Atrangi Re Trailer: ಒಬ್ಬ ಸಾಲಲ್ಲ, ಇಬ್ಬರೂ ಬೇಕು ಎನ್ನುತ್ತಿರುವ Sara Ali Khan, ಬಾಲಿವುಡ್​​ನಲ್ಲಿ Dhanush ಮೋಡಿ!

Trailer of Atrangi Re: ತಮಿಳು ನಟ ಧನುಷ್, ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಜೊತೆಯಾಗಿ ನಟಿಸಿರುವ ಅತ್ರಂಗಿ ರೇ ಚಿತ್ರದ ಟ್ರೇಲರ್ ನೋಡಿದವ್ರೆಲ್ಲಾ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಕಾಯ್ತಾ ಇದ್ದಾರೆ. ಅಂಥಾ ಮಸ್ತ್ ಎಂಟರ್​ಟೇನಿಂಗ್ ಆಗಿರೋ ಟ್ರೇಲರ್ ನೀವೂ ನೋಡಿ...

ಅತ್ರಂಗಿ ರೇ ಸಿನಿಮಾ ಪೋಸ್ಟರ್

ಅತ್ರಂಗಿ ರೇ ಸಿನಿಮಾ ಪೋಸ್ಟರ್

  • Share this:
ಸಾರಾ ಅಲಿ ಖಾನ್ (Sara Ali Khan), ಅಕ್ಷಯ್ ಕುಮಾರ್ (Akshay Kumar) ಮತ್ತು ಧನುಷ್ (Dhanush) ಅಭಿನಯದ ಅತ್ರಂಗಿ ರೇ (Atrangi Re) ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದ್ದು, ಆ 3 ತಾರೆಯರ ಸಹಜ ಅಭಿನಯ ಅಭಿಮಾನಗಳ ಮನಗೆದ್ದಿದೆ. ಸಾರಾ, ಎರಡು ಜಗತ್ತುಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ರಿಂಕು ಎಂಬ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದು, ಟ್ರೇಲರ್‌ನಲ್ಲಿ (Trailer) ಕಾಣಿಸುತ್ತಿರುವ ಝಲಕ್‍ಗಳಲ್ಲದೆ, ಇನ್ನಷ್ಟು ಅತರಂಗಿ ಅಂಶಗಳನ್ನು ಈ ಸಿನಿಮಾದಲ್ಲಿ ಕಾಣಬಹುದು ಎಂದು ಅತ್ರಂಗಿ ರೇ ನಿರ್ದೇಶಕರು ಹೇಳಿದ್ದಾರೆ. ಎಲ್ಲಾ ಮೂರು ಪಾತ್ರಗಳ ಎಂಟ್ರಿ ಇಲ್ಲಿ ಉತ್ತಮವಾಗಿದೆ. ಅದರಲ್ಲೂ ಸಾರಾ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಅತರಂಗಿ ರೇ ಸಿನಿಮಾದ ಮೂಲಕ ಬಹುಕಾಲದ ಬಳಿಕ ಧನುಷ್ ಬಾಲಿವುಡ್‍ಗೆ ಮರಳಿದ್ದಾರೆ.

ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಊಹೆಯಿತ್ತು, ಆದರೆ ಇದು ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‌ನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ತಮಿಳು ನಟ ತಮಿಳಿನಲ್ಲಿ ಮಾತನಾಡುತ್ತಿರುವುದನ್ನು ಕೇಳುವುದು ಕೂಡ ಉಲ್ಲಾಸ ನೀಡುತ್ತದೆ. ನಿರ್ದೇಶಕರು ಪ್ರಾತಿನಿಧ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ತೋರಿಸುತ್ತಿದ್ದಾರೆ.

ಆನೆ ಮೇಲೆ ಅಕ್ಷಯ್ ಕುಮಾರ್

ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರದ್ದು ಅತಿ ವಾಸ್ತವಿಕತೆಯ ಪಾತ್ರವಾಗಿದ್ದು, ಪ್ರವೇಶದ ದೃಶ್ಯದಲ್ಲಿ ಅವರು ಆನೆಯ ಮೇಲೆ ಸವಾರಿ ಮಾಡುವುದು, ಬೆಂಕಿಯ ಜೊತೆ ಆಡುವ ಮ್ಯಾಜಿಕ್ ಮಾಡುವುದು ಮತ್ತು ಧರ್ಮೋಪದೇಶ ಮಾಡುವುದನ್ನು ನೋಡಬಹುದು. ಇದು ಯಾವ ಸ್ವರೂಪದ ಸಿನಿಮಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ‘ಅತರಂಗಿ’ (ಅಸಾಮಾನ್ಯ/ ಅತ್ಯದ್ಭುತ) ಪ್ರೇಮ ಕಥೆಯಾಗಿದ್ದು, “ಪರಿಶುದ್ಧ” ಆತ್ಮಗಳುಳ್ಳ ಪಾತ್ರಗಳನ್ನು ಹೊಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳು ನಟ ಧನುಷ್‌ಗೆ ಭರ್ಜರಿ ಆಫರ್‌ಗಳು: ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ

ಈ ಮೊದಲು ನಟ ಅಕ್ಷಯ್ ಕುಮಾರ್, ತಮ್ಮ ಹಾಗೂ ಧನುಷ್ ಮತ್ತು ಸಾರಾ ಪಾತ್ರಗಳ ಫಸ್ಟ್ ಲುಕ್ ಹಂಚಿಕೊಂಡಿದ್ದರು. ಸಾರಾ ರಿಂಕು ಪಾತ್ರದಲ್ಲಿ, ಧನುಷ್ ವಿಶು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾತ್ರವರ್ಗದ ನಡುವಿನ ವಯಸ್ಸಿನ ಅಂತರ

ಈ ಸಿನಿಮಾದ ನಿರ್ದೇಶಕ ಆನಂದ ಎಲ್ ರೈ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ , ಪಾತ್ರವರ್ಗದ ನಡುವಿನ ವಯಸ್ಸಿನ ಅಂತರ ತೆರೆದಿಟ್ಟರು. ಚಿತ್ರ ತಾರಾಗಣ ಘೋಷಣೆ ಮಾಡಿದಾಗಿನಿಂದ, ಸಾರಾ (26) ಮತ್ತು ನಾಯಕ ನಟರಾದ ಅಕ್ಷಯ್ (54) ಹಾಗೂ ಧನುಷ್ (38) ನಡುವಿನ ವಯಸ್ಸಿನ ಅಂತರದ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.

ವೀಕ್ಷಕರು ಈ ಕುರಿತು ತಾಳ್ಮೆಯಿಂದ ಇರಬೇಕು ಎಂದು ನಿರ್ದೇಶಕರು ಕೇಳಿಕೊಂಡಿದ್ದಾರೆ. ಅತ್ರಂಗಿ ಎಂದರೆ ತಮಾಷೆಯುಳ್ಳ ವಿಚಿತ್ರ. ನಿರ್ದೇಶಕ ಸಿನಿಮಾ ಮಾಡುವಾಗ ತಾಳ್ಮೆ ತೋರಿಸುತ್ತಿರುವಾಗ, ಜನರು ಕೂಡ ಕಾಯಬೇಕು ಮತ್ತು ಆ ಪಾತ್ರವರ್ಗ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಳ್ಳಬೇಕು ಎಂಬುವುದು ಅವನ ಸಣ್ಣ ನಿರೀಕ್ಷೆ ಆಗಿರುತ್ತದೆ.

ಸಿನಿಮಾ ನೋಡಿ, ನಂತರ ಮಾತನಾಡಿ

ನಮಗೆ ಜನರ ಬಗ್ಗೆ ತೀರ್ಮಾನಕ್ಕೆ ಬರುವ ಅಭ್ಯಾಸ ಇದೆ. ಜನರು ಎರಡು ಗಂಟೆಗಳ ಕಾಲ ಚಿತ್ರ ವೀಕ್ಷಿಸಬೇಕು ಮತ್ತು ಆ ನಂತರ ಪ್ರತಿಕ್ರಿಯೆ ನೀಡಬೇಕು ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Sara Ali Khan: ಕೇದಾರನಾಥಕ್ಕೆ ಭೇಟಿ ನೀಡಿದ ನಟಿ ಸಾರಾ ಅಲಿ ಖಾನ್​​; ಧರ್ಮವನ್ನು ಉಲ್ಲೇಖಿಸಿ ಟ್ರೋಲ್​​​​​​

ಅಕ್ಷಯ್ ಮತ್ತು ಧನುಷ್ ಜೊತೆ ಕೆಲಸ ಮಾಡುತ್ತಿರುವುದರ ಕುರಿತು ಸಾರಾ ಕೂಡ ಈ ಮೊದಲು ಮಾಧ್ಯಮದ ಜೊತೆ ಮಾತನಾಡಿದ್ದರು. “ಅಕ್ಷಯ್ ಸರ್, ನಮ್ಮ ದೇಶದ ಇಂದಿನ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು, ಆದರೂ ವಿನಮ್ರ ಮತ್ತು ಮೋಜನ್ನು ಇಷ್ಟ ಪಡುವ, ಸೆಟ್‍ಗೆ ಸಂತೋಷದಾಯಕ ಶಕ್ತಿ ನೀಡುವ ವ್ಯಕ್ತಿ. ನನಗೆ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಸೌಭಾಗ್ಯ ಎಂದಿದ್ದಾರೆ. ಯಾವ್ದಕ್ಕೂ ಟ್ರೇಲರ್ ಒಮ್ಮೆ ನೋಡಿಬಿಡಿ:ಧನುಷ್ ಒಂದು ಸಂಸ್ಥೆಯಿದ್ದಂತೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟ. ಸೆಟ್‍ನಲ್ಲಿ ಧನುಷ್‌ರನ್ನು ತಲೈವಾ ಎಂದು ಕರೆಯುತ್ತಿದ್ದೆ ಮತ್ತು ಅಕ್ಷಯ್ ಅವರನ್ನು ‘ಉತ್ತರದ ತಲೈವಾ’ ಎಂದು ಕರೆಯುತ್ತಿದ್ದೆ. ಈ ಇಬ್ಬರು ತಲೈವಾರ ಕಾರಣದಿಂದಾಗಿಯೇ, ನಾನು ಒಂದಷ್ಟು ಕೆಲಸ ಮಾಡಲು ಪ್ರಯತ್ನಿಸಿದೆ ಮತ್ತು ನಮ್ಮೆಲ್ಲರ ಸಂಯೋಜಿತ ಪ್ರಯತ್ನ ಪ್ರಶಂಸೆ ಪಡೆಯುತ್ತದೆ ಎಂಬ ನಿರೀಕ್ಷೆ ಇದೆ” ಎಂದು ಅವರು ಹೇಳಿದ್ದಾರೆ. ಅತ್ರಂಗಿ ರೇ ಸಿನಿಮಾ ಡಿಸೆಂಬರ್ 24ಕ್ಕೆ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
Published by:Soumya KN
First published: