KGF 2: ರಾಜಕೀಯಕ್ಕೆ ಬರ್ತಾರಂತೆ ರಾಕಿ ಭಾಯ್​! ಜೊತೆಗೆ 'ಆ' ನಟನನ್ನು ಮೀರಿಸ್ತಾರಂತೆ ಯಶ್​

ಕೆಜಿಎಫ್ 2 (KGF 2)  ಯಶಸ್ಸಿನ ಬಳಿಕ ಇದೀಗ ಜ್ಯೋತಿಷಿಗಳು ರಾಕಿಂಗ್​ ಸ್ಟಾರ್​ ಯಶ್​ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್​ ಅವರ ಭವಿಷ್ಯ ನುಡಿಯುತ್ತಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

  • Share this:
ಸಲಾಂ ರಾಕಿ ಭಾಯ್ (Salaam Rocky Bhai)​.. ಇದು ಕೇವಲ ಒಂದಿಬ್ಬರು ಹೇಳುತ್ತಿರುವ ಮಾತಲ್ಲ. ಇಡೀ ವಿಶ್ವವೇ ರಾಕಿ ಭಾಯ್​ ಆರ್ಭಟ ಕಂಡು ಈ ಮಾತು ಹೇಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​ ಹೆಸರು ಫೇಮಸ್​ ಆಗಿದೆ. ಯಶ್​ ಈಗ ಕೇವಲ ರಾಕಿಂಗ್​ ಸ್ಟಾರ್​ ಅಲ್ಲ, ನ್ಯಾಷನಲ್​ ಸ್ಟಾರ್ (National Star)​ ಆಗಿದ್ದಾರೆ. ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಇದೀಗ ರಾಕಿ ಭಾಯ್​ ಅವರ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ವಿಚಾರ ನೋಡಿದ ಅಭಿಮಾನಿಗಳು ನಿಜಕ್ಕೂ ಇದು ಆಗುತ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ

ರಾಜಕೀಯಕ್ಕೆ ಬರ್ತಾರಂತೆ ರಾಕಿ ಭಾಯ್

ಕೆಜಿಎಫ್ 2 (KGF 2)  ಯಶಸ್ಸಿನ ಬಳಿಕ ಇದೀಗ ಜ್ಯೋತಿಷಿಗಳು ರಾಕಿಂಗ್​ ಸ್ಟಾರ್​ ಯಶ್​ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್​ ಅವರ ಭವಿಷ್ಯ ನುಡಿಯುತ್ತಿದ್ದಾರೆ.ರಾಕಿ ಭಾಯ್ ಯಶ್ ರಾಜಕಿಯಕ್ಕೆ ಬರುತ್ತಾರಂತೆ ಅದೂ ದಶಕಗಳ ನಂತರ. ಹೀಗಂತ ಬೆಂಗಳೂರಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಯಶ್, ಶಾರೂಕ್ ಖಾನ್ ತರ ದೊಡ್ಡ ಸ್ಟಾರ್ ಆಗ್ತಾರಂತೆ, ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡ್ತಾರೆ ಎಂದು ಜ್ಯೋತಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಇದು ನಿಜವಾಗುತ್ತಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ರಾಜಕೀಯಕ್ಕೆ ಬರೋದು ಡೌಟ್​ ಎಂದ ರಾಕಿ ಫ್ಯಾನ್ಸ್​​!

ಸದ್ಯ ಇದೇ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಅದೇನೇ ಇರಲಿ ಯಶ್ ಕಳೆದ ನಾಲ್ಕೈದು ವರ್ಷಗಳಿಂದ ನಟನೆ ಜೊತೆಗೆ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನ ಮಾಡ್ತಿದ್ದಾರೆ. ಈ ಮೂಲಕ ಸದ್ಯ ರಾಜಕೀಯದಿಂದ ದೂರ ಉಳಿದಿರೋ ಯಶ್ ಸಿನಿಮಾಗಳ ಮೇಲಷ್ಟೇ ಕಾನ್ಸಂಟ್ರೇಟ್ ಮಾಡ್ತಿದ್ದಾರೆ. ಸದ್ಯದಲ್ಲೇ ಪ್ರೋಡಕ್ಷನ್ ಹೌಸ್​ ಶುರುಮಾಡುವ ಸಾಧ್ಯತೆ ಇದೆ. ಆದರೆ, ರಾಜಕೀಯಕ್ಕೆ ಬರೋದು ಡೌಟ್​ ಅಂತಿದ್ದಾರೆ ರಾಕಿ ಭಾಯ್​ ಅಭಿಮಾನಿಗಳು.

ಇದನ್ನೂ ಓದಿ: ಮುದ್ದಾಗಿ ಸಲಾಂ ರಾಕಿ ಭಾಯ್ ಎಂದ ಐರಾ, ಮಗಳ ವಿಡಿಯೋ ಕಂಡು ಯಶ್​ ಫುಲ್​ ಖುಷ್​!

ಪಾನ್​ ಜಾಹೀರಾತಿಗೆ ನೋ ಎಂದಿದ್ದ ರಾಕಿ ಭಾಯ್​​!

ಹೌದು, ಕೋಟಿ ಕೋಟಿ ಹಣ ಪಡೆದು ಬಾಲಿವುಡ್​ನ ತ್ರಿಮೂರ್ತಿಗಳು ಪಾನ್​ ಮಸಾಲ ಆ್ಯಡ್​ನಲ್ಲಿ ನಟಿಸಿ ಟ್ರೋಲ್​ ಆಗುತ್ತಿದ್ದಾರೆ. ವಿಶ್ವದಾದ್ಯಂತ ನರಾಚಿ ಅಧಿಪತಿಯ ಓಟ ಮುಂದುವರೆದಿದೆ. ಇದರ ಜೊತೆಗೆ ಇದೀಗ ರಾಕಿ ಭಾಯ್​ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಹೊರಬಿದ್ದಿದೆ.  ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್​ ಸ್ಟಾರ್​​ ನಟರೇ ದುಡ್ಡಿಗೆ ಬೆಲೆ ಕೊಟ್ಟು ಪಾನ್​ ಮಸಲಾ ಆ್ಯಡ್​ನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

ಸಾವಿರ ಕೋಟಿ ಕ್ಲಬ್​ ಸೇರಿದ ಮೊದಲ ಕನ್ನಡ ಸಿನಿಮಾ!

ರಾಕಿ ಭಾಯ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಬಂದಿದ್ದ ಕೆಜಿಎಫ್​ ಚಾಪ್ಟರ್​ ಒನ್​​ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್​ ಚಾಪ್ಟರ್​​​2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್​ 2 ರಿಲೀಸ್​​ ಆದ ನಂತರ ಇಡೀ ವಿಶ್ವದಲ್ಲೇ ರೂಲ್​ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.
Published by:Vasudeva M
First published: