ನಟಿ ಹಾಗೂ ನಿರೂಪಕಿ ಶೀತ್ಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಂಡೋಸೀಟ್ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಪೋಸ್ಟರ್ ಹಾಗೂ ಟೀಸರ್ನಿಂದಲೇ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ವಿಂಡೋಸೀಟ್ನಲ್ಲಿ ಕುಳಿತು ಪ್ರೀತಿ-ಪ್ರೇಮ ಅಂತಿದ್ದಾರೆ. ಈ ಸಿನಿಮಾದ ಟೀಸರ್ ಯ್ಯೂಟೂಬ್ನಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಿಚ್ಚ ಜೊತೆಗೆ ಫ್ಯಾಂಟಮ್ ಸಿನಿಮಾದಲ್ಲಿ ನಟಿಸುತ್ತಿರುವ ನಿರೂಪ್ ಭಂಡಾರಿ ಇತ್ತ ವಿಂಡೋಸೀಟ್ನಲ್ಲೂ ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರೂಪ್ಗೆ ನಾಯಕಿಯಾಗಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗರ್ ಅಭಿನಯಿಸುತ್ತಿದ್ದಾರೆ.ವಿಂಡೋಸೀಟ್ ಮೂಲಕ ಕಥೆ ಹೇಳಲು ಹೊರಟಿರುವ ನಿರೂಪ್ ಭಂಡಾರಿ ರಘು ಎಂಬ ಮ್ಯೂಜಿಷಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಜೀವನದಲ್ಲಿ ಗಿಟಾರ್ ಮುಟ್ಟದ ನಿರೂಪ್, ಅದನ್ನೂ ಕಲಿತಿದ್ದಾರಂತೆ.
ಶೀತಲ್ ಶೆಟ್ಟಿ ಕಥೆ ಬರೆದು ನಿರ್ದೇಶಿಸುತ್ತಿರುವ ವಿಂಡೋಸೀಟ್ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತವಿದೆ. ಇನ್ನು ನಿನ್ನೆಯಷ್ಟೆ ಈ ಸಿನಿಮಾ ಅತಿ ಚೆಂದದ ಲಿರಿಕಲ್ ವಿಡಿಯೋ ಹಾಡು ರಿಲೀಸ್ ಆಗಿದೆ.
ಇನ್ನು, ಯೋಗರಾಜ್ ಭಟ್ಟರು ಬರೆದಿರುವ ಹಾಡನ್ನು ಅತಿ ಚೆಂದವಾಗಿ ಹಾಡಿದ್ದಾರೆ ಖ್ಯಾತ ಗಾಯಕ ವಿಜಯ ಪ್ರಕಾಶ್. ನಿರ್ದೇಶಕಿಯಾಗಿ ಶೀತಲ್ ಶೆಟ್ಟಿ ಅವರ ಮೊದಲ ಪ್ರಯತ್ನವೇ ಈ ವಿಂಡೋಸೀಟ್. ಇದಕ್ಕೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ