Rakshith Shetty Birthday: ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಗಿಫ್ಟ್ ಮೇಲೆ ಗಿಫ್ಟ್; ಸಿನಿಮಾ ಪೋಸ್ಟರ್, ಟೀಸರ್ ಸುಗ್ಗಿ

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತಂಡ ಕಳೆದ ವರ್ಷ ಟೀಸರ್​ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಪೊಲೀಸ್ ಅವತಾರಾದಲ್ಲಿ ರಕ್ಷಿತ್​ ಮಿಂಚಿದ್ದರು. ಈಗ ಹೊಸ ಪೋಸ್ಟರ್​ ಮತ್ತಷ್ಟು ಗಮನ ಸೆಳೆದಿದೆ.

Rajesh Duggumane | news18
Updated:June 6, 2019, 11:04 AM IST
Rakshith Shetty Birthday: ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಗಿಫ್ಟ್ ಮೇಲೆ ಗಿಫ್ಟ್; ಸಿನಿಮಾ ಪೋಸ್ಟರ್, ಟೀಸರ್ ಸುಗ್ಗಿ
ಅವನೇ ಶ್ರೀಮನ್ನಾರಾಯಣ ಹಾಗೂ 777 ಚಾರ್ಲಿ ಪೋಸ್ಟರ್​
Rajesh Duggumane | news18
Updated: June 6, 2019, 11:04 AM IST
ರಕ್ಷಿತ್​ ಶೆಟ್ಟಿ ಇಂದು 36ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘777 ಚಾರ್ಲಿ’ ಚಿತ್ರ ತಂಡಗಳು ಹೊಸ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ರಕ್ಷಿತ್​ ಜನ್ಮದ ದಿನಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ರಕ್ಷಿತ್​ಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.

ಸಚಿನ್​ ರವಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತಂಡ ಕಳೆದ ವರ್ಷ ಟೀಸರ್​ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಪೊಲೀಸ್ ಅವತಾರಾದಲ್ಲಿ ರಕ್ಷಿತ್​ ಮಿಂಚಿದ್ದರು. ಈಗ ಹೊಸ ಪೋಸ್ಟರ್​ ಮತ್ತಷ್ಟು ಗಮನ ಸೆಳೆದಿದೆ.

ಹೊಸ ಪೋಸ್ಟರ್​ನಲ್ಲಿ ರಕ್ಷಿತ್​ ಕೈಯಲ್ಲಿ ಗನ್​ ಹಿಡಿದು ಓಡುತ್ತಿದ್ದಾರೆ. ಅವರ ಹಿಂಬದಿಯಿಂದ ಗುಂಡುಗಳ ಸುರಿಮಳೆಯೇ ಹರಿದುಬರುತ್ತಿದೆ. ಇಂದು ಸಂಜೆ 6 ಗಂಟೆಗೆ ‘ಅವನೇ ಶ್ರೀಮನ್ನಾರಾಯಣ’ ಟೀಸರ್​ ರಿಲೀಸ್​ ಆಗುತ್ತಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದಿಂದ ಟೀಸರ್​ ಉಡುಗೊರೆಯಾಗಿ ಸಿಗುತ್ತಿದೆ. ಸಿನಿಮಾ ಹಾಗೂ ರಕ್ಷಿತ್​ ಪಾತ್ರ ಹೇಗಿರಲಿದೆ ಎನ್ನುವ ಸ್ಪಷ್ಟ ಚಿತ್ರಣ ಟೀಸರ್​ನಲ್ಲಿ ಸಿಗಲಿದೆಯಂತೆ.




ಕಿರಣ್​ ನಿರ್ದೇಶನದ ‘777 ಚಾರ್ಲಿ’ ಚಿತ್ರ ಕೂಡ ರಕ್ಷಿತ್​ಗೆ ಜನ್ಮ ದಿನದ ಗಿಫ್ಟ್​​ ನೀಡಿದೆ. ರಕ್ಷಿತ್​ ಹಾಗೂ ನಾಯಿ ಬೈಕ್​ನಲ್ಲಿ ಸಾಗುತ್ತಿರುವ ಪೋಸ್ಟರ್​ ಹರಿ ಬಿಟ್ಟಿದೆ. ಈ ಪೋಸ್ಟರ್​ ನೋಡಿ ಅಭಿಮಾನಿಗಳು ಹಾಗು ಶ್ವಾನ ಪ್ರಿಯರು ಫಿದಾ ಆಗಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ರಕ್ಷಿತ್​ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೊತೆಯಾಗಿ ಶಾನ್ವಿ ಶ್ರೀವಾತ್ಸವ್​ ಕಾಣಿಸಿಕೊಂಡಿದ್ದಾರೆ. ಸಚಿನ್​ ರವಿ ಚಿತ್ರದ ನಿರ್ದೇಶಕ. ಆಗಸ್ಟ್​ ತಿಂಗಳಲ್ಲಿ ಸಿನಿಮ ತೆರೆಗೆ ಬರುತ್ತಿದೆ.



First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...