Hrithik Roshan: ಜಾತಕದ ಪ್ರಕಾರ ಹೃತಿಕ್ ರೋಷನ್ 2ನೇ ಮದುವೆ ಆಗ್ತಾರಾ?

ಹೃತಿಕ್ ರೋಷನ್

ಹೃತಿಕ್ ರೋಷನ್

ಈ ಹಿಂದೆ ಸುಸ್ಸಾನ್ ಖಾನ್ ಹಾಗೂ ಹೃತಿಕ್ ರೋಷನ್ ಬೇರೆಯಾದ ಸ್ವಲ್ಪ ಸಮಯದ ನಂತರ, ಜ್ಯೋತಿಷಿಯೊಬ್ಬರು ಗೆ ಹೃತಿಕ್ ರೋಷನ್ ಜಾತಕದ ಪ್ರಕಾರ ಅವರು ಎರಡನೇ ಮದುವೆ ಆಗಲಿದ್ದಾರೆ ಎಂದು ಭವಿಷ್ಯ ನುಡಿದ್ದಿದ್ದರು.

  • Share this:

ಬೇಜನ್ ದರುವಾಲ (Bejan Daruwalla) ಅವರು ಯಾವಾಗಲೂ ತಮ್ಮ ಜೀವನದಲ್ಲಿ ಉತ್ಸಾಹದಿಂದ ಇರುತ್ತಾರೆ. ಅವರು ಸದಾ ಸೆಲೆಬ್ರೆಟಿಗಳ (Celebrity) ಜೀವನದ ಮೇಲೆ ವಿಶೇಷವಾದ ಹಾಗೂ ಆಸಕ್ತಿಕರವಾದ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಯಾರು ಯಾರು ಇವರನ್ನು ಭೇಟಿ ಮಾಡುತ್ತಾರೊ ಅವರೆಲ್ಲರೂ ಬೇಜನ್ ದರುವಾಲ ಅವರ ಅತಿ ಬುದ್ಧಿವಂತಿಕೆ ಹಾಗೂ ನಿಖರವಾದ ಭವಿಷ್ಯವಾಣಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಪ್ರಸಿದ್ಧ ಜ್ಯೋತಿಷಿಯಾದ (Astrologer) ಇವರು ಗುಜರಾತ್ ಗೆ (Gujarat) ತೆರಳಿದ ನಂತರವು ತಮ್ಮ ಉತ್ತಮವಾದ ಕೆಲಸವನ್ನು ಮುಂದುವರಿಸಿದ್ದಾರೆ. ಅವರ ಆರೊಗ್ಯವು (Health) ಸರಿಯಾಗಿಲ್ಲದಿದ್ದರೂ ಎದೆಗುಂದದೆ ಕೆಲಸದ ನಿಮಿತ್ತ ನಿರಂತರವಾಗಿ ಮುಂಬೈಗೆ ಬರುತ್ತಲೇ ಇರುತ್ತಾರೆ.


ಎರಡನೇ ಮದುವೆಯಾಗಲಿದ್ದಾರಾ ಹೃತಿಕ್
ಈ ಹಿಂದೆ ಸುಸ್ಸಾನ್ ಖಾನ್ ಹಾಗೂ ಹೃತಿಕ್ ರೋಷನ್ ಬೇರೆಯಾದ ಸ್ವಲ್ಪ ಸಮಯದ ನಂತರ, ಬೇಜನ್ ಪತ್ರಕರ್ತರೊಬ್ಬರಿಗೆ ಹೃತಿಕ್ ಅವರ ಜಾತಕದ ಪ್ರಕಾರ ಅವರು ಎರಡನೇ ಮದುವೆ ಆಗಲಿದ್ದಾರೆ ಎಂದು ಭವಿಷ್ಯ ನುಡಿದ್ದಿದ್ದರು. ಈ ಮಾಹಿತಿಯನ್ನು ಜನಪ್ರಿಯ ಟ್ಯಾಬ್ಲಾಯ್ಡ್ ಮುಂಬೈ ಮಿರರ್ ನಲ್ಲಿ ಪ್ರಕಟಿಸಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಸಬಾ ಜೊತೆಗಿನ ಫೋಟೋ
ಈಗ ಹೃತಿಕ್ ಅವರ ನಡೆಯನ್ನು ನೋಡುತ್ತಿದ್ದರೆ ಬೇಜನ್ ಅವರು ನುಡಿದಿದ್ದ ಭವಿಷ್ಯ ನಿಜವಾಗುತ್ತದೆಯೆ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡತೊಡಗಿದೆ. ಏಕೆಂದರೆ, ಇಂದು, ಹೃತಿಕ್ ಸಬಾ ಅವರ ಜೊತೆ ಸುತ್ತುತ್ತಿರುವುದು ಕಂಡುಬರುತ್ತಿದೆ. ಸದ್ಯ ಈ ಜೋಡಿ ಈಗ ಲಂಡನ್ ಅಲ್ಲಿ ಇದ್ದಾರೆ. ಅಲ್ಲಿ ಅವರಿಬ್ಬರು ತಮ್ಮ ಸಮಯವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಲಂಡನ್ ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು ತಾವಿಬ್ಬರೂ ತಿನ್ನುತ್ತಿರುವ ಬರ್ಗರ್ ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: K.L Rahul-Athiya Shetty: ಕೆ ಎಲ್ ರಾಹುಲ್ ಜೊತೆ ಮದುವೆ; ಆತಿಯಾ ಶೆಟ್ಟಿ ಬೊಂಬಾಟ್ ಪ್ರತಿಕ್ರಿಯೆ!


ಆ ಚಿತ್ರವೇ ಈಗ ಇಬ್ಬರ ಮಧ್ಯೆ ಏನಾದರೂ ಇದೆಯೇ ಎಂಬ ಚರ್ಚೆ ಜೋರಾಗುವಂತೆ ಮಾಡಿದೆ. ಈ ಹಿಂದೆ ಸಬಾ ಅವರು, ಫ಼್ರಾನ್ಸ್ ಬೀದಿಗಳಲ್ಲಿ ಇಬ್ಬರೂ ಸಂತಸದಿಂದ ಸುತ್ತಾಡುತ್ತಿರುವ ವೀಡಿಯೊ ಒಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ವೀಡಿಯೊದಲ್ಲಿ ಹೃತಿಕ್ ತಮ್ಮ ಮುಖವನ್ನು ತೋರಿಸದೆ ಟೋಪಿಯಿಂದ ಕ್ಯಾಮರಾಗೆ ಕಾಣದಂತೆ ಮುಖವನ್ನು ಮುಚ್ಚಿಕೊಂಡಿದ್ದರು.


ಸಬಾ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಹೃತಿಕ್ 
ಸದ್ಯ ಈ ಜೋಡಿ ಸಾರ್ವಜನಿಕವಾಗಿ ತಮ್ಮ ಸಂಬಂಧ ಒಪ್ಪಿಕೊಂಡಿಲ್ಲವಾದರೂ ಅವರು ಒಬ್ಬರಿಗೊಬ್ಬರು ಡೇಟ್ ಮಾಡುತ್ತಿರುವ ವಿಷಯ ಈಗಾಗಲೆ ಎಲ್ಲರಿಗೂ ತಿಳಿದಿದೆ, ಅವರ ಫೋಟೋಗಳ ಹಂಚಿಕೆಗಳು, ರೆಸ್ಟೋರೆಂಟ್ ತಿರುಗಾಟಗಳು ಹೃತಿಕ್ ಕುಟುಂಬದ ಜೊತೆ ಸಬಾ ಅವರು ಇರುವ ಚಿತ್ರಗಳು ಎಲ್ಲವನ್ನೂ ನೋಡಿದರೆ ಇಬ್ಬರ ಮಧ್ಯೆ ಸಿಕ್ರೆಟ್ ಆಗಿ ಪ್ರೀತಿ ಇರಬಹುದೆಂಬ ಗುಮಾನಿ ಮೂಡಿಸಿದೆ.


ಹೃತಿಕ್ ಅವರ ಜಾತಕದ ಪ್ರಕಾರ ಎರೆಡನೆ ಮದುವೆ ಆಗುವುದಾದರೆ ಆ ಹುಡುಗಿ ಸಬಾ ಆಗಿರಬಹುದ ಎಂದು ನಮಗೆ ಆಶ್ಚರ್ಯ ಆಗುತ್ತಿದೆ. ಸದ್ಯಕ್ಕೆ ಹೃತಿಕ್ ನಿಜವಾಗಿಯೂ ಎರೆಡನೆ ಮದುವೆ ಆಗುತ್ತಾರಾ ಎಂಬುದೇ ಅಭಿಮಾನಿಗಳಿಗೆ ಒಂದು ದೊಡ್ದ ಪ್ರಶ್ನೆ ಆಗಿದೆ.


ಜ್ಯೋತಿಷಿ ಬೇಜನ್ ದರುವಾಲ ಹೇಳಿದ್ದು ನಿಜವಾಗುತ್ತಾ 
ಜನರೆಲ್ಲ ನಿಜವಾಗಿಯೂ ಹೃತಿಕ್ ಮತ್ತು ಸಬಾ ಅವರ ವಿವಾಹದ ಮಾಹಿತಿಯ ಕುರಿತು ಉತ್ಸುಕರಾಗಿದ್ದಾರೆ. ಇವರಿಬ್ಬರು ಖಂಡಿತ ವಿವಾಹ ಆಗಬಹುದು ಎಂದು ಹಲವರು ಊಹಿಸುತ್ತಿದ್ದಾರೆ ಏಕೆಂದರೆ ಸಬಾ ಅವರು ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಹಾಗೂ ತಾಯಿ ಪಿಂಕಿ ರೋಷನ್ ಅವರ ಜೊತೆ ಇರುವ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


ಇದನ್ನೂ ಓದಿ:  Nithya Menen Marriage: ಮದುವೆ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ನಿತ್ಯಾ! ಇದು ಮೆನನ್​ ವಿವಾಹದ ಅಸಲಿ ಮ್ಯಾಟರ್​


ಸಬಾ ಹಾಗೂ ಹೃತಿಕ್ ಅವರ ಸಂಬಂಧವು ಯಾವುದೇ ಸಂದೇಹ ಇಲ್ಲದೆ ಬಹಳ ಬಲವಾಗಿ ಸಾಗುತ್ತಿದೆ. ಬೇಜನ್ ದರುವಾಲ ಅವರು ಹೇಳಿದಂತೆ ಅವರಿಬ್ಬರು ಮದುವೆಯಾಗಿ ವೈವಾಹಿಕ ಜೀವನವನ್ನು ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

First published: