Atlee-Priya: ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಟ್ಲಿ-ಪ್ರಿಯಾ ದಂಪತಿ

ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ದಂಪತಿಗಳು ತಮ್ಮ ಮೊದಲ ಕಂದನ ಆಗಮನವನ್ನು ಖಾತ್ರಿಪಡಿಸಿದ್ದು, ತಮ್ಮ ಜೀವನದ ಅತ್ಯಂತ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ದಂಪತಿಗಳು ತಮ್ಮ ಮೊದಲ ಕಂದನ ಆಗಮನವನ್ನು ಖಾತ್ರಿಪಡಿಸಿದ್ದು, ತಮ್ಮ ಜೀವನದ ಅತ್ಯಂತ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ದಂಪತಿಗಳು ತಮ್ಮ ಮೊದಲ ಕಂದನ ಆಗಮನವನ್ನು ಖಾತ್ರಿಪಡಿಸಿದ್ದು, ತಮ್ಮ ಜೀವನದ ಅತ್ಯಂತ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತಾಣದಲ್ಲಿ ಹಂಚಿಕೊಂಡಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ತಮಿಳು ಚಿತ್ರರಂಗದ (Kollywood) ಖ್ಯಾತ ಚಿತ್ರ ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ದಂಪತಿಗಳು ತಮ್ಮ ಮೊದಲ ಕಂದನ ಆಗಮನವನ್ನು ಖಾತ್ರಿಪಡಿಸಿದ್ದು, ತಮ್ಮ ಜೀವನದ ಅತ್ಯಂತ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತಾಣದಲ್ಲಿ ಹಂಚಿಕೊಂಡಿದ್ದಾರೆ. ತಂದೆ ತಾಯಿಯಾಗುತ್ತಿರುವ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಟ್ಲಿ ತಮ್ಮ ಪತ್ನಿ ಪ್ರಿಯಾ ಜೊತೆಗಿನ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಿಯಾ ಕಂದನ ಆಗಮನದೊಂದಿಗೆ ತಾಯ್ತನದ ಕಳೆಯಲ್ಲಿ ಮಿಂಚುತ್ತಿದ್ದರೆ ಪತಿ ಅಟ್ಲಿ ತದೇಕಚಿತ್ತರಾಗಿ ಪ್ರೇಮಪೂರ್ವ ನೋಟದೊಂದಿಗೆ ಪತ್ನಿಯೆಡೆಗೆ ನೋಡುತ್ತಿರುವುದು ಕಂಡುಬಂದಿದೆ.


ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ನಾವಿಬ್ಬರೂ ಕಂದನ ನಿರೀಕ್ಷೆಯಲ್ಲಿದ್ದೇವೆ ಈ ಸುದ್ದಿಯನ್ನು ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ ಹಾಗೂ ಈ ಸಮಯದಲ್ಲಿ ನಿಮ್ಮೆಲ್ಲರ ಶುಭ ಹಾರೈಕೆ ಹಾಗೂ ಆಶೀರ್ವಾದ ನಮ್ಮ ಮೇಲಿರಲಿ ಪ್ರೀತಿಯಿಂದ ಅಟ್ಲಿ ಹಾಗೂ ಪ್ರಿಯಾ ಎಂಬುದಾಗಿ ಬರೆದುಕೊಂಡಿದ್ದಾರೆ.


ಪರಸ್ಪರ ಡೇಟಿಂಗ್ ನಡೆಸಿದ್ದರು


ಶೀಘ್ರದಲ್ಲೇ ತಂದೆ ತಾಯಿಯಾಗುತ್ತಿರುವ ಪ್ರಿಯಾ ಹಾಗೂ ಅಟ್ಲಿ ದಂಪತಿಗಳು ತಾಣದಲ್ಲಿ ಹಂಚಿಕೊಂಡ ಚಿತ್ರಗಳು ಹಾಗೂ ಶುಭಸುದ್ದಿಯು ಇಂಟರ್ನೆಟ್‌ನಲ್ಲಿ ಬಹಿರಂಗಗೊಳ್ಳುತ್ತಿದ್ದಂತೆಯೇ ಸಾಕಷ್ಟು ಅಭಿಮಾನಿಗಳು, ಸೆಲೆಬ್ರಿಟಿಗಳು, ಕುಟುಂಬಸ್ಥರು ಹಾಗೂ ಸ್ನೇಹಿತ ವಲಯದವರು ದಂಪತಿಗಳಿಗೆ ಶುಭಾಶಯಗಳ ಮಳೆಯನ್ನೇ ಸುರಿಸಿದ್ದಾರೆ.


  


ಅಟ್ಲೀ ಹಾಗೂ ಪ್ರಿಯಾ 2014 ರಲ್ಲಿ ವಿವಾಹವಾದರು ಹಾಗೂ ವಿವಾಹಕ್ಕೂ ಮುನ್ನ ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡ ನಂತರವೇ ಕುಟುಂಬದವರ ಅನುಮತಿಯನ್ನು ಪಡೆದುಕೊಂಡು ಅವರ ಸಮ್ಮುಖದಲ್ಲಿಯೇ ಸಾಂಪ್ರದಾಯಿಕವಾಗಿ ವೈವಾಹಿಕ ಬಂಧನಕ್ಕೆ ಒಳಪಟ್ಟರು.


ಎಂಟನೇ ವಿವಾಹ ವಾರ್ಷಿಕೋತ್ಸವ


ಇದೆ ನವೆಂಬರ್‌ನಂದು ದಂಪತಿಗಳು ತಮ್ಮ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇದೇ ಸಮಯದಲ್ಲಿ ಅಟ್ಲೀ ಪ್ರೀತಿ ತುಂಬಿದ ಚಿತ್ರವೊಂದನ್ನು ಹಂಚಿಕೊಂಡಿದ್ದು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಹೃದಯಸ್ಪರ್ಶಿಯಾಗಿ ಶೀರ್ಷಿಕೆ ಬರೆದುಕೊಂಡಿದ್ದರು. ಇದು ನಮ್ಮಿಬ್ಬರ ಎಂಟನೇ ವಿವಾಹ ವಾರ್ಷಿಕೋತ್ಸವ ಈ ಪ್ರಯಾಣವು ನನ್ನನ್ನು ಯುವಕನಿಂದ ಸಂಭಾವಿತ ವಯಸ್ಸನ ಪಟ್ಟಕ್ಕೆ ಏರಿಸಿದೆ ಎಂದು ತಿಳಿಸಿ ಪ್ರಿಯಾ ಅವರಿಗೆ ಟ್ಯಾಗ್ ಮಾಡಿ ಕೆಲವೊಂದು ಸುಂದರ ಸಾಲುಗಳನ್ನು ಪತ್ನಿಗಾಗಿ ಬರೆದುಕೊಂಡಿದ್ದಾರೆ.











View this post on Instagram






A post shared by Priya Mohan (@priyaatlee)





ನಾವಿಬ್ಬರೂ ನಮ್ಮ ಜೀವನವನ್ನು ಹಲವಾರು ಕಷ್ಟಗಳಿಂದ ಆರಂಭಿಸಿರುವೆವು ಆದರೆ ಇದೀಗ ನಮ್ಮ ಜೀವನದಲ್ಲಿ ಇರುವ ಸಂಭ್ರಮಕ್ಕೆ ಕಾರಣ ನಿನ್ನ ತಾಳ್ಮೆ, ನೀತಿ, ನಿನ್ನಿಂದ ನಾನು ಬಹಳಷ್ಟನ್ನು ಕಲಿತಿರುವುದಾಗಿದೆ ಹಾಗೂ ಈ ಪ್ರಯಾಣ ಇನ್ನಷ್ಟು ಮುಂದುವರಿಯಬೇಕಾಗಿದೆ ನಾನು ಸಾಧಿಸಬೇಕಾದ್ದು ಬಹಳಷ್ಟಿದೆ. ಒಬ್ಬ ಸುಂದರ ಸ್ನೇಹಿತೆ ಹಾಗೂ ನನ್ನೆಲ್ಲವೂ ಆಗಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಪ್ರಿಯಾ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Shah Rukh Khan: ಶಾರುಖ್ ಈಗ ಮಹಿಳಾ ಕ್ರಿಕೆಟ್ ತಂಡದ ಮಾಲೀಕ, ಕೆರಿಬಿಯನ್​ ಲೀಗ್​ಗೂ ಕಾಲಿಟ್ಟ SRK

ತಂದೆ ತಾಯಿಯಾಗುತ್ತಿರುವ ರಾಮ್‌ಚರಣ್ ದಂಪತಿಗಳು


ಇದೇ ಸಮಯದಲ್ಲಿ ಸೂಪರ್‌ಸ್ಟಾರ್ ಚಿರಂಜೀವಿ ತಮ್ಮ ಪುತ್ರ ರಾಮ್ ಚರಣ್ ಹಾಗೂ ಸೊಸೆ ಉಪಾಸನಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಭ್ರಮದ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ. ಶ್ರೀ ಹನುಮಾನ್ ಜಿಯವರ ಆಶೀರ್ವಾದಗಳೊಂದಿಗೆ ಉಪಾಸನಾ ಹಾಗೂ ರಾಮ್‌ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ತಿಳಿಸಲು ತುಂಬಾ ಖುಷಿಯಾಗುತ್ತಿದೆ. ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ದಂಪತಿಗಳ ಮೇಲಿರಲಿ ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ ಸುರೇಖಾ ಮತ್ತು ಚಿರಂಜೀವಿ ಕೊನಿಡೇಲ, ಶೋಬನಾ ಮತ್ತು ಅನಿಲ್ ಕಾಮಿನೇನಿ ಎಂದು ಸೂಪರ್‌ಸ್ಟಾರ್ ಬರೆದುಕೊಂಡಿದ್ದಾರೆ.


ಸೆಲೆಬ್ರಿಟಿಗಳಿಂದ ಶುಭಹಾರೈಕೆಗಳು


ಈ ಸುದ್ದಿಯಿಂದ ಸಂತೋಷಭರಿತರಾದ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತಮ್ಮ ಸಂತೋಷವನ್ನು ಶುಭಹಾರೈಕೆಗಳು ಹಾಗೂ ಮೆಚ್ಚುಗೆಗಳ ಮೂಲಕ ತೋರ್ಪಡಿಸಿಕೊಂಡಿದ್ದಾರೆ. ರಾಮ್‌ಚರಣ್ ಹಾಗೂ ಉಪಾಸನಾ ದಂಪತಿಗಳಿಗೆ ಸಿನಿ ಇಂಡಸ್ಟ್ರಿಯ ಸೆಲೆಬ್ರಿಟಿಗಳು ಹಾಗೂ ಸ್ನೇಹಿತ ಬಳಗವರೂ ಶುಭ ಹಾರೈಸಿದ್ದಾರೆ.

Published by:Divya D
First published: