ನಟ ರಿಷಿ ಕಪೂರ್ ತಮ್ಮ ಆತ್ಮಚರಿತ್ರೆಯನ್ನು ತುಂಬಾ ತೆರೆದ ಮನಸ್ಸಿನಿಂದ ಹಾಗೂ ಧೈರ್ಯವಾಗಿ ಬರೆದಿದ್ದಾರೆ ಎಂದರೆ ತಪ್ಪಾಗದು. ಆತ್ಮಚರಿತ್ರೆಯಲ್ಲಿ ರಿಷಿ ಕಪೂರ್ ಕೆಲವು ವಿಷಯಗಳನ್ನು ನಿರ್ಭೀತರಾಗಿ ಮುಚ್ಚುಮರೆ ಇಲ್ಲದೆ ಬರೆದುಕೊಂಡಿದ್ದಾರೆ. ಅವುಗಳಲ್ಲಿ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಕುರಿತ ವಿಷಯವೂ ಇದೆ.
ದಾವೂದ್ ಇಬ್ರಾಹಿಂ ಜೊತೆ ಆಗಿದ್ದ ಎರಡು ಭೇಟಿಗಳ ಬಗ್ಗೆ ತಮ್ಮ ಆತ್ಮಕತೆ 'ಖುಲ್ಲಂಖುಲ್ಲಾ'ದಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲೂ ಆ ಭೇಟಿ ಕುರಿತಾಗಿ ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ.
ದಾವೂದ್ ಹಾಗೂ ಬಿ-ಟೌನ್ ನಡುವೆ ಇರುವ ಸಂಬಂಧದ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಓದುತ್ತಲೇ ಇರುತ್ತೇವೆ. ಡಿ ಡೇ ಸಿನಿಮಾದಲ್ಲಿ ಖುದ್ದು ರಿಷಿ ಕಪೂರ್ ದಾವೂದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
1988ರಲ್ಲಿ ದಾವೂದ್ ಜತೆ ಮೊದಲ ಭೇಟಿ
ಆರ್ ಡಿ ಬರ್ಮನ್ ಹಾಗೂ ಆಶಾ ಭೋಂಸ್ಲೆ ಅವರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಿಷಿ ತಮ್ಮ ಸ್ನೇಹಿತನ ಜತೆ ದುಬೈಗೆ ಹೋಗಿದ್ದರು. ಆಗಲೇ ದಾವೂದ್ ಕಡೆಯವರು ರಿಷಿ ಕಪೂರ್ ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದ್ದರು. ಆಗ ಭಾರತದಿಂದ ದುಬೈಗೆ ಬರುವ ವಿಐಪಿಗಳ ಮೇಲೆ ನಿಗಾ ಇಡಲು ದಾವೂದ್ ಕಡೆಯವರು ವಿಮಾನ ನಿಲ್ದಾಣದಲ್ಲಿರುತ್ತಿದ್ದರಂತೆ.
ಇದನ್ನೂ ಓದಿ: ರಿಷಿ ಕಪೂರ್ಗೆ ನಿಕ್ನೇಮ್ ಅಂದ್ರೆ ಇಷ್ಟ ಇರಲಿಲ್ಲ: ಅವರ ಅಡ್ಡಹೆಸರೇನು ಗೊತ್ತಾ?
ಆಗ ರಿಷಿ ಕಪೂರ್ ಅವರ ಬಳಿ ಒಬ್ಬ ಬಂದು, ದಾವೂದ್ ನಿಮ್ಮೊಂದಿಗೆ ಮಾತನಾಡಬೇಕಂತೆ. ನೀವು ಅವರ ಮನೆಗೆ ಬರಬೇಕು ಎಂದಿದ್ದರಂತೆ. ಜತೆಗೆ ದಾವೂದ್ ಕಳುಹಿಸಿದ್ದ ರೋಲ್ಸ್ ರಾಯ್ ಕಾರಿನಲ್ಲಿ ರಿಷಿ ಹಾಗೂ ಅವರ ಸ್ನೇಹಿತ ಹೋಗಿದ್ದರು. ಅವರನ್ನು ಕಾರಿನಲ್ಲಿ ಎಷ್ಟು ಸುತ್ತು ಹಾಕಿಸಲಾಗಿತ್ತು ಎಂದರೆ ಅವರಿಗೆ ದಾವೂದ್ ಮನೆಯ ರಸ್ತೆ ತಿಳಿಯದಂತಾಗಿತ್ತು.
ಮನೆಯಲ್ಲಿ ರಿಷಿ ಕಪೂರ್ ಅವರನ್ನು ಖುದ್ದು ದಾವೂದ್ ಸ್ವಾಗತಿಸಿದ್ದರಂತೆ. ನಂತರ ಟೀ ಹಾಗೂ ಬಿಸ್ಕಟ್ ಕೊಟ್ಟು ಉಪಚರಿಸಿ, ಮುಂಬೈನಲ್ಲಿ ತಾನು ಮಾಡಿದ್ದ ಅಪರಾಧ ಹಾಗೂ ಕೊಲೆಗಳ ಬಗ್ಗೆ ಹೇಳಿಕೊಂಡಿದ್ದರಂತೆ. ನಂತರ 1985ರಲ್ಲಿ ಸನ್ನಿ ದೇವುಲ್ ನಟನೆಯ ಅರ್ಜುನ್ ಸಿನಿಮಾದಲ್ಲಿ ದೃಶ್ಯವನ್ನು ಚಿತ್ರೀಕರಿಸಲಾಗಿತ್ತಂತೆ.
ಎರಡನೇ ಭೇಟಿಯೂ ದುಬೈನಲ್ಲೇ ಆಗಿತ್ತು
ಆತ್ಮಕತೆ ಖುಲ್ಲಂಖುಲ್ಲಾದಲ್ಲಿ ರಿಷಿ ದಾವೂದ್ ಜೊತೆ ಎರಡನೇ ಭೇಟಿಯಾಗಿದ್ದನ್ನೂ ಬರೆದುಕೊಂಡಿದ್ದಾರೆ. 1989ರಲ್ಲಿ ರಿಷಿ ಕಪೂರ್ ಹೆಂಡತಿ ನೀತು ಜತೆ ದುಬೈಗೆ ಹೋಗಿದ್ದರಂತೆ. ಆಗ ಅಲ್ಲಿ ಶಾಪಿಂಗ್ ಮಾಡಲು ಶೂಗಳ ಶೋರೂಮ್ಗೆ ಹೋದಾಗ ದಾವೂದ್ ಸಹ ಅಲ್ಲೇ ಇದ್ದರಂತೆ. ಕೈ ಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದ ದಾವೂದ್ ಅವರ ಸುತ್ತಲೂ 8 ಮಂದಿ ಬಾಡಿಗಾರ್ಡ್ಗಳಿದ್ದರಂತೆ.
ಇದನ್ನೂ ಓದಿ: Rishi Kapoor Filmography: ನೋವಲ್ಲೂ ನಗುವುದನ್ನು ಕಲಿಸಿದ್ದ ರಿಷಿ ಕಪೂರ್ ಇನ್ನಿಲ್ಲ..!
ಆಗಲೂ ರಿಷಿ ಕಪೂರ್ ಅವರನ್ನು ನೋಡಿದ ದಾವೂದ್ ಏನು ಬೇಕಾದರೂ ಖರೀದಿಸುಂತೆ ಆಫರ್ ಕೊಟ್ಟಿದ್ದಂತೆ. ಆದರೆ ಆಗಲೂ ರಿಷಿ ಕಪೂರ್ ನಮ್ರತೆಯಿಂದಲೇ ಬೇಡ ಎಂದಿದ್ದಾರೆ. ದಾವೂದ್ ತಮ್ಮ ಮೊಬೈಲ್ ನಂಬರ್ ಸಹ ನೀಡಿದ್ದರಂತೆ. ಆದರೆ ರಿಷಿ ಕಪೂರ್ ಅವರಿಗೆ ತಮ್ಮ ನಂಬರ್ ನೀಡಲಾಗಲಿಲ್ಲ. ಕಾರಣ ಆಗ ಭಾರತದಲ್ಲಿ ಮೊಬೈಲ್ ಬಳಕೆ ಇನ್ನೂ ಆರಂಭವಾಗಿರಲಿಲ್ಲ.
![Rishi Kapoor Married his Best Friend Neetu Singh interesting Love Story]()
ರಿಷಿ ಕಪೂರ್- ನೀತು ಸಿಂಗ್
ದಾವೂದ್ಗೆ ಭಾರತದ ಬಗ್ಗೆ ಇದ್ದ ದೃಷ್ಟಿಕೋನದ ವಿಷಯದಲ್ಲಿ ನನಗೆ ತುಂಬಾ ಗೊಂದಲ ಇತ್ತು. ಇದಾದ ನಂತರ ಎಲ್ಲವೂ ಬದಲಾಗತೊಡಗಿತ್ತು. ನನಗೆ ಗೊತ್ತಿರಲಿಲ್ಲ ದಾವೂದ್ ರನ್ನು ಎಷ್ಟು ದೇಶಗಳು ಹೊರ ಹಾಕಿವೆ ಎಂದು. ಇದಾದ ನಂತರ ಮತ್ತೆ ಎಂದೂ ದಾವೂದ್ ಅವರನ್ನು ಭೇಟಿಯಾಗಲಿಲ್ಲ. ಅವರೊಂದಿಗೆ ಮಾತನಾಡಲಿಲ್ಲ ಎಂದು ರಿಷಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ರಿಷಿ ಕಪೂರ್: ಅಂತಿಮ ನಮನ ಸಲ್ಲಿಸಿದ ನೀತು-ರಣಬೀರ್ ಕಪೂರ್
ರಿಷಿ ಕಪೂರ್ ಅವರ ಆತ್ಮಚರಿತ್ರೆ ಖುಲ್ಲಂಖುಲ್ಲಾ ಬಿಡುಗಡೆಯಾದಾಗ ದಾವೂದ್ ಭೇಟಿ ವಿಷಯದಿಂದಾಗಿ ವಿವಾದಕ್ಕೀಡಾಗಿದ್ದರು. ಆಗ ದಾವೂದ್ ಭೇಟಿ ಬಗ್ಗೆ ಇಷ್ಟು ದಿನಗಳವರೆಗೆ ರಿಷಿ ಮೌನವಹಿಸಿದ್ದೇಕೆ.... ಪೊಲೀಸರಿಗೆ ಏಕೆ ತಿಳಿಸಲಿಲ್ಲ ಎಂಬ ಪ್ರಶ್ನೆಗಳೂ ಎದ್ದಿದ್ದವು.
Irrfan Khan: ಮನೆಯಲ್ಲಿ ಸಿನಿಮಾ ನೋಡಲು ನಿರ್ಬಂಧವಿದ್ದರೂ ಜನ ಮೆಚ್ಚಿದ ನಟನಾದ ಇರ್ಫಾನ್ ಖಾನ್ ಇನ್ನು ನೆನಪು ಮಾತ್ರ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ