ASN Hands Up Challenge: ರಕ್ಷಿತ್​ಗೆ 'ಹ್ಯಾಂಡ್ಸ್​ ಅಪ್' ಎಂದ ಜೂನಿಯರ್ ರಿಷಬ್ ಶೆಟ್ಟಿ; ರಣ್ವಿತ್ ಶೆಟ್ಟಿ ಡ್ಯಾನ್ಸ್ ವಿಡಿಯೋ​ ವೈರಲ್

Avane Srimannarayana Songs: ರಕ್ಷಿತ್ ಶೆಟ್ಟಿಯ ಗೆಳೆಯ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ ಕೂಡ ತನ್ನ ಚಿಂಟು ಮಾಮನ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾನೆ.

ರಕ್ಷಿತ್ ಶೆಟ್ಟಿ ಜೊತೆ ರಣ್ವಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಜೊತೆ ರಣ್ವಿತ್ ಶೆಟ್ಟಿ

  • Share this:
ಸ್ಯಾಂಡಲ್​ವುಡ್​ನಲ್ಲಿ ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿದ್ದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 12 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಬಿಡುಗಡೆಗೂ ಮೊದಲೇ 'ಹ್ಯಾಂಡ್ಸ್​ ಅಪ್' ಹಾಡಿನ ಚಾಲೆಂಜ್ ಎಲ್ಲೆಡೆ ವೈರಲ್ ಆಗಿತ್ತು. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಹ್ಯಾಂಡ್ಸ್​ ಅಪ್ ಹಾಡಿಗೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಸ್ಟೆಪ್ ಹಾಕಿ ಚಾಲೆಂಜ್ ಸ್ವೀಕರಿಸಿದ್ದರು.

ಶ್ರೀಮನ್ನಾರಾಯಣನ ನಾಯಕಿ ಶಾನ್ವಿ ಶ್ರೀವಾಸ್ತವ್ ಆರಂಭಿಸಿದ್ದ ಈ ಚಾಲೆಂಜ್​ ಸ್ವೀಕರಿಸಿದ್ದ ರಕ್ಷಿತ್ ಶೆಟ್ಟಿ ಕೂಡ ಚೆನ್ನೈನ ಮರೀನಾ ಬೀಚ್​ನಲ್ಲಿ ತಮ್ಮದೇ ಸ್ಟೈಲ್​ನಲ್ಲಿ ಸ್ಟೆಪ್ ಹಾಕಿದ್ದರು. ಸಿನಿಮಾ ಬಿಡುಗಡೆಯಾದ ನಂತರವೂ ಹ್ಯಾಂಡ್ಸ್​ ಅಪ್ ಹಾಡಿಗೆ ಸ್ಟೆಪ್ ಹಾಕಿ ಚಾಲೆಂಜ್ ಸ್ವೀಕರಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೀಗ ತುಂಬ ಸ್ಪೆಷಲ್ ವ್ಯಕ್ತಿಯೊಬ್ಬರು ಈ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ಯಾರಪ್ಪ ಅದು ಅಂತೀರಾ?




ನಟ ರಕ್ಷಿತ್ ಶೆಟ್ಟಿಯ ಕುಚಿಕು ಗೆಳೆಯ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ ಕೂಡ ತನ್ನ ಚಿಂಟು ಮಾಮನ ಸಿನಿಮಾಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾನೆ. ಏಪ್ರಿಲ್ ತಿಂಗಳಲ್ಲಿ ಹುಟ್ಟಿದ್ದ ರಣ್ವಿತ್​ಗೆ ಇನ್ನೂ 9 ತಿಂಗಳು. ಆದರೆ, ಆತನ ಅಭಿಮಾನಿಗಳೇನೂ ಕಡಿಮೆಯಿಲ್ಲ. ಇದೀಗ ಆತನ 'ಹ್ಯಾಂಡ್ಸ್​ ಅಪ್' ಡ್ಯಾನ್ಸ್​ ನೋಡಿದ ಮೇಲೆ ಆತನ ಅಭಿಮಾನಿ ಬಳಗ ಇನ್ನೂ ಹೆಚ್ಚಾಗಿದೆ.




ತಮ್ಮ ಮಗ ರಣ್ವಿತ್ ಶೆಟ್ಟಿಯ ಕೈಗಳನ್ನು ಕುಣಿಸಿ 'ಹ್ಯಾಂಡ್ಸ್​ ಅಪ್' ಚಾಲೆಂಜ್​ ಸ್ವೀಕರಿಸಿರುವ ರಿಷಬ್ ಶೆಟ್ಟಿ ಆ ವಿಡಿಯೋವನ್ನು ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಚಿಂಟು ಮಾಮ (ರಕ್ಷಿತ್ ಶೆಟ್ಟಿ) ನನ್ನ ಸ್ಟೆಪ್​ಗೆ ನೀವು ಮ್ಯಾಚ್ ಮಾಡಲು ಸಾಧ್ಯ ಇದೆಯಾ? ಎಂದು ರಣ್ವಿತ್ ಶೆಟ್ಟಿ ಭಾಷೆಯಲ್ಲೇ ಕಮೆಂಟ್ ಹಾಕಿರುವ ರಿಷಬ್ ಶೆಟ್ಟಿ ಮಗನ ಮೂಲಕ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ತಂಡಕ್ಕೆ ಶುಭಾಶಯ ಹೇಳಿದ್ದಾರೆ. ನಾನು ದೊಡ್ಡವನಾದ ಮೇಲೆ ಈ ಸಿನಿಮಾದ ಬಗ್ಗೆ ಖಂಡಿತ ಓದುತ್ತೇನೆ ಎಂದು ರಣ್ವಿತ್​ ಶೆಟ್ಟಿಯ ಬಾಲಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ಅಭಿನಯಿಸಿದ್ದು, ಕೌ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಈ ವಿಡಿಯೋ ಈಗ ವೈರಲ್ ಆಗಿದ್ದು, ರಣ್ವಿತ್ ಶೆಟ್ಟಿಯ ಮುದ್ದುತನಕ್ಕೆ ಅಭಿಮಾನಿಗಳ ದಂಡೇ ಹುಟ್ಟಿಕೊಂಡಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, 'ಕೌ ಬಾಯ್ ಕೃಷ್ಣನ ಕುಟುಂಬದ ಪ್ರೋತ್ಸಾಹ ಹೀಗೇ ಇರಲಿ. ಮುದ್ದು ಮುದ್ದಾಗಿ ಎಕ್ಸ್​ಪ್ರೆಷನ್ ಕೊಟ್ಟಿರುವ ರಣ್ವಿತ್ ಶೆಟ್ಟಿಯನ್ನು ನಾವು ಸ್ಯಾಂಡಲ್​ವುಡ್​ನಲ್ಲಿ ಹೀರೋ ಆಗಿ ನೋಡಲು ಸಾಧ್ಯವಿಲ್ಲ. ಆತನ ಸಿನಿಮಾ ಕೆರಿಯರ್​ ಹಾಲಿವುಡ್​ನಿಂದಲೇ ಆರಂಭವಾಗುತ್ತದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
Published by:Sushma Chakre
First published: