Atrangi re Review: ಅಕ್ಷಯ್​ ಎದುರು ನಟಿಸಿ ಫುರ್ಲ್ ಮಾರ್ಕ್ಸ್​ ಪಡೆದ ಧನುಷ್: ಅಬ್ಬಬ್ಬಾ.. ಅತರಂಗಿ ರೇ ಸೂಪರ್​!

ಧನುಶ್-ಸಾರಾ ಅವರ ಅಸಾಂಪ್ರದಾಯಿಕ ಪ್ರೇಮಕಥೆಗೆ ಹೊಸ ಆಯಾಮವನ್ನೇ ಒದಗಿಸುವಂತಹ ಅಕ್ಷಯ್ ಅಭಿನಯ ಎಲ್ಲರ ಮನಗೆಲ್ಲುತ್ತದೆ

ಅತರಂಗಿ ರೇ ಸಿನಿಮಾದ ಪೋಸ್ಟರ್​​

ಅತರಂಗಿ ರೇ ಸಿನಿಮಾದ ಪೋಸ್ಟರ್​​

  • Share this:
ಆನಂದ್ ಎಲ್ ರಾಯ್‌ ನಿರ್ದೇಶನದ ಅತರಂಗಿ ರೇ (Atrangi Re) ಚಿತ್ರ ನಿಜಕ್ಕೂ ನೋಡುಗರನ್ನು ಭಾವನಾತ್ಮಕವಾಗಿ ವಶಪಡಿಸಿಕೊಳ್ಳುತ್ತದೆ. ದೃಶ್ಯವೊಂದರಲ್ಲಿ ಉತ್ಸಾಹಭರಿತನಾಗಿರುವ ವಿಶು (ಧನುಶ್) (Dhanush) ತಮಿಳಿನಲ್ಲಿ ರಿಂಕುಳಿಗೆ (ಸಾರಾ ಅಲಿ ಖಾನ್) (Sara Ali Khan) ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಚಡಪಡಿಸುತ್ತಾನೆ ಹಾಗೂ ಅಂತಿಮವಾಗಿ ಇಬ್ಬರೂ ಭಾವನಾತ್ಮಕವಾಗಿ ಅಪ್ಪಿಕೊಳ್ಳುತ್ತಾರೆ. ಆಗ ಆನೆಯ ಮೇಲಿರುವ (Elephant's Nagari) ನಗಾರಿಯಿಂದ ಸದ್ದು ಬರುತ್ತದೆ. ಇದನ್ನು ಕೇಳುತ್ತಿದ್ದಂತೆಯೇ ರಿಂಕು ತನ್ನ ಕಣ್ಣುಗಳನ್ನು ನಿಧಾನವಾಗಿ ತೆರೆಯುತ್ತ "ವಿಶು ಬಾಬು, ಸಜ್ಜಾದ್ ಆ ಗಯಾ" ಎಂದು ಹೇಳುತ್ತ ಅಪ್ಪುಗೆಯ ಬಂಧನದಿಂದ ಮುಕ್ತಳಾಗುತ್ತಾಳೆ. ಆದರೆ ವಿಶು ಮಾತ್ರ ತನ್ನನ್ನು ತಾನು ಸಂಭಾಳಿಸಿಕೊಂಡು ಭಾವನೆಗಳನ್ನು ಹಾಗೆಯೇ ಮುಕ್ತವಾಗಿ ಹೊರಹಾಕುತ್ತಾನೆ. ಈ ರೀತಿಯಾಗಿ ಚಿತ್ರೀಕರಿಸಲಾದ ಅದ್ಭುತವಾಗಿ ಮೂಡಿಬಂದ ಚಿತ್ರದ ಭಾವನಾತ್ಮಕ ದೃಶ್ಯಗಳು (Viewer) ನೋಡುಗರನ್ನು ಭಾವನೆಯ (Emotion) ಸಾಗರದಲ್ಲಿ ತೇಲಾಡಿಸುತ್ತದೆ.

ಚಿತ್ರಕಥೆ ಕುರಿತು
ಚಿತ್ರವು ರಿಂಕು (ಸಾರಾ ಅಲಿ ಖಾನ್) ಓಡುತ್ತಿರುವ ದೃಶ್ಯದಿಂದ ಪ್ರಾರಂಭವಾಗುತ್ತದೆ. ಅವಳ ಹಿಂದೆ ಕೆಲವರು ಬೆನ್ನು ಹತ್ತಿದ್ದಾರೆ. ಆದರೆ ರಿಂಕು ಅಶಕ್ತಳಲ್ಲ. ಸಾಕಷ್ಟು ಧೈರ್ಯವಂತೆ, ರೈಲು ನಿಲ್ದಾಣದಲ್ಲಿ ಗಾಜು ಮುರಿದುಕೊಂಡ ದೃಶ್ಯದಿಂದ ಹಿಡಿದು ಈ ಹಿಂದೆಯೂ ರಿಂಕು ತನ್ನ ಪ್ರೇಮಿಯಾದ ಸಾಜಿದ್ ಖಾನ್ (ಅಕ್ಷಯ ಕುಮಾರ್) ಜೊತೆ ಓಡಿಹೋಗಲು ಹಲವಾರು ಅಸಫಲವಾದ ಸಾಹಸಗಳನ್ನು ಮಾಡಿರುತ್ತಾಳೆ.

ಇದನ್ನೂ ಓದಿ: ಧನುಷ್ ಹೊಸಾ ಹಾಡು 'ಕೊಲವೆರಿ ಡಿ' ರೀತಿಯಲ್ಲೇ ಸಖತ್ ವೈರಲ್ ಆಗ್ತಿದೆ...ನೀವು ನೋಡಿದ್ದೀರಾ?

ಅವಳನ್ನು ಹೇಗಾದರೂ ಮಾಡಿ ಕಟ್ಟಿ ಹಾಕಬೇಕೆಂದು ರಿಂಕುಳ ಅಜ್ಜಿ (ಸೀಮಾ ಬಿಸ್ವಾಸ್) ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾಳೆ. ಕೊನೆಗೆ ತಮಿಳು ನಾಡಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಅಭ್ಯಾಸ ಮಾಡುತ್ತಿರುವ ವಿಶುವಿನೊಂದಿಗೆ ಬಲವಂತವಾಗಿ ಅವಳ ಮದುವೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿಶು ಸಹ ತನ್ನ ಕಾಲೇಜಿನ ಡೀನ್ ಮಗಳಾದ ಮ್ಯಾಂಡಿಯೊಂದಿಗೆ ಮದುವೆಯಾಗುವುದರಲ್ಲಿರುತ್ತಾನೆ.

ವಿಚಿತ್ರ ತಿರುವು
ಮದುವೆಯ ನಂತರ, ವಿಶು ತನ್ನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಹಾಸ್ಟೆಲ್‌ಗೆ ಮರಳುತ್ತಾನೆ. ಅವನ ಪತ್ನಿಯಾಗಿ ರಿಂಕು ದೆಹಲಿಯಲ್ಲಿ ವಾಸಿಸಲು ಪ್ರಾರಂಭಿಸುತ್ತಾಳೆ. ಈ ನಡುವೆ ನಡೆಯುವ ಹಲವಾರು ಘಟನೆಗಳು ವಿಶು - ರಿಂಕುಳ ಬಗ್ಗೆ ನಿಧಾನವಾಗಿ ಭಾವನೆಗಳನ್ನು ಹೊಂದಲು ಕಾರಣವಾಗುತ್ತವೆ. ಆದರೆ, ವಿಶುವಿನ ಈ ಪ್ರೇಮಕಥೆಯು ನಿರೀಕ್ಷಿಸದ ಘಟನೆಯೊಂದರಿಂದ ವಿಚಿತ್ರ ತಿರುವು ಪಡೆದುಕೊಳ್ಳುತ್ತದೆ. ಆ ತಿರುವು ಏನು ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ಅದ್ಭುತವಾದ ಅಭಿನಯ
ಇನ್ನು, ಅಭಿನಯಕ್ಕೆ ಬಂದರೆ ನಿರ್ದೇಶಕ ಆನಂದ್ ಎಲ್ ರಾಯ್‌ ಈ ಚಿತ್ರದ 3 ಘಟಾನುಘಟಿ ನಟರಿಂದ ಅದ್ಭುತವಾದ ಅಭಿನಯವನ್ನು ಹೊರತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಿಸಿಕೆಗಳು, ಸ್ವಯಂ ಭ್ರಾಂತಿಗಳಂತಹ ಭಾವನೆಗಳನ್ನು ಮೂರೂ ನಟರು ಅದ್ಭುತವಾಗಿ ಅನಾವರಣಗೊಳಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರು ಮಾನಸಿಕ ಆರೋಗ್ಯ ನಿಭಾಯಿಸಿರುವ ರೀತಿಯೂ ಸಹ ಆಸಕ್ತಿಕಾರಕವಾಗಿದೆ. ಚಿತ್ರಕಥೆಯು ಹಲವು ನಗಿಸುವ ಅಂಶಗಳನ್ನು ಹೊಂದಿದ್ದು ಖಂಡಿತ ಅವು ನೋಡುಗರಿಗೆ ಮೋಸ ಮಾಡುವುದಿಲ್ಲ.

ಪ್ರೀತಿಗೆ ಗೆಲುವು
ಆದರೆ ವಿರಾಮದ ನಂತರ ಚಿತ್ರದ ಕಥೆಯು ಕೊಂಚ ಜಟಿಲವಾಗಿ ಕಂಡುಬರುತ್ತದಾದರೂ ಕೊನೆ ಘಳಿಗೆಯಲ್ಲಿ ಆನಂದ್ ಎಲ್ ರಾಯ್‌ ನೋಡುಗರ ಕಣ್ಣುಗಳೂ ಸಹ ಒದ್ದೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ, ಚಿತ್ರದ ಮೂಲಕ 'ಪ್ರೀತಿಯು ಎಲ್ಲ ಅಡೆ-ತಡೆಗಳಿಂದಲೂ ಗೆಲ್ಲುತ್ತದೆ' ಎಂಬ ಸಂದೇಶ ಕೊಡುತ್ತಾರೆ.

ಈ ಮುಂಚೆ ರಾಯ್‌ 2018ರಲ್ಲಿ ಶಾರೂಕ್ ಖಾನ್ ಮುಖ್ಯ ಪಾತ್ರದಲ್ಲಿದ್ದ ಜೀರೋ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಾರೂಕ್ ಕುಬ್ಜನ ರೂಪದಲ್ಲಿರುವ ಪಾತ್ರವನ್ನು ನಿರ್ದೇಶನ ಮಾಡಿದ್ದರು ರಾಯ್‌. ಆದರೆ ಈ ಚಿತ್ರ ಯಶಸ್ಸು ಕಂಡಿರಲಿಲ್ಲ. ಈಗ ರಾಯ್‌ ಅತರಂಗಿ ರೇ ಮೂಲಕ ಯಶಸ್ಸನ್ನು ಪಡೆಯುವ ಹಾದಿಯಲ್ಲಿದ್ದಾರೆ.

ಅಭಿನಯ ಪ್ರದರ್ಶನ
ಇಷ್ಟವಿಲ್ಲದ ವರ ಇರಲಿ ಅಥವಾ ಪ್ರೀತಿಯಲ್ಲಿ ಮುಳುಗಿದ ಪುರುಷ ಇರಲಿ ಎಲ್ಲ ರೀತಿಯ ಪಾತ್ರಗಳಲ್ಲಿ ಧನುಶ್ ತಮ್ಮ ಪರಿಣಾಮಕಾರಿಯಾದ ಅಭಿನಯದಿಂದ ಮಿಂಚುತ್ತಾರೆ. ರಾಂಝಾನಾದಿಂದ ಹಿಡಿದು ಅತರಂಗಿ ರೇ ವರೆಗೆ ಧನುಶ್ ಬಾಲಿವುಡ್‌ನಲ್ಲಿ ದೀರ್ಘ ನಡಿಗೆಯನ್ನೇ ನಡೆದಿದ್ದಾರೆ. ಅವರ ಅಭಿನಯದಲ್ಲಿ ಹೆಚ್ಚು ಹೆಚ್ಚು ವೃದ್ಧಿಯಾಗುತ್ತಿರುವುದನ್ನೇ ಕಾಣಬಹುದು.

ಇದನ್ನೂ ಓದಿ: Sarah Ali Khan: ಈ ರೀತಿಯ ಹುಡುಗ ಸಿಕ್ಕರೆ ಸಾರಾ ಅಲಿ ಖಾನ್ ಈಗ್ಲೇ ಮದುವೆಯಾಗ್ತಾರಂತೆ, ಹುಡುಗರು ಸ್ವಲ್ಪ ಇತ್ತ ನೋಡಿ...

ನಂತರ ನಿಮಗೆ ಅಚ್ಚರಿ ಮೂಡಿಸುವವರ ಸರದಿ ಸಾರಾ ಅಲಿ ಖಾನ್. ಅತಿ ಕಡಿಮೆ ಅವಧಿಯಲ್ಲಿ ಸಾರಾ ಒಬ್ಬ ಅದ್ಭುತ ಪ್ರತಿಭೆಯಿರುವ ನಟಿಯಾಗಿ ಕಂಡುಬರುತ್ತಾರೆ. ಅವಳಲ್ಲಿರುವ ವಿಶ್ವಾಸದಿಂದ ಕೂಡಿರುವ ನಟನೆ ಧನುಶ್ ನಟನೆಯೊಂದಿಗೆ ಪೂರಕವಾಗಿ ಕಂಡುಬರುತ್ತದೆ. ಕೇವಲ ಅಭಿನಯವಲ್ಲದೆ ಉತ್ತಮ ನೃತ್ಯಗಾರ್ತಿಯಾಗಿಯೂ ಸಾರಾ ಗಮನಸೆಳೆಯುತ್ತಾರೆ. ಮೂರನೆಯದ್ದಾಗಿ ಖಿಲಾಡಿ ಅಕ್ಷಯ್‌ ಕುಮಾರ್ ತಮ್ಮ ಶ್ರೀಮಂತ ಅನುಭವದ ಅದ್ಭುತ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಧನುಶ್-ಸಾರಾ ಅವರ ಅಸಾಂಪ್ರದಾಯಿಕ ಪ್ರೇಮಕಥೆಗೆ ಹೊಸ ಆಯಾಮವನ್ನೇ ಒದಗಿಸುವಂತಹ ಅಕ್ಷಯ್ ಅಭಿನಯ ಎಲ್ಲರ ಮನಗೆಲ್ಲುತ್ತದೆ.
Published by:vanithasanjevani vanithasanjevani
First published: