ಅಸುರನಾಗಿ ಶಿವಣ್ಣ, ನಿರ್ದೇಶಕ ಕೂಡ ಫಿಕ್ಸ್..!

19 ವರ್ಷಗಳ ಹಿಂದೆ ಶಿವಣ್ಣ ಅಸುರ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ತಮಿಳಿನ ಅಸುರನ್​​ ರಿಮೇಕ್ ಆಗುತ್ತಿರುವುದರಿಂದ ಅಸುರ ಎಂಬ ಟೈಟಲ್​ನಲ್ಲೇ ಹ್ಯಾಟ್ರಿಕ್ ಹೀರೋ ತೆರೆ ಮೇಲೆ ಬರಲಿದ್ದಾರಾ ಕಾದು ನೋಡಬೇಕಿದೆ.

shivanna

shivanna

  • Share this:
ಸ್ಯಾಂಡಲ್​ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೊಂದು ರಿಮೇಕ್ ಚಿತ್ರದಲ್ಲಿ ನಟಿಸಲಿದ್ದಾರಾ? ಅದು ಕೂಡ ಸೂಪರ್ ಡೂಪರ್ ಹಿಟ್ ತಮಿಳು ಚಿತ್ರದ ರಿಮೇಕ್​ನಲ್ಲಿ?...ಈ ಎರಡು ಪ್ರಶ್ನೆಗಳಿಗೆ ಕಳೆದೊಂದು ತಿಂಗಳಿಂದ ಗಾಂಧಿನಗರದಲ್ಲಿ ಸಿಕ್ಕ ಉತ್ತರ ಹೌದು. ಆ ಚಿತ್ರ ಕಾಲಿವುಡ್​ನ ಬ್ಲಾಕ್ ಬ್ಲಸ್ಟರ್ ಚಿತ್ರ  ಖೈದಿ ಎಂದಾಗಿತ್ತು.

ಆದರೆ ಇದೀಗ ಶಿವಣ್ಣ ಖೈದಿ ರಿಮೇಕ್​ನಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಗಳಿಗಾಗಿ ಪ್ರಾಣ ಪಣಕ್ಕಿಡುವ ಖೈದಿ ಕಥೆಯಲ್ಲಿ ಹ್ಯಾಟ್ರಿಕ್​ ಹೀರೋ ನಾಯಕನಾಗಲಿದ್ದಾರೆ ಎಂದೇ ಹೇಳಲಾಗಿತ್ತು.  ಆದರೆ ಈ ಚಿತ್ರದ ಆಫರ್​ ಅನ್ನು ಶಿವಣ್ಣ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬದಲಾಗಿ ಮಕ್ಕಳಿಗಾಗಿ ಹೋರಾಡುವ ತಂದೆಯ ಪಾತ್ರದಲ್ಲಿ  ಬಣ್ಣ ಹಚ್ಚಲು ಒಪ್ಪಿದ್ದಾರೆ. ಅಂದರೆ ತಮಿಳಿನ ಮೆಗಾ ಹಿಟ್ ಅಸುರನ್ ರಿಮೇಕ್​ನಲ್ಲಿ ಸೆಂಚುರಿ ಸ್ಟಾರ್ ನಟಿಸಲಿರುವುದು ಕನ್ಫರ್ಮ್ ಆಗಿದೆ.

ಕನ್ನಡದಲ್ಲಿ ಅಸುರನ್ ಶಿವಸ್ವಾಮಿಯಾಗಿ ಶಿವಣ್ಣ ಅಭಿನಯಿಸಲು ಓಕೆ ಅಂದಿದ್ದಾರೆ.  ದಲಿತರ ಮೇಲೆ ನಡೆಯುವ ಶೋಷಣೆ ವಿರುದ್ಧ ತಿರುಗಿ ಬೀಳುವ ಕಥೆಯನ್ನು ಹೇಳುವ ಅಸುರನ್ ಚಿತ್ರವನ್ನು ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶಿಸಿದ್ದರು.

ಇದೀಗ ಕನ್ನಡ ಅವತರಣಿಕೆಗೆ ಜೇಕಬ್ ವರ್ಗೀಸ್ ಆ್ಯಕ್ಷನ್ ಕಟ್ ಹೇಳಲಿರುವುದು ಕನ್ಪರ್ಮ್ ಆಗಿದೆ. ಈಗಾಗಲೇ ಕನ್ನಡದಲ್ಲಿ ಸವಾರಿ, ಪೃಥ್ವಿ, ಚಂಬಲ್​ನಂತಹ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಜೇಕಬ್ ಕೂಡ ಅಸುರನ್ ರಿಮೇಕ್ ಮೂಲಕ ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡಲಿದ್ದಾರೆ.

ಆದರೆ ಈ ರಿಮೇಕ್ ಚಿತ್ರಕ್ಕೆ ಇನ್ನೂ ಕೂಡ ನಿರ್ಮಾಪಕರು ಫಿಕ್ಸ್ ಆಗಿಲ್ಲ ಎನ್ನಲಾಗಿದೆ. ಹಾಗೆಯೇ ಚಿತ್ರದ ಟೈಟಲ್ ಬಗ್ಗೆ ಕೂಡ ಚರ್ಚಿಸಲಾಗಿದೆ.  19 ವರ್ಷಗಳ ಹಿಂದೆ ಶಿವಣ್ಣ ಅಸುರ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ತಮಿಳಿನ ಅಸುರನ್​​ ರಿಮೇಕ್ ಆಗುತ್ತಿರುವುದರಿಂದ ಅಸುರ ಎಂಬ ಟೈಟಲ್​ನಲ್ಲೇ ಹ್ಯಾಟ್ರಿಕ್ ಹೀರೋ ತೆರೆ ಮೇಲೆ ಬರಲಿದ್ದಾರಾ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಮಾಡಿದ್ದ ಅಸುರನ್ ರಿಮೇಕ್ ಸುದ್ದಿ ಇದೀಗ ಅಂತಿಮ ಹಂತ ತಲುಪಿದ್ದು, ಅಲ್ಲಿಗೆ ಶಿವಣ್ಣ ಕವಚ ಚಿತ್ರದ ಬಳಿಕ ಮತ್ತೊಂದು ರಿಮೇಕ್​ನಲ್ಲಿ ಅಭಿನಯಿಸಲಿರುವುದು ಪಕ್ಕಾ ಆಗಿದೆ.
First published: