ಗುರು ಶಿಷ್ಯರು ಎಂದ ಕೂಡಲೆ ನೆನಪಾಗೋದು ಹಿರಿಯ ನಟ ದ್ವಾರಕೀಶ್. ದ್ವಾರಕೀಶ್ ವರ ಈ ಎಪಿಕ್ ಸಿನಿಮಾದ ಶೀರ್ಷಿಕೆಯನ್ನು ಈಗ ಮತ್ತೆ ಬಳಸಿಕೊಂಡು ಚಿತ್ರ ನಿರ್ಮಿಸಲಾಗುತ್ತಿದೆ. 1981ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಇದಾಗಿದ್ದು, ಈಗ ಇದೇ ಶೀರ್ಷಿಕೆಯಲ್ಲಿ ಹೊಸ ಚಿತ್ರ ಸೆಟ್ಟೇರಿದೆ. ಹೌದು, ನಿರ್ದೇಶಕ ತರುಣ್ ಸುಧೀರ್ ಇದೇ ಮೊದಲ ಬಾರಿಗೆ ಗುರು ಶಿಷ್ಯರು ಚಿತ್ರದ ಮೂಲಕ ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ನಟ ಶರಣ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾ ಟೈಟಲ್ ಟೀಸರ್ ಅನ್ನು ನಟ ದ್ವಾರಕೀಶ್ ಅವರ ಕೈಯಲ್ಲಿ ರಿಲೀಸ್ ಮಾಡಿಸಲಾಗಿತ್ತು. ಲಡ್ಡು ಫಿಲ್ಮ್ಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ಸ್ ಈ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಶರಣ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ಸಹ ನಿರ್ಮಾಪಕರೂ ಕೂಡ.
ಶರಣ್ ನಾಯಕನಾಗಿ ನಟಿಸುತ್ತಿರುವ ಗುರು ಶಿಷ್ಯರು ಸಿನಿಮಾದ ಟೈಟಲ್ ಟೀಸರ್ ಅನ್ನು ನಟ ದ್ವಾರಕೀಶ್ ಅವರ ಕೈಯಲ್ಲೇ ಬಿಡುಗಡೆ ಮಾಡಿಸಿದ್ದು ವಿಶೇಷ. ಇನ್ನು, ಈ ವರ್ಷ ಜೆಂಟಲ್ ಮನ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶಕ ಜಡೇಶ್ ಹಂಪಿ ಅವರು ಈ ಗುರು ಶಿಷ್ಯರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
View this post on Instagram
View this post on Instagram
The hunt for our #Shishyaru has now started! Excited to bring aboard some fine teenage talent to the team. Audition details provided in the snapshots 😊
ಶಿಷ್ಯರಿಗಾಗಿ ಹುಡುಕಾಟ 😎 ಹೆಚ್ಚಿನ ವಿವರಗಳು ಕೆಳಕಂಡ ಪೋಸ್ಟರ್ ನಲ್ಲಿ ಲಭ್ಯ! #GuruShishyaru @realSharaan @aanandaaudio pic.twitter.com/pkiUh1yr0s
— Tharun Sudhir (@TharunSudhir) December 23, 2020
ಇದನ್ನೂ ಓದಿ: ಅಜ್ಜಿ ಮನೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿರುವ ರಾಬರ್ಟ್ ಕ್ವೀನ್ ಆಶಾ ಭಟ್..!
ಬಿ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು, ಆರೂರು ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಲಡ್ಡು ಸಿನಿಮಾ ಹೌಸ್, ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ನ ಸಿನಿಮಾ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ