Bollywood: ಚಿತ್ರತಂಡದ ಸದಸ್ಯರಿಗೆ ಕೊರೊನಾ ಸೋಂಕು ದೃಢ ಹಿನ್ನೆಲೆ- Akshay Kumar- Yami Gautam ಅಭಿನಯದ OMG 2 ಚಿತ್ರದ ಚಿತ್ರೀಕರಣ ಸ್ಥಗಿತ

OMG 2 Film Shooting : ಸಧ್ಯ ಅಕ್ಷಯ್ ಕುಮಾರ್ ಬಾಲಿವುಡ್​ನಲ್ಲಿ ಬ್ಯೂಸಿ ನಟರಾಗಿದ್ದು. ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅಕ್ಷಯ್ ಕುಮಾರ್​ ಹಾಗೂ ಕತ್ರಿನಾ ಕೈಫ್​ ಅಭಿನಯದ ಸೂರ್ಯವಂಶಿ ಸಿನಿಮಾ ಸಿದ್ಧವಾಗಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅನೇಕ ನಗರಗಳಲ್ಲಿ ಕೊರೊನಾ(Corona Cases) ಪ್ರಕರಣಗಳು ಕಡಿಮೆಯಾಗಿದೆ, ಆದರೆ ಸರ್ಕಾರವು(Government) ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಜನರಿಗೆ ಆದೇಶಿಸಿದೆ.ಅನೇಕ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ(Tv Serials) ಚಿತ್ರೀಕರಣವೂ ಪುನರಾರಂಭಗೊಂಡಿದೆ. ಆದರೆ, ಅಕ್ಷಯ್ ಕುಮಾರ್(Akshay Kumar), ಯಾಮಿ ಗೌತಮ್ (Yami gautam)ಮತ್ತು ಪಂಕಜ್ ತ್ರಿಪಾಠಿ(Pankaj Tripathi) ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರವೊಂದರ ಸದಸ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.

OMG  ಚಿತ್ರದ ಮುಂದುವರೆದ ಭಾಗವಾದ OMG 2 ಚಿತ್ರದ ಕೆಲ ಸದಸ್ಯರು ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಚಿತ್ರವನ್ನು ಅಮಿತ್ ರೈ ನಿರ್ದೇಶಿಸಿಸುತ್ತಿದ್ದಾರೆ.  ಕೆಲ ಮೂಲಗಳ ಪ್ರಕಾರ, ಚಿತ್ರತಂಡದ ಕೆಲ ಸದಸ್ಯರು ಕಳೆದ ವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದು ದೃಢವಾಗಿದೆ. ನಂತರ, ಇತರ ಸದಸ್ಯರು ತಕ್ಷಣವೇ ಹೋಮ್ ಕ್ವಾರಂಟೈನ್‌ಗೆ ಆಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಶೂಟಿಂಗ್ ಪುನರಾರಂಭಗೊಂಡ ನಂತರ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಆಗ ಪ್ರತಿಯೊಬ್ಬರಿಗೂ ನೆಗೆಟಿವ್ ಎಂದು ಬಂದಿತ್ತು. ಆದರೂ ಮೂರು ಜನರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ, ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ತಂಡದ ಆರು ಜನರಿಗೆ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ. ಪಂಕಜ್, ಯಾಮಿ ಮತ್ತು ಅಮಿತ್ ರಾಯ್ ಅವರಿಗೆ ನೆಗೆಟಿವ್ ಬಂದಿದೆ. ಇನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಪುನರಾರಂಭವಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Andhadhun ಚಿತ್ರದ ತೆಲುಗು-ಮಲಯಾಳಂ ರೀಮೇಕ್‌ಗಳಲ್ಲಿನ ಮಿಸ್ಸಿಂಗ್​​ ಅಂಶಗಳು..!

OMG ಚಿತ್ರವು ಧರ್ಮ ಮತ್ತು ದೇವರ ಕುರಿತ ವಿಡಂಬನಾತ್ಮಕ ಹಾಸ್ಯ ಭರಿತ ಚಿತ್ರವಾಗಿದೆ. ಕಂಜಿ ಎಂಬ ಅಂಗಡಿ ಮಾಲೀಕನ ಜೀವನದ ಸುತ್ತ ಕಥೆ ಸುತ್ತುತ್ತದೆ. ಭೂಕಂಪನದಿಂದ ಆತನ ಅಂಗಡಿ ನಾಶವಾದಾಗ, ಕಂಜಿಯು ದೇವರ ಮೇಲೆ ಮೊಕದ್ದಮೆ ಹೂಡಲು ನಿರ್ಧರಿಸಿದನು ಮತ್ತು ಆ ಮೂಲಕ ಭಾರತದ ಭ್ರಷ್ಟ ದೇವಮಾನವನನ್ನು ಬಹಿರಂಗಪಡಿಸುತ್ತಾನೆ. ಈ ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು.

ಸಾಲು ಸಾಲು ಚಿತ್ರಗಳಲ್ಲಿ ಅಕ್ಷಯ್ ಬ್ಯುಸಿ

ಸಧ್ಯ ಅಕ್ಷಯ್ ಕುಮಾರ್ ಬಾಲಿವುಡ್​ನಲ್ಲಿ ಬ್ಯೂಸಿ ನಟರಾಗಿದ್ದು. ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅಕ್ಷಯ್ ಕುಮಾರ್​ ಹಾಗೂ ಕತ್ರಿನಾ ಕೈಫ್​ ಅಭಿನಯದ ಸೂರ್ಯವಂಶಿ ಸಿನಿಮಾ ಸಿದ್ಧವಾಗಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯವಾಗಿದೆ.ಲಾಕ್​ಡೌನ್​ನಿಂದಾಗಿ ಇನ್ನೂ ಈ ಸಿನಿಮಾ ರಿಲೀಸ್ ಆಗಿಲ್ಲ. ಸಿನಿಮಾದ ಟ್ರೇಲ್ ಕಳೆದ ವರ್ಷವೇ ರಿಲೀಸ್ ಆಗಿತ್ತು. ಆದರೆ ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದ ರಿಲೀಸ್ ದಿನಾಂಕ ಸಹ ಇನ್ನೂ ಪ್ರಕಟವಾಗಿಲ್ಲ.

ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಸಿನಿಮಾ ಸಹ ರಿಲೀಸ್​ಗೆ ಸಿದ್ಧವಾಗಿದೆ. ಆದರೆ, ಕೊರೋನಾ ಕಾರಣದಿಂದಾಗಿ ಈ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. 2017ರಲ್ಲಿ ಮಿಸ್​ ವರ್ಲ್ಡ್​ ಆದ ಮಾನುಷಿ ಚಿಲ್ಲಾರ್ ಈ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾಗಲಿದ್ದಾರೆ. ರಾಮ್​ಸೇತು. ಈ ಚಿತ್ರದ ಚಿತ್ರೀಕರಣ ಅಯೋಧ್ಯೆಯಲ್ಲಿ ನಡೆಯುತ್ತಿತ್ತು. ಆದರೆ, ಅಕ್ಷಯ್ ಕುಮಾರ್ ಅವರಿಗೆ ಕೊರೋನಾ ಸೋಂಕಾದ ಕಾರಣದಿಂದ ಆಗ ಶೂಟಿಂಗ್​ ನಿಲ್ಲಿಸಲಾಗಿತ್ತು.

ಇದನ್ನೂ ಓದಿ: ಬೇರ್ ಗ್ರಿಲ್ಸ್ ಜೊತೆ ನಿರ್ಜನ ದ್ವೀಪದಲ್ಲಿ ಅಜಯ್ ದೇವಗನ್ ಸಾಹಸ

ರಕ್ಷಾ ಬಂಧನ್​ ಸಿನಿಮಾದ ಮೊದಲ ಹಂತದ ಚಿತ್ರೀಕರಣ  ಮುಗಿದಿದೆ, ಆನಂದ್​ ಎಲ್ ರೈ ಅವರ ಅತ್ರಂಗಿ ರೇ , ಬಚ್ಚನ್​ ಪಾಂಡೆ ಸೇರಿದಂತೆ ಇನ್ನೂ ಹಲವು ಚಿತ್ರಗಳು ಅಕ್ಷಯ್​ ಕೈನಲ್ಲಿದೆ.
Published by:Sandhya M
First published: