KuruKshetra: ಸಾಗರದಾಚೆಯೂ ದುರ್ಯೋಧನನ ಅಬ್ಬರ: ವಿದೇಶದಲ್ಲಿ ಕುರುಕ್ಷೇತ್ರ ವೀಕ್ಷಿಸಿದ ಡಿಬಾಸ್​ ಅಭಿಮಾನಿಗಳು..!

Kurukshetra: ಚಾಲೆಂಜಿಂಗ್ ಸ್ಟಾರ್, ಡಿಬಾಸ್ ದುರ್ಯೋಧನನ ಅವತಾರಕ್ಕೆ ಕನ್ನಡಿಗರ ಜತೆಗೆ ತೆಲುಗು  ಪ್ರೇಕ್ಷಕರೂ ಉಘೇ ಉಘೇ ಅಂತಿದ್ದಾರೆ. ಹಸ್ತಿನಾಪುರದ ರಾಜನ ದರ್ಬಾರು ರಾಜ್ಯದ ಜತೆಗೆ ಆಂಧ್ರ ಹಾಗೂ ತೆಲಂಗಾಣದಲ್ಲೂ ನಡೆಯುತ್ತಿದೆ.

Anitha E | news18
Updated:August 13, 2019, 3:18 PM IST
KuruKshetra: ಸಾಗರದಾಚೆಯೂ ದುರ್ಯೋಧನನ ಅಬ್ಬರ: ವಿದೇಶದಲ್ಲಿ ಕುರುಕ್ಷೇತ್ರ ವೀಕ್ಷಿಸಿದ ಡಿಬಾಸ್​ ಅಭಿಮಾನಿಗಳು..!
ಕೆನಡಾದಲ್ಲಿ ಕುರುಕ್ಷೇತ್ರ ವೀಕ್ಷಿಸಿದ ಪ್ರೇಕ್ಷಕರು
  • News18
  • Last Updated: August 13, 2019, 3:18 PM IST
  • Share this:
ಸ್ಯಾಂಡಲ್​ವುಡ್​ನ ಭಾರೀ ಬಜೆಟ್​ ಸಿನಿಮಾ `ಕುರುಕ್ಷೇತ್ರ'ದ ಹವಾ ಕರುನಾಡ ಗಡಿ ದಾಟಿದೆ. ಪಕ್ಕದ ಆಂಧ್ರ, ತೆಲಂಗಾಣಗಳಲ್ಲೂ ಅಜಾನುಬಾಹು ದುರ್ಯೋಧನನ ಮೆರವಣಿಗೆ ಅದ್ಧೂರಿಯಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲ, ಸಾಗರದಾಚೆಯೂ ಕೌರವೇಶ್ವರನಿಗೆ ಚಿತ್ರಪ್ರೇಮಿಗಳು ಬಹುಪರಾಕ್ ಹೇಳ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್, ಡಿಬಾಸ್ ದುರ್ಯೋಧನನ ಅವತಾರಕ್ಕೆ ಕನ್ನಡಿಗರ ಜತೆಗೆ ತೆಲುಗು  ಪ್ರೇಕ್ಷಕರೂ ಉಘೇ ಉಘೇ ಅಂತಿದ್ದಾರೆ. ಹಸ್ತಿನಾಪುರದ ರಾಜನ ದರ್ಬಾರು ರಾಜ್ಯದ ಜತೆಗೆ ಆಂಧ್ರ ಹಾಗೂ ತೆಲಂಗಾಣದಲ್ಲೂ ನಡೆಯುತ್ತಿದೆ.

'Biggest Blockbuster of Kannada Film Industry'


Loading...

ಇಷ್ಟಕ್ಕೇ ಕೌರವೇಶ್ವರನ ಅಬ್ಬರ ನಿಂತಿಲ್ಲ. ಸಾಗರದಾಚೆಯ ಬಾಕ್ಸಾಫಿಸ್‍ನಲ್ಲೂ ದುರ್ಯೋಧನ ಗಜ ಗಾಂಭಿರ್ಯದ ಹೆಜ್ಜೆ ಇಟ್ಟಿದ್ದಾನೆ. ಆಸ್ಟ್ರೇಲಿಯಾ, ಕೆನಡಾದಲ್ಲೂ ತನ್ನ ಪವರ್ ಏನಂತ ತೋರಿಸಿದ್ದಾನೆ ಅಜಾನುಬಾಹು ಸುಯೋಧನ.

ಇದನ್ನೂ ಓದಿ: ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

ಕೆನಡಾದ ಚಿತ್ರಮಂದಿರಗಳಲ್ಲೂ ಕನ್ನಡದ ಸಿನಿ ಪ್ರೇಕ್ಷಕರು ದುರ್ಯೋಧನನ ಫೋಟೋವನ್ನು ಫ್ರೇಮ್​ ಮಾಡಿಸಿ, ಅದಕ್ಕೆ ಹೂವಿನ ಹಾರ ಹಾಕಿ ಜೈ ಕಾರ ಹಾಕಿದ್ದಾರೆ.

ಕೆನಡಾದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಕುರುಕ್ಷೇತ್ರ ಕ್ರೇಜ್ 👌👌👌@Dcompany171 @meghanasraj @HariPrriya6 @RocklineEnt @sharadasrinidhi @Kkbdfa @DBossFc171 @Chandana_vana pic.twitter.com/mkU9wXI9Euಆಗಸ್ಟ್​ 15ಕ್ಕೆ ತಮಿಳಿನಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ಕಾಲಿವುಡ್ ಪ್ರೇಕ್ಷಕರು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೆ ಮಲಯಾಳಂ ಹಾಗೂ ತಮಿಳಿನಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆ ಕಾಣಲಿದೆ. ಇನ್ನು ಹಿಂದಿಯಲ್ಲಿ 'ಕುರುಕ್ಷೇತ್ರ' ಯಾವಾಗ ತೆರೆಗಪ್ಪಳಿಸಲಿದೆ ಎಂದು ಇನ್ನೂ ಗೊತ್ತಾಗಿಲ್ಲ.

#Kurukshethram #Kurukshetram Chennai city & Chengalpet theatre listing ರಾಜ್ಯದ ಹಲವೆಡೆ ವರುಣದೇವ ಪ್ರವಾಹದ ರೂಪದಲ್ಲಿ  ರುದ್ರ ನರ್ತನ ತೋರುತ್ತಿದ್ದಾನೆ. ಅರ್ಧ ರಾಜ್ಯ ಜಲಪ್ರಳಯದಲ್ಲಿ ಮುಳುಗಿದೆ. ಲಕ್ಷಾಂತರ ಜನರ ಬದುಕು ನೀರಲ್ಲಿ ಕೊಚ್ಚಿ ಹೋಗಿದೆ. ಪರಿಸ್ಥಿತಿ ಈ ಮಟ್ಟಕ್ಕೆ ಭೀಕರವಾಗಿದ್ದಾಗಲೂ 'ಕುರುಕ್ಷೇತ್ರ' ಬಾಕ್ಸಾಫಿಸ್‍ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ.

ಇದನ್ನೂ ಓದಿ: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...