Miss Universe: ಸುಶ್ಮಿತಾ ಸೇನ್ ವಿಶ್ವ ಸುಂದರಿ ಪಟ್ಟ ಗೆದ್ದ ಸಂಭ್ರಮಕ್ಕೆ ಈಗ 28 ವರ್ಷ, ಅಮ್ಮನಿಗಾಗಿ ಆಯೋಜಿಸಿದ ಮಗಳ ಪಾರ್ಟಿ ಹೇಗಿತ್ತು ಗೊತ್ತಾ?

ಈ ವಿಶೇಷ ಕ್ಷಣವನ್ನು ಸಂಭ್ರಮಿಸಲು ಸುಶ್ಮಿತಾ ಸೇನ್ ಮಗಳು ರೆನೀ ಸೇನ್ ವಿಶೇಷ ಪಾರ್ಟಿಯನ್ನು ಆಯೋಜಿಸಿದ್ದರು. ಸಂಭ್ರಮಾಚರಣೆಯಲ್ಲಿ ಸುಶ್ಮಿತಾ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರು ಹಾಜರಿದ್ದರು.

ವಿಶ್ವ ಸುಂದರಿ ಸುಶ್ಮಿತಾ ಸೇನ್

ವಿಶ್ವ ಸುಂದರಿ ಸುಶ್ಮಿತಾ ಸೇನ್

  • Share this:
ಸುಶ್ಮಿತಾ ಸೇನ್ (Sushmita Sen) ವಿಶ್ವ ಸುಂದರಿ ಪಟ್ಟವನ್ನು (Miss Universe) ಗೆದ್ದು (Winner) ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದ ಸಂಭ್ರಮಕ್ಕೆ ಈಗ 28 ವರ್ಷಗಳು ತುಂಬಿವೆ. 1994ರಲ್ಲಿ ನಡೆದ ಸ್ಪರ್ಧೆಯ (Competition) ಗೆಲುವು ಸುಶ್ಮಿತಾ ಅವರಿಗೆ ರಾತ್ರೋರಾತ್ರಿ ಸ್ಟಾರ್‌ ಪಟ್ಟ (Star list) ನೀಡಿತು, ಅಲ್ಲಿಂದ ಹಿಂತಿರುಗಿ ನೋಡದ ಸೇನ್ ಬಾಲಿವುಡ್ ಗೆ (Bollywood) ಪಾದಾರ್ಪಣೆ ಮಾಡಿದರು. ಅವರು ದಸ್ತಕ್ ಚಿತ್ರದ (Movie) ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಆದರೆ, ಸಿನಿಮಾ (Cinema) ಬದುಕಿಗೆ ಹೆಚ್ಚೇನೂ ಪ್ರಾಶಸ್ತ್ಯ ನೀಡದ ಸೇನ್ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದರು.

ವಿಶೇಷ ಪಾರ್ಟಿ ಆಯೋಜಿಸಿದ ರೆನೀ ಸೇನ್
ಈ ವಿಶೇಷ ಕ್ಷಣವನ್ನು ಸಂಭ್ರಮಿಸಲು ಸುಶ್ಮಿತಾ ಸೇನ್ ಮಗಳು ರೆನೀ ಸೇನ್ ವಿಶೇಷ ಪಾರ್ಟಿಯನ್ನು ಆಯೋಜಿಸಿದ್ದರು. ಸಂಭ್ರಮಾಚರಣೆಯಲ್ಲಿ ಸುಶ್ಮಿತಾ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರು ಹಾಜರಿದ್ದರು. ವಿಶೇಷ ಅಂದರೆ ಪಾರ್ಟಿಯಲ್ಲಿ ಸುಶ್ಮಿತಾ ಸೇನ್ ಅವರ ಮಾಜಿ ಗೆಳೆಯ, ಮಾಡೆಲ್ ರೋಹ್ಮನ್ ಶಾಲ್ ಕೂಡ ಉಪಸ್ಥಿತರಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಂಪತಿಗಳಿಬ್ಬರು ಬೇರೆಯಾಗಿ, ಉತ್ತಮ ಸ್ನೇಹಿತರಾಗಿರಲು ನಿರ್ಧರಿಸಿದ್ದರು.

ಪುತ್ರಿಗೆ ಧನ್ಯವಾದ ತಿಳಿಸಿದ ಸೇನ್
ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಸೇನ್ ವಿಶೇಷ ಪಾರ್ಟಿಗಾಗಿ ಮಗಳಿಗೆ ಧನ್ಯವಾದ ಹೇಳಿ ಮಿಸ್ ಯೂನಿವರ್ಸ್ ಪಟ್ಟ ಗೆದ್ದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಪ್ರೀತಿಪಾತ್ರರ ಜೊತೆ ನಗುತ್ತಾ ಕಾಲ ಕಳೆದ ಸಮಯ
ಚಿತ್ರದಲ್ಲಿ, ಸುಶ್ಮಿತಾ ಸೇನ್ ತನ್ನ ಕುಟುಂಬ, ಸ್ನೇಹಿತರು, ಪ್ರೀತಿಪಾತ್ರರ ಜೊತೆ ನಗುತ್ತಾ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ ಪ್ರತಿಕ್ರಿಯಿಸಿದ ರೋಹ್ಮನ್ ಶಾಲ್ ಅವರು ಹೃದಯದ ಎಮೋಜಿಯೊಂದಿಗೆ "ವಿಶ್ವದ ಅತ್ಯಂತ ಸಾಂಕ್ರಾಮಿಕ ನಗು" ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರೆನೀ ಸೇನ್, “ನಾನು ನಿನ್ನನ್ನು ಪ್ರೀತಿಸುತ್ತೇನೆ ಮಾ. ನೀನು ನೀನಾಗಿರುವದಕ್ಕೆ ಧನ್ಯವಾದಗಳು." ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಂದು ಫೋಟೋ ಹಂಚಿಕೊಂಡ ಸುಶ್ಮಿತಾ, "ಜಿಯಾನಾ ಸೇನ್ ತನ್ನ "ಸೆಕ್ಸಿ" ಗೆ 28 ವರ್ಷಗಳ ಮಿಸ್ ಯೂನಿವರ್ಸ್‌ನ ಶುಭಾಶಯಗಳನ್ನು ಕೋರಲು ಮನೆಗೆ ಬರುತ್ತಾಳೆ, ಜೊತೆಗೆ "ಬುವಾ ಕಿ ಜಾನ್" ಮತ್ತು "ವಿಐಪಿ ಮೆಹಮಾನ್" ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:  Mahesh Babu: 'ಪ್ರಿನ್ಸ್' ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್ ಇವರೇ ಅಂತೆ!

ತನ್ನ ಸಹೋದರ ಮತ್ತು ಅತ್ತಿಗೆಯನ್ನು ಉಲ್ಲೇಖಿಸಿ "ಚಾರು ಅಸೋಪಾ ಸೇನ್ ಮತ್ತು ರಾಜೀವ್ ಸೇನ್ ಈ ಪ್ರಣಯವು ಈಗಷ್ಟೇ ಪ್ರಾರಂಭವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ ಸುಶ್ಮಿತಾ
ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಸುಶ್ಮಿತಾ ಸೇನ್ “ಅತ್ಯಂತ ಪ್ರೀತಿಯ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಆಚರಿಸಿದೆ. ಹೂವುಗಳು, ಪತ್ರಗಳು, ಚಾಕೊಲೇಟ್‌ಗಳು, ಪೋಸ್ಟ್‌ಗಳಿಗೆ ಧನ್ಯವಾದಗಳು” ಎಂದು ಪೋಸ್ಟ್ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ದಂಪತಿಗಳು ಬೇರ್ಪಟ್ಟರು ಮತ್ತು ನಿಕಟ ಸ್ನೇಹವನ್ನು ಮುಂದುವರೆಸಿದ್ದಾರೆ. ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್ 2018 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಎಂದು ವರದಿಯಾಗಿದೆ. ಸುಶ್ಮೀತಾ ಸೇನ್ ಕೊನೆಯದಾಗಿ ಆರ್ಯ 2 ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸುಶ್ಮಿತಾ ಸೇನ್, ಮಿಸ್ ಯೂನಿವರ್ಸ್- 1994
ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಲು ಸುಶ್ಮಿತಾ ಸೇನ್, ಐಶ್ವರ್ಯಾ ರೈ ಅವರನ್ನು ಸೋಲಿಸಿದ್ದರು. ವಾಸ್ತವವಾಗಿ, ಆ ವರ್ಷ ಮಿಸ್ ಇಂಡಿಯಾ ಸ್ಪರ್ಧೆಯ ಕೊನೆಯಲ್ಲಿ, ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಒಂದು ಸಾಮಾನ್ಯ ಪ್ರಶ್ನೆ ಕೇಳಲಾಗಿದ್ದು, ಅದರಲ್ಲಿ ಸುಶ್ಮಿತಾ ನೀಡಿದ ಉತ್ತರ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಸೇನ್ ಮುಡಿಗೇರಿಸಿಕೊಂಡರು.

ಇದನ್ನೂ ಓದಿ:  Aditi Prabhudeva: 'ಅಲೆಕ್ಸಾ' ಅವತಾರದಲ್ಲಿ ಅದಿತಿ - ಫುಲ್​ ಫೈಟಿಂಗ್ ಮೂಡ್​ನಲ್ಲಿ ಶ್ಯಾನೆ ಟಾಪ್ ಹುಡ್ಗಿ

ಅಂತಿಮ ಸಂದರ್ಶನದ ಸುತ್ತಿನಲ್ಲಿ, "ಮಹಿಳೆಯಾಗಿರುವುದರ ಮೂಲತತ್ವ ನಿಮಗೆ ಏನು?" ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು "ಕೇವಲ ಮಹಿಳೆಯಾಗಿರುವುದು ದೇವರ ಕೊಡುಗೆಯಾಗಿದೆ, ಅದನ್ನು ನಾವೆಲ್ಲರೂ ಪ್ರಶಂಸಿಸಬೇಕಾಗಿದೆ. ಮಗುವಿನ ಮೂಲವು ತಾಯಿ, ಒಬ್ಬ ಮಹಿಳೆ, ಅವಳು ಒಬ್ಬ ಪುರುಷನಿಗೆ ಕಾಳಜಿ ತೋರಿಸುತ್ತಾಳೆ, ಹಂಚಿಕೊಳ್ಳುವಿಕೆ ಮತ್ತು ಪ್ರೀತಿಸುವುದು ಏನು ಎಂದು ತೋರಿಸುತ್ತದೆ. ಅದು ಮಹಿಳೆ ಎಂಬ ಮೂಲತತ್ವ." ಎಂದು ಉತ್ತರಿಸುವ ಮೂಲಕ ಪ್ರಶಸ್ತಿಗೆ ಭಾಜನರಾದರು.
Published by:Ashwini Prabhu
First published: