ಟೀಂ ಇಂಡಿಯಾ(Team India) ಓಪನಿಂಗ್ ಬ್ಯಾಟ್ಸ್ಮ್ಯಾನ್ ಕನ್ನಡಿಗ ಕೆ.ಎಲ್.ರಾಹುಲ್(KL Rahul) ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ(Sunil Shetty) ಅವರ ಪುತ್ರಿ ಆತಿಯಾ ಶೆಟ್ಟಿ(Athiya Shetty) ಪ್ರೀತಿಯಲ್ಲಿರುವುದು ಎಲ್ಲರಿಗೂ ಗೊತ್ತೆ ಇದೆ. ತುಂಬಾ ದಿನಗಳಿಂದ ಇವರಿಬ್ಬರ ಬಗ್ಗೆ ಗಾಸಿಪ್ಗಳು ಹರಿದಾಡುತ್ತಿದ್ದವು. ಆದರೆ, ಆತಿಯಾ ಶೆಟ್ಟಿ ಹುಟ್ಟುಹಬ್ಬದಂದು ಕೆ.ಎಲ್.ರಾಹುಲ್ ಈ ಎಲ್ಲ ಗಾಸಿಪ್(Gossip)ಗಳಿಗೆ ಬ್ರೇಕ್(Break) ಹಾಕಿದ್ದಾರೆ. ಆತಿಯಾ ಶೆಟ್ಟಿಗೆ ವಿಶ್ ಮಾಡುತ್ತಾ ಮೈ ಲೈಫ್ ಅಂತ ಪೋಸ್ಟ್ ಮಾಡಿದ್ದರು, ಇದಾದ ಬಳಿಕ ತಡಪ್ ಸಿನಿಮಾದ ಪ್ರಿಮಿಯರ್ ಶೋನಲ್ಲಿ ಸುನೀಲ್ ಶೆಟ್ಟಿ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದರು. ಅಷ್ಟೆ ಅಲ್ಲ ತಂದೆ ಸುನೀಲ್ ಶೆಟ್ಟಿ ಮುಂದೆಯೇ ಪುತ್ರಿ ಆತಿಯಾ ಶೆಟ್ಟಿ ಜೊತೆ ಪೋಸ್ ನೀಡಿದ್ದರು. ಇದನ್ನು ಕಂಡ ನೆಟ್ಟಿಗರು ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರಿಂದಲೂ ಸಮ್ಮತಿ ಸಿಕ್ಕಿದೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರೋದು ಕನ್ಫರ್ಮ್(Confirm) ಅಂತಿದ್ದಾರೆ. ಈ ಜೋಡಿ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಆದರೆ, ಈಗ ಇವರಿಬ್ಬರ ಮತ್ತೊಂದು ವಿಚಾರ ತಿಳಿದುಬಂದಿದೆ. ಪ್ರೇಮ ಹಕ್ಕಿಗಳ ಪ್ರಣಯದ ಬಗ್ಗೆ ಚರ್ಚೆ ಆಗುತ್ತಿದೆ. ಏನದು ಅಂತೀರಾ? ಮುಂದೆ ನೋಡಿ..
ರಾಹುಲ್ ಟೀ ಶರ್ಟ್ ಧರಿಸುತ್ತಿದ್ದ ಆತಿಯಾ ಶೆಟ್ಟಿ!
ಹೌದು, ಎಲ್ಲ ಪ್ರೇಮಿಗಳು ಮಾಡುವಂತೆ ಇವರೂ ಮಾಡಿದ್ದಾರೆ. ಕೆ.ಎಲ್.ರಾಹುಲ್ ಅವರ ಟೀ ಶರ್ಟ್ಗಳನ್ನು ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಇದು ತುಂಬಾ ದಿನಗಳಿಂದ ನಡೆಯುತ್ತಿದೆ. ಆದರೆ ಯಾರ ಕಣ್ಣಿಗೂ ಬಿದ್ದಿಲ್ಲ. ಇದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆ.ಎಲ್.ರಾಹುಲ್ ಹಾಕಿರುವ ಹಲವು ಟೀ ಶರ್ಟ್ಗಳನ್ನು ಆತಿಯಾ ಶೆಟ್ಟಿ ಹಾಕಿಕೊಂಡಿದ್ದಾರೆ. ಪ್ರೇಮ ಹಕ್ಕಿಗಳ ಪ್ರೀತಿ ಕಂಡು ನೆಟ್ಟಿಗರು ವಾವ್ ಹೇಳುತ್ತಿದ್ದಾರೆ. ಇಷ್ಟು ದಿನ ಎಲ್ಲವನ್ನೂ ಮುಚ್ಚಿಟ್ಟು, ಅಪ್ಪ ಪರ್ಮಿಷನ್ ಕೊಟ್ಟ ಮೇಲೆ ವೈರಲ್ ಮಾಡುತ್ತಿದ್ದೀರಾ ಎಂದು ನೆಟ್ಟಗರು ತಮಾಷೆಯಾಗಿ ಅವರ ಕಾಲೆಳೆದಿದ್ದಾರೆ.
ಇದನ್ನು ಓದಿ : ಭಾವಿ ಮಾವ ಸುನೀಲ್ ಶೆಟ್ಟಿ ಜೊತೆ ಕಾಣಿಸಿಕೊಂಡ ಕೆ.ಎಲ್.ರಾಹುಲ್: ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು!
ಗಾಸಿಪ್ಗಳಿಗೆ ಬ್ರೇಕ್ ಹಾಕಿದ್ದ ರಾಹುಲ್
ಆಥಿಯಾ ಶೆಟ್ಟಿ ಜನ್ಮದಿನದಂದು ಕೆ.ಎಲ್.ರಾಹಲ್, ನಟಿಯೊಂದಿಗಿನ ಕೆಲವು ರೋಮ್ಯಾಂಟಿಕ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಹೃದಯದ ಇಮೋಜ್ ಹಾಕಿ ಕೆ.ಎಲ್.ರಾಹುಲ್, ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಆಥಿಯಾ ಶೆಟ್ಟಿ ಎಂದು ವಿಶ್ ಮಾಡಿದ್ದಾರೆ. ಅದಕ್ಕೆ ಹೃದಯ ಮತ್ತು ಭೂಮಿಯ ಇಮೋಜ್ ಹಾಕಿ ರಾಹುಲ್ ವಿಶ್ಗೆ ಆಥಿಯಾ ಪ್ರತಿಕ್ರಿಯಿಸಿದ್ದಾರೆ. ಆಥಿಯಾ ತಂದೆ ಸುನಿಲ್ ಶೆಟ್ಟಿ ಮತ್ತು ಸಹೋದರ ಅಹಾನ್ ಶೆಟ್ಟಿ ಕೂಡ ಹೃದಯ ಇಮೋಜ್ ಹಾಕಿ ಖುಷಿ ವ್ಯಕ್ತಪಡಿಸಿದ್ದರು.
ಇದನ್ನು ಓದಿ : ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ: ಸಾರಾ ಆ್ಯಡ್ ವಿಡಿಯೋ ನೋಡಿ..
ತಡಪ್ ಸಿನಿಮಾದ ಪ್ರೀಮಿಯರ್ ಶೋಗೆ ಬಂದಿದ್ದ ರಾಹುಲ್!
ಈ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಸುನೀಲ್ ಶೆಟ್ಟಿ , ಆತಿಯಾ ಶೆಟ್ಟಿ ಸೇರಿ ಹಲವರು ಆಗಮಿಸಿದ್ದರು. ಈ ಪ್ರೀಮಿಯರ್ ಶೋಗೆ ಕ್ರಿಕೆಟಿಗ ರಾಹುಲ್ ಕೂಡ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಸುನೀಲ್ ಶೆಟ್ಟಿ ಜೊತೆ ಕೆ.ಎಲ್.ರಾಹುಲ್ ಕಾಣಿಸಿಕೊಂಡಿದ್ದರು. ಸುನೀಲ್ ಶೆಟ್ಟಿ ರಾಹುಲ್ರನ್ನು ಕರೆದು ಆತಿಯಾ ಪಕ್ಕ ನಿಲ್ಲುವಂತೆ ಹೇಳಿದ್ದರು . ಸುನೀಲ್ ಶೆಟ್ಟಿ ಹೇಳಿದಂತೆ ಆತಿಯಾ ಪಕ್ಕ ನಿಂತು ರಾಹುಲ್ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತು. ಇದನ್ನು ಕಂಡ ಫ್ಯಾನ್ಸ್ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಆತಿಯಾ ಶೆಟ್ಟಿ ಕುಟುಂಬಸ್ಥರೊಂದಿಗೆ ಕೆ.ಎಲ್.ರಾಹುಲ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ