ಬೆಂಗಳೂರು ಹುಡುಗ-ಬಾಲಿವುಡ್ ನಟ ಡಿನೊ ಮೊರಿಯಾ ಆಸ್ತಿ ಮುಟ್ಟುಗೋಲು

ಸ್ಟರ್ಲಿಂಗ್ ಬಯೋಟೆಕ್ ಸಮೂಹದ ಸಂಸ್ಥಾಪಕರಾದ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ ಈ ನಾಲ್ಕು ಜನರಿಗೆ ವಂಚನೆ ಮಾಡಿ ಸಂಪಾದಿಸಿರುವ ಹಣವನ್ನು ವರ್ಗಾಯಿಸಿದ್ದಾರೆ ಎಂದು ಬ್ಯೂರೋ ಆಫ್ ಎನ್‌ಫೋರ್ಸ್‌ಮೆಂಟ್ (ಇಡಿ) ತಿಳಿಸಿದೆ.

ನಟ ಡಿನೊ ಮೊರಿಯಾ

ನಟ ಡಿನೊ ಮೊರಿಯಾ

  • Share this:
ಗುಜರಾತ್ ಮೂಲದ ಔಷಧೀಯ ಕಂಪನಿಯಾದ ಸ್ಟರ್ಲಿಂಗ್ ಬಯೋಟೆಕ್ ಗುಂಪಿಗೆ ಸೇರಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಅಳಿಯ ನಟರಾದ ಡಿನೊ ಮೊರಿಯಾ, ಸಂಜಯ್ ಖಾನ್ ಮತ್ತು ಡಿಜೆ ಅಕೀಲ್ ಅವರ ಆಸ್ತಿಯನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದೆ  ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. 8.79 ಕೋಟಿ  ಮೌಲ್ಯದ ನಾಲ್ಕು ಜನರ ಆಸ್ತಿಯನ್ನು ಸರ್ಕಾರವು ವಶಪಡಿಸಿಕೊಳ್ಳಲು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಇಡಿ ತಿಳಿಸಿದೆ.

ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಆಸ್ತಿಯ ಮೌಲ್ಯ 3 ಕೋಟಿ ಹಾಗೂ ಡಿನೊ ಮೊರಿಯಾ ಅವರ ಆಸ್ತಿಯ ಮೌಲ್ಯ 1.4 ಕೋಟಿ. ಡಿ ಜೆ ಅಕೀಲ್ ಎಂದು ಜನಪ್ರಿಯವಾಗಿರುವ ಅಕೀಲ್ ಅಬ್ದುಲ್ ಖಲೀಲ್ ಬಚೂಲಿ ಅವರ ಒಟ್ಟು ಆಸ್ತಿಯ ಮೌಲ್ಯ 1.98 ಕೋಟಿ. ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಅಳಿಯ ಇರ್ಫಾನ್ ಅವರ ಒಟ್ಟು ಆಸ್ತಿಯ ಮೌಲ್ಯ 2.41 ಕೋಟಿ ಎಂದು ಕೇಂದ್ರ ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟರ್ಲಿಂಗ್ ಬಯೋಟೆಕ್ ಸಮೂಹದ ಸಂಸ್ಥಾಪಕರಾದ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ ಈ ನಾಲ್ಕು ಜನರಿಗೆ ವಂಚನೆ ಮಾಡಿ ಸಂಪಾದಿಸಿರುವ ಹಣವನ್ನು ವರ್ಗಾಯಿಸಿದ್ದಾರೆ ಎಂದು ಬ್ಯೂರೋ ಆಫ್ ಎನ್‌ಫೋರ್ಸ್‌ಮೆಂಟ್ (ಇಡಿ) ತಿಳಿಸಿದೆ.

ಇದನ್ನೂ ಓದಿ: ಆಮೀರ್ ಖಾನ್-ಕಿರಣ್​ ರಾವ್​ ಲವ್​ ಸ್ಟೋರಿ ದಿ ಎಂಡ್​: ಕಾರಣವಾದ್ರಾ ಆ ಸುಂದರ ನಟಿ..!

ಪ್ರವರ್ತಕ ಸಹೋದರರಾದ ನಿತಿನ್ ಸಂದೇಸರ, ಚೇತನ್ ಸಂದೇಸರ, ಚೇತನ್ ಅವರ ಪತ್ನಿ ಡಿಸಂದೇಸರ ಮತ್ತು ಹಿತೇಶ್ ಪಟೇಲ್ ಅವರನ್ನು ವಿಶೇಷ ನ್ಯಾಯಾಲಯವು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ ಎಂದು ತಿಳಿಸಿದೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಮುಖ್ಯ ಪ್ರಾಯೋಜಕರು ಹಾಗೂ ನಿರ್ದೇಶಕರು 14,500 ಕೋಟಿ ರೂಗಳ ಆದಾಯವನ್ನು ಗಳಿಸಿದ್ದು, ಅದು ಕಾನೂನುಬಾಹಿರ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣವು ಇಂಟರ್‌ನೆಟ್‌ ಹಾಗೂ ಸಮಾಜ ತಾಣಗಳಲ್ಲಿ ಬಾರಿ ಸುದ್ದಿ ಮಾಡಿದೆ. ಈ ಪ್ರಕರಣವನ್ನು ಕುರಿತು ಕೆಲವರು ಆಕ್ರೋಶವನ್ನು ವಕ್ತಪಡಿಸಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಈ ವಿಷಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇತರ ಪಕ್ಷಗಳ ನಾಯಕರು ಈ ಪ್ರಕರಣದ ವಿರುದ್ಧ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ಅಮೀರ್ ಖಾನ್​ ವಿಚ್ಛೇದನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಟ್ರೆಂಡ್​ ಆದ ದಂಗಲ್ ನಟಿ ಫಾತಿಮಾ ಸನಾ ಶೇಖ್​

ಡಿನೊ ಮೊರಿಯಾ ಪ್ರಸಿದ್ಧ ಬಾಲಿವುಡ್ ನಟ , ಈ ಪ್ರಕರಣವು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಲಿದೆ ಮತ್ತು ಡಿಜೆ ಅಕೀಲ್ ಅವರು ಬಾಲಿವುಡ್ನಲ್ಲಿ ಪ್ರಸಿದ್ಧ ಡಿಜೆ. ಸಂಜಯ್ ಖಾನ್ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಹಿಂದಿ ಚಲನಚಿತ್ರಗಳು ಮತ್ತು ದೂರದರ್ಶನಗಳಲ್ಲಿ ಹೆಸರುವಾಸಿಯಾಗಿದ್ದಾರೆ.

ಕೋವಿಡ್ ನಂತರ ಔಷಧಗಳ ಹೆಸರಿನಲ್ಲಿ ಹಣದ ಸುಲಿಗೆಯು ಹೆಚ್ಚಳವಾಗುತ್ತಿದ್ದು ಸಿನಿಮಾ ನಟರು ನಿರ್ಮಾಪಕರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: