• Home
  • »
  • News
  • »
  • entertainment
  • »
  • Cinema: ಸಸ್ಪೆನ್ಸ್ ಆಗಿದ್ದ ಶಾರುಖ್-ಅಟ್ಲೀ ಕಾಂಬೋ ಸಿನಿಮಾದ ಹೆಸರು ಲೀಕ್ ಆಯ್ತಾ? ಬಹುನಿರೀಕ್ಷಿತ ಆ ಚಿತ್ರ ಯಾವುದು?

Cinema: ಸಸ್ಪೆನ್ಸ್ ಆಗಿದ್ದ ಶಾರುಖ್-ಅಟ್ಲೀ ಕಾಂಬೋ ಸಿನಿಮಾದ ಹೆಸರು ಲೀಕ್ ಆಯ್ತಾ? ಬಹುನಿರೀಕ್ಷಿತ ಆ ಚಿತ್ರ ಯಾವುದು?

ಶಾರುಖ್ ಮತ್ತು ಅಟ್ಲೀ

ಶಾರುಖ್ ಮತ್ತು ಅಟ್ಲೀ

ದಕ್ಷಿಣ ಭಾರತದ ನಿರ್ದೇಶಕ ಅಟ್ಲೀ ಅವರೊಂದಿಗಿನ ಅವರ ಮುಂದಿನ ಹೆಸರಿಡದ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾನೇ ಉತ್ಸುಕರಾಗಿದ್ದಾರೆ. ಅಟ್ಲೀ ಅವರ ಮುಂದಿನ ಚಿತ್ರದಲ್ಲಿ, ಶಾರುಖ್ ನಟಿ ನಯನತಾರಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ ದೊಡ್ಡ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದೆ.

ಮುಂದೆ ಓದಿ ...
  • Share this:

ಬಾಲಿವುಡ್ ನ (Bollywood) ಬಾದಷಾ ಅಂತಲೇ ಖ್ಯಾತಿಯಾಗಿರುವ ಶಾರುಖ್ ಖಾನ್ (Shah Rukh Khan) ಅವರ ಚಿತ್ರ ಬಿಡುಗಡೆ ಆಗುತ್ತದೆ ಎಂಬ ಸುದ್ದಿ ತಿಳಿದರೆ ಸಾಕು ಅವರ ಅಭಿಮಾನಿಗಳು (Fans) ತುಂಬಾನೇ ಕಾತುರತೆಯಿಂದ ಅವರ ಸಿನೆಮಾಗಾಗಿ ಎದುರು ನೋಡುತ್ತಾರೆ. ಈಗಾಗಲೇ ನಟ ಶಾರುಖ್ ಖಾನ್ ಅವರ ನಟನೆಯನ್ನು ಅಭಿಮಾನಿಗಳು ದೊಡ್ಡ ಪರದೆಯ ಮೇಲೆ ನೋಡಿ ಸಾಕಷ್ಟು ಸಮಯವಾಗಿದೆ. ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ‘ಝೀರೋ’ (Zero) ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈಗ, ಶಾರುಖ್ ಖಾನ್ ನಾಲ್ಕು ವರ್ಷಗಳ ವಿರಾಮವನ್ನು ಕೊನೆಗೊಳಿಸಲು ಸಜ್ಜಾಗಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸಿರುವ ‘ಪಠಾಣ್’ (Pataan) ನಿಂದ ಪ್ರಾರಂಭಿಸಿ ಶಾರುಖ್ ತಮ್ಮ ಕೈಯಲ್ಲಿ ಅನೇಕ ಆಸಕ್ತಿದಾಯಕ ಚಿತ್ರಗಳನ್ನು ಹೊಂದಿದ್ದಾರೆ.


ಅಟ್ಲೀ ಅವರ ಮುಂದಿನ ಚಿತ್ರದಲ್ಲಿ, ಶಾರುಖ್ ಹಾಗೂ ನಟಿ ನಯನತಾರಾ ನಟನೆ
ದಕ್ಷಿಣ ಭಾರತದ ನಿರ್ದೇಶಕ ಅಟ್ಲೀ ಅವರೊಂದಿಗಿನ ಅವರ ಮುಂದಿನ ಹೆಸರಿಡದ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾನೇ ಉತ್ಸುಕರಾಗಿದ್ದಾರೆ. ಅಟ್ಲೀ ಅವರ ಮುಂದಿನ ಚಿತ್ರದಲ್ಲಿ, ಶಾರುಖ್ ನಟಿ ನಯನತಾರಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ ದೊಡ್ಡ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದೆ.


ಮೂರು ಸಿನೆಮಾ ಬಿಡುಗಡೆಗೆ ಸಜ್ಜಾದ ಶಾರುಖ್ ಖಾನ್
ಸೂಪರ್ ಸ್ಟಾರ್ ಶಾರುಖ್ 2023 ರಲ್ಲಿ ಒಂದಲ್ಲ, ಮೂರು ಬಿಡುಗಡೆಗಳಿಗೆ ಸಜ್ಜಾಗುತ್ತಿರುವ ಕಾರಣ ಶಾರುಖ್ ಖಾನ್ ಹಿಂದೆಂದೂ ಕಾಣದ ರೀತಿಯಲ್ಲಿ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ. ಮನೋರಂಜನಾ ಮಾಧ್ಯಮಕ್ಕೆ ನೀಡಿದಂತಹ ಒಂದು ಸಂದರ್ಶನದಲ್ಲಿ ಶಾರುಖ್ ಖಾನ್ ಮತ್ತು ಅಟ್ಲೀ ಅವರ ಚಿತ್ರಕ್ಕೆ ಅಂತಿಮವಾಗಿ ಶೀರ್ಷಿಕೆ ಸಿಕ್ಕಿದೆ ಎಂದು ಹೇಳಿದ್ದಾರೆ ಮತ್ತು ಇದು ಈ ಚಿತ್ರವು 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರತ್ಯೇಕವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.


ಅಟ್ಲೀ ಅವರ ಆ ಸಿನೆಮಾದ ಹೆಸರೇನು?
ಮೂಲಗಳ ಪ್ರಕಾರ, ನಟ ಶಾರುಖ್ ಮತ್ತು ಅಟ್ಲೀ ಅವರ ಆಕ್ಷನ್ ಪ್ಯಾಕ್ಡ್ ಎಂಟರ್ಟೈನರ್ ಅನ್ನು ‘ಜವಾನ್’ ಎಂದು ಹೆಸರಿಡಲಾಗಿದೆ. "ಕನಿಷ್ಠ 25 ಶೀರ್ಷಿಕೆಗಳನ್ನು ಚರ್ಚಿಸಿದ ನಂತರ ಮತ್ತು ಪರಿಗಣಿಸಿದ ನಂತರ, ಶಾರುಖ್ ಖಾನ್ ಮತ್ತು ಅಟ್ಲೀ ತಮ್ಮ ಮುಂದಿನ ಚಿತ್ರದ ಹೆಸರನ್ನು ಅಂತಿಮ ಮಾಡಿದ್ದು ‘ಜವಾನ್’ ಎಂದು ಇರಿಸಲು ನಿರ್ಧರಿಸಿದ್ದಾರೆ" ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Karthik Jayaram: ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸುತ್ತಾರೋ ಗೊತ್ತಿಲ್ಲ, ಮದುವೆಯ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ ಜೆಕೆ 


ಇಷ್ಟೇ ಅಲ್ಲದೇ ಈ ಡೈನಾಮಿಕ್ ಜೋಡಿ ಟೀಸರ್ ನೊಂದಿಗೆ ಒಂದೆರಡು ದಿನಗಳಲ್ಲಿ ಈ ಚಿತ್ರದ ಹೆಸರು ‘ಜವಾನ್’ ಅನ್ನು ಘೋಷಿಸಲು ಸಜ್ಜಾಗಿದೆ. "ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಇದು 1 ನಿಮಿಷ 34 ಸೆಕೆಂಡುಗಳ ಸಂಪೂರ್ಣ ಸ್ವ್ಯಾಗ್ ಆಗಿದೆ. ಇದು ಇಲ್ಲಿಯವರೆಗೆ ಶಾರುಖ್ ಖಾನ್ ಅವರ ಅತ್ಯಂತ ಮಾಸ್ ಅವತಾರದಲ್ಲಿದೆ ಮತ್ತು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಈ ಒಂದೂವರೆ ನಿಮಿಷದ ಟೀಸರ್ ಮಾತ್ರ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗುವುದು ಎಂದು ಮೂಲಗಳು ಹೇಳುತ್ತವೆ.


ಇದೇ ವರ್ಷ ಸಿನೆಮಾ ಬಿಡುಗಡೆಯಾಗುವ ನಿರೀಕ್ಷೆ
ಶಾರುಖ್ ಖಾನ್ ಮತ್ತು ಅಟ್ಲೀ ಚಿತ್ರವು ಜನವರಿ ಮತ್ತು ಡಿಸೆಂಬರ್ ನಡುವೆ ಎಲ್ಲೋ ಒಂದು ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶಾರುಖ್ ಖಾನ್ ಅವರ ಜೊತೆಯಲ್ಲಿ ಈ ಚಿತ್ರದಲ್ಲಿ ಸುನಿಲ್ ಗ್ರೋವರ್ ಸಹ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಟ್ಲೀ ಅವರ ಚಿತ್ರಕಥೆಯ ಕೆಲವು ಅಂಶಗಳ ಬಗ್ಗೆ ಶಾರುಖ್ ಗೆ ಅಷ್ಟೊಂದು ಸಂತೋಷವಾಗಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಆದ್ದರಿಂದ, ಅವರು ಚಿತ್ರದಲ್ಲಿ ಕೆಲವು ಬದಲಾವಣೆಗಳಿಗೆ ಮುಂದಾದರು.


ಇದನ್ನೂ ಓದಿ:Actors: ಸ್ಮಾಲ್ ಸ್ಕ್ರೀನ್ ಟು ಸಿಲ್ವರ್ ಸ್ಕ್ರೀನ್; ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಸ್ಟಾರ್​ಗಳು


ಅದೃಷ್ಟವಶಾತ್, ಕಿಂಗ್ ಖಾನ್ ಸೂಚಿಸಿದ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಅಟ್ಲೀ ಒಪ್ಪಿದ್ದರಿಂದ ಇದೆಲ್ಲವೂ ಬಹಳ ಸೌಹಾರ್ದಯುತವಾಗಿ ನಡೆಯಿತು. ಅಂತಹ ಒಬ್ಬ ದೊಡ್ಡ ನಟನಿಂದ ಸಲಹೆಯನ್ನು ಪಡೆದಿರುವುದಕ್ಕೆ ಯುವ ನಿರ್ದೇಶಕರು ಸಂತೋಷಪಟ್ಟರು ಎಂದು ವರದಿಯಾಗಿದೆ. ಪರಿಷ್ಕೃತ ಸ್ಕ್ರಿಪ್ಟ್ ಮೂಲ ಸ್ಕ್ರಿಪ್ಟ್ ಗಿಂತ ಸಾಕಷ್ಟು ಭಿನ್ನವಾಗಿ ಕಾಣುತ್ತದೆ ಎಂದು ಮೂಲಗಳು ತಿಳಿಸಿವೆ.

Published by:Ashwini Prabhu
First published: