ಇಂದು ಮಧ್ಯಾಹ್ನ 11 ಗಂಟೆಗೆ ಮತ್ತೊಂದು ಸಾಂಗ್​​ ಕೂಡ ರಿಲೀಸ್​ ಮಾಡುತ್ತಿದ್ದು, ಈ ಸಾಂಗ್​ ಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿದೆ.

Rajesh Duggumane | news18-kannada
Updated:December 26, 2019, 9:04 AM IST
ಬೆಂಗಳೂರಿನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೊದಲ ದಿನ ಎಷ್ಟು ಶೋ ಪ್ರದರ್ಶನ ಕಾಣ್ತಿದೆ ಗೊತ್ತಾ?
ಅವನೇ ಶ್ರೀಮನ್ನಾರಾಯಣ ಪೋಸ್ಟರ್​
  • Share this:
‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತೆರೆಗೆ ಬರಲು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಟ್ವಿಟ್ಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ, ಯುಟ್ಯೂಬ್​ನಲ್ಲಿ ಸದ್ಯ ‘ಶ್ರೀಮನ್ನಾರಾಯಣ’ನ ಭಜನೆ ಜೋರಾಗಿದೆ. ಇನ್ನು, ಆನ್​ಲೈನ್​ ಬುಕಿಂಗ್​ನಲ್ಲೂ ‘ಅವನೇ ಶ್ರೀಮನ್ನಾರಾಯಣ’ ಧೂಳೆಬ್ಬಿಸಿದ್ದು, ಅನೇಕ ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ.

ಟೀಸರ್​​ ಹಾಗೂ ಟ್ರೈಲರ್​ ಮೂಲಕ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿರುವ ‘ಅವನೇ ಶ್ರೀಮನ್ನಾರಾಯಣ’ ಆನ್​ಲೈನ್​ ಬುಕಿಂಗ್ 10 ದಿನಗಳ ಹಿಂದೆಯೇ ಆರಂಭಗೊಂಡಿತ್ತು. ಚಿತ್ರಮಂದಿರಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಬೆಂಗಳೂರಿನಲ್ಲೊಂದೇ ಶುಕ್ರವಾರ ಈ ಚಿತ್ರ 350ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುತ್ತಿವೆ. ಸಂಜೆ ವೇಳೆಗೆ ಶೋಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇನ್ನು, ಅನೇಕ ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೆಟ್​ಗಳು ಸೋಲ್ಡ್​​ ಔಟ್​ ಆಗಿವೆ. ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟಕ್ಕೆ ತೆರೆಕಾಣುತ್ತಿರುವುದು ವಿಶೇಷ.ಈ ಬಾರಿ ತೆರೆಕಂಡ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ‘ಅವನೇ ಶ್ರೀಮನ್ನಾರಾಯಣ’ ಹವಾ ತುಂಬಾನೇ ಜೋರಾಗಿದೆ. ಸಿನಿಮಾಗೆ ಪ್ರಚಾರ ಕೂಡ ದೊಡ್ಡ ಮಟ್ಟದಲ್ಲಿ ಸಿಗುತ್ತಿದೆ. ‘ಅವನೇ ಶ್ರೀಮನ್ನಾರಾಯಣ’ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಸಂಪೂರ್ಣ ಟ್ರೈನ್​ಗೆ ಈ ಸಿನಿಮಾದ ಪೋಸ್ಟರ್​ ಅಂಟಿಸುವ ಮೂಲಕ ಹೊಸ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದರು.ಇತ್ತೀಚೆಗೆ ‘ಹ್ಯಾಂಡ್ಸ್​ ಅಪ್’ ಸಾಂಗ್​ ರಿಲೀಸ್​ ಆಗಿತ್ತು. ಈ ಸಾಂಗ್​ನ ಹವಾ ಕೂಡ ಜೋರಾಗಿದೆ. ಚಿತ್ರತಂಡ ಇಂದು ಮಧ್ಯಾಹ್ನ 11 ಗಂಟೆಗೆ ಮತ್ತೊಂದು ಸಾಂಗ್​​ ಕೂಡ ರಿಲೀಸ್​ ಮಾಡುತ್ತಿದ್ದು, ಈ ಸಾಂಗ್​ ಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿದೆ.ರಕ್ಷಿತ್​ ಈ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಜೊತೆ ಜೊತೆ ಹಾಸ್ಯವನ್ನು ಬೆರೆಸಿದ್ದಾರೆ ನಿರ್ದೇಶಕ ಸಚಿನ್ ರವಿ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ರಕ್ಷಿತ್​ಗೆ ಜೊತೆಯಾಗಿ ಶಾನ್ವಿ ಶ್ರೀವಾಸ್ತವ ಕಾಣಿಸಿಕೊಂಡಿದ್ದಾರೆ. ಪ್ರಮೋದ್​ ಶೆಟ್ಟಿ, ಅಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚರಣ್​ ರಾಜ್​ ಸಂಗೀತ ಸಂಯೋಜನೆ, ಅಜ್ನೀಶ್​ ಲೋಕನಾಥ್​ ಹಿನ್ನೆಲೆ ಸಂಗೀತ ಸಿನಿಮಾಕ್ಕಿದೆ.

ಅವನೇ ಶ್ರೀಮನ್ನಾರಾಯಣ’ ಕನ್ನಡದಲ್ಲಿ ಡಿಸೆಂಬರ್​ 27ರಂದು ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ಜನವರಿ 1, ತಮಿಳು-ಮಲಯಾಳಂನಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17ರಂದು ಸಿನಿಮಾ ರಿಲೀಸ್​ ಆಗುತ್ತಿದೆ.
First published:December 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ