Lion: ಲೀಕ್​ ಆಯ್ತು ಶಾರುಖ್ ನಟನೆಯ ಮತ್ತು ಅಟ್ಲೀ ನಿರ್ದೇಶನದ ಚಿತ್ರದ ಟೈಟಲ್​..!

ಕಾಲಿವುಡ್​ ನಿರ್ದೇಶಕ ಅಟ್ಲೀ ಕುಮಾರ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್​ ಕುರಿತಾದ ಮಾಹಿತಿಯೊಂದು ಈಗ ಹೊರ ಬಿದ್ದಿದೆ.

ಕಾಲಿವುಡ್​ ನಿರ್ದೇಶಕ ಅಟ್ಲೀ ಕುಮಾರ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್​ ಕುರಿತಾದ ಮಾಹಿತಿಯೊಂದು ಈಗ ಹೊರ ಬಿದ್ದಿದೆ.

ಕಾಲಿವುಡ್​ ನಿರ್ದೇಶಕ ಅಟ್ಲೀ ಕುಮಾರ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್​ ಕುರಿತಾದ ಮಾಹಿತಿಯೊಂದು ಈಗ ಹೊರ ಬಿದ್ದಿದೆ.

  • Share this:
ಸಾಮಾನ್ಯವಾಗಿ ಎಲ್ಲ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಮುಂದಿನ ಚಿತ್ರ ಯಾವುದು, ಚಿತ್ರೀಕರಣಕ್ಕೆ ಯಾವ ದೇಶಕ್ಕೆ ಹೋಗಿದ್ದಾರೆ ಮತ್ತು ಚಿತ್ರಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ ಮತ್ತು ಚಿತ್ರದ ಹೆಸರು ಏನು ಎನ್ನುವಂತಹ ಹಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕೆಂದು ಅಭಿಮಾನಿಗಳು ಹಾತೊರೆಯುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ನಟ ಶಾರುಖ್ ಖಾನ್  (Shah Rukh Khan) ಅವರ ಮುಂದಿನ ಚಿತ್ರದ ಬಗ್ಗೆ ತುಂಬಾನೇ ಕುತೂಹಲದಿಂದ ಕಾಯುತ್ತಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಮೊದಲ ಬಾರಿಗೆ ತಮಿಳು ಚಿತ್ರರಂಗದ ನಿರ್ದೇಶಕರಾದ ಅಟ್ಲೀ ಕುಮಾರ್ (Atlee Kumar) ಹಿಂದಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ನ ಚಿತ್ರೀಕರಣವನ್ನು ನಟಿ ನಯನತಾರಾ (Nayanthara) ಅವರೊಂದಿಗೆ ಶಾರುಖ್ ಖಾನ್ ಪ್ರಸ್ತುತ ಪುಣೆಯಲ್ಲಿ ಮಾಡುತ್ತಿದ್ದಾರೆ. ಅರ್ಧ ದಶಕದ ಕಾಲ ತಮಿಳು ಸಿನಿಮಾದಲ್ಲಿ ಬ್ಲಾಕ್ ಬಸ್ಟರ್‌ಗಳನ್ನು ನೀಡಿದ ನಂತರ ಅಟ್ಲೀ ಮೊಟ್ಟ ಮೊದಲ ಬಾರಿಗೆ ಹಿಂದಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಪುಣೆ ನಗರದ ಮೆಟ್ರೋ ನಿಲ್ದಾಣದಲ್ಲಿ ಅಟ್ಲೀ ನಿರ್ದೇಶನದ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದ್ದು, ನಟ ಶಾರುಖ್ ಖಾನ್​ ಮತ್ತು ನಟಿ ನಯನತಾರಾ ಚಿತ್ರೀಕರಣದಲ್ಲಿ ಭಾಗಿಯಾಗಿರುವಂತಹ ಕೆಲವು ಫೋಟೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮನೋಬಾಲಾ ವಿಜಯಬಾಲನ್ಅವರು ತಮ್ಮ ಟ್ವಿಟ್ಟರ್‌ನಲ್ಲಿ ಈ ಚಿತ್ರದ ಬಗೆಗಿನ ಕೆಲವು ವಿಚಾರಗಳು ಬಹಿರಂಗಪಡಿಸುವಂತಹ ಒಂದು ಪತ್ರದ ಫೋಟೋ ಹಂಚಿಕೊಂಡಿದ್ದಾರೆ.ಶಾರುಖ್ ಖಾನ್ ಹಾಗೂ ನಯನತಾರಾ ಅಭಿನಯದ ಚಿತ್ರಕ್ಕೆ 'ಲಯನ್' ಎಂದು ಹೆಸರಿಡಲಾಗಿದೆಯಂತೆ. ಈ ಪತ್ರದ ಪ್ರಕಾರ ಅಟ್ಲೀ ನಿರ್ದೇಶನದ ಮತ್ತು ಶಾರುಖ್ ನಟನೆಯ ಮುಂದಿನ ಚಿತ್ರದ ಹೆಸರು ‘ಲಯನ್’ ಎಂದು ಚಿತ್ರ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ತಲೆ ಮೇಲೆ ಕೈ ಹೊತ್ತು ಕುಳಿತ ಕಣ್ಸನ್ನೆ ಹುಡುಗಿ Priya Prakash Varrier

ಈ ಚಿತ್ರದಲ್ಲಿ ಶಾರುಖ್ ಮತ್ತು ನಯನತಾರಾ ಅವರೊಂದಿಗೆ ನಟಿಯರಾದ ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಮತ್ತು ನಟ ಸುನಿಲ್ ಗ್ರೋವರ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಪತ್ರವು ನಿಜವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟತೆ ಇಲ್ಲ ಅಥವಾ 'ಲಯನ್' ಚಿತ್ರಕ್ಕೆ ಚಿತ್ರೀಕರಣದ ವೇಳೆಯಲ್ಲಿ ಇಡಲಾದ ಹೆಸರಾಗಿದೆಯೇ ಎನ್ನುವುದರ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.

ಶಾರುಖ್ ಖಾನ್ ಇದರ ನಂತರ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ‘ಪಠಾಣ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಈ ಚಿತ್ರದ ತಯಾರಕರು ಯಶ್ ರಾಜ್ ಫಿಲ್ಮ್ಸ್ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಇದನ್ನೂ ಓದಿ: ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿದ್ರಾ Samantha Akkineni: ನಟಿಯ ಮದುವೆ ದಿನವನ್ನು ನೆನಪಿಸುತ್ತೆ ಈ ಚಿತ್ರಗಳು..!

2018 ರಲ್ಲಿ ನಟಿಯರಾದ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಅವರೊಂದಿಗಿನ 'ಝೀರೋ' ಚಿತ್ರದಲ್ಲಿ ಶಾರುಖ್ ನಟಿಸಿದ್ದರು. ಮೂರು ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ಸೂಪರ್ ಸ್ಟಾರ್ ಅನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ರಾಜ್​ಕುಮಾರ್ ಹಿರಾನಿ ಜೊತೆ ಸಹ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ.

ನಟ ದಳಪತಿ ವಿಜಯ್ ನಟಿಸಿದ ಅಟ್ಲೀ ಕೊನೆಯ ಬಿಡುಗಡೆಯಾದ ಚಿತ್ರ 'ಬಿಗಿಲ್' ದೊಡ್ಡ ಮಟ್ಟದಲ್ಲಿ ಚಿತ್ರ ಹಿಟ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸಹ ಅಪಾರ ಹಣ ಸಂಪಾದಿಸಿತ್ತು. ಈ ಚಿತ್ರದಲ್ಲಿ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
Published by:Anitha E
First published: