• Home
  • »
  • News
  • »
  • entertainment
  • »
  • Ashwini Puneeth Rajkumar: ನನಗೆ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಿದ್ರು ಅಪ್ಪು; ಮೊದಲ ಬಾರಿಗೆ ಪುನೀತ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಶ್ವಿನಿ

Ashwini Puneeth Rajkumar: ನನಗೆ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಿದ್ರು ಅಪ್ಪು; ಮೊದಲ ಬಾರಿಗೆ ಪುನೀತ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಶ್ವಿನಿ

ಅಶ್ವಿನಿ ಪುನೀತ್​ ರಾಜ್​ಕುಮಾರ್ ಸಂದರ್ಶನ

ಅಶ್ವಿನಿ ಪುನೀತ್​ ರಾಜ್​ಕುಮಾರ್ ಸಂದರ್ಶನ

ಗಂಧದಗುಡಿ ಚಿತ್ರ ಹಾಗೂ ಪತಿ ಪುನೀತ್ ಬಗ್ಗೆ ಮೊದಲ ಬಾರಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮೌನ ಮುರಿದಿದ್ದಾರೆ. ಪುನೀತ ಪರ್ವ ಮಾಡಿದ್ದೆ ಅಭಿಮಾನಿಗಳಿಗಾಗಿ, ಅಪ್ಪು ಲಾಸ್ಟ್ ಇವೆಂಟ್ ಸಕ್ಸಸ್​ ಆಗಿದ್ದು ನನಗೆ ತೃಪ್ತಿ ಕೊಟ್ಟಿದೆ ಎಂದು ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಪುನೀತ್​ ರಾಜ್​ ಕುಮಾರ್ (Puneeth Rajkumar)​ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಅಕ್ಟೋಬರ್​ 28 ರಂದು ಬಿಡುಗಡೆಯಾಗುತ್ತಿದೆ. ಒಂದು ದಿನ ಮುನ್ನ, ಅಂದರೆ ಅ.27 ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಆಯೋಜನೆಗೊಂಡಿದೆ. ಇದೀಗ ಪುನೀತ್ ರಾಜ್​ಕುಮಾರ್​ ಪತ್ನಿ ಹಾಗೂ ಗಂಧದ ಗುಡಿ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ ಕುಮಾರ್ (Ashwini Puneeth Rajkumar)​ ಮೊದಲ ಬಾರಿ ಗಂಧದ ಗುಡಿ ಸಾಕ್ಷ್ಯ ಚಿತ್ರ ಹಾಗೂ ಪುನೀತ್​ ಪಯಣದ ಬಗ್ಗೆ ಮಾತಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ (Santosh Anand Ram) ಅವರು ಅಶ್ವಿನಿ ಅವರ ಸಂದರ್ಶನ ಮಾಡಿದ್ದಾರೆ. 


 ಅಪ್ಪು ಕನಸನ್ನು ನನಸಾಗಿಸಲು ಬಂದ್ರು ಅಶ್ವಿನಿ


ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕ್ಯಾಮೆರಾ ಮುಂದೆ ಬಂದು ಮಾತಾಡಿಲ್ಲ. ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು, ಆದ್ರೆ ಎಲ್ಲೂ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ಇದೀಗ ಅಶ್ವಿನಿ ಅವರು ಪುನೀತ್ ರಾಜ್​ಕುಮಾರ್​ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಪ್ಪು ಅಭಿಮಾನಿಗಳ ಮುಂದೆ ತರಲು ಅಶ್ವಿನಿ ಸಾಕಷ್ಟು ಶ್ರಮಪಟ್ಟಿದ್ದಾರೆ.


ಪುನೀತ್ ಪತ್ನಿ ಅಶ್ವಿನಿ ಮನದಾಳದ ಮಾತು


ಗಂಧದ ಗುಡಿ ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ಮಾಪಕಿ ಅಶ್ವಿನಿ ಅವರನ್ನು ಅನೇಕ ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಶನದ ವೀಡಿಯೋ 8 ನಿಮಿಷಗಳ ಇದ್ದು, ಸಂದರ್ಶನದಲ್ಲಿ ನಿರ್ಮಾಪಕಿ ಅಶ್ವಿನಿ ಅವರು ಗಂಧದಗುಡಿ ಚಿತ್ರ ಹಾಗೂ ಪತಿ ಪುನೀತ್​ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.


ashwini puneeth rajkumar to give voice to gandhada gudi documentary


ಅಪ್ಪು ಲಾಸ್ಟ್ ಇವೆಂಟ್ ಸಕ್ಸಸ್​ ಆದ ತೃಪ್ತಿ ಇದೆ


ಗಂಧದಗುಡಿ ಚಿತ್ರ ಹಾಗೂ ಪತಿ ಪುನೀತ್ ಬಗ್ಗೆ ಮೊದಲ ಬಾರಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮೌನ ಮುರಿದಿದ್ದಾರೆ. ಪುನೀತ ಪರ್ವ ಮಾಡಿದ್ದೆ ಅಭಿಮಾನಿಗಳಿಗಾಗಿ ಅವರ 1 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ರು. ಅಪ್ಪು ಲಾಸ್ಟ್ ಇವೆಂಟ್ ಸಕ್ಸಸ್​ ಆಗಿದ್ದು ನನಗೆ ತೃಪ್ತಿ ಕೊಟ್ಟಿದೆ. ಬೇರೆ ಇಂಡಸ್ಟ್ರಿಗಳಿಂದಲೂ ತುಂಬಾ ಜನ ಬಂದಿದ್ರು. ನಮ್ಮ ಇಡೀ ಕುಟುಂಬ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೆ ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್​ ಹೇಳಿದ್ದಾರೆ.


ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು


ಗಂಧದಗುಡಿ ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು ಅದರಲ್ಲಿ ಒಂದು ಕತೆ ಇತ್ತು. ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು ಹಾಗೂ ಜರ್ನಿಯಾಗಿದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಮೂಲಕ ಈ ಸಿನಿಮಾವನ್ನು ಕನ್ನಡ ಜನತೆಗೆ ತೋರಿಸ್ಬೇಕು ಎಂದು ಅಪ್ಪು ಅವರೇ ನಿರ್ಧರಿಸಿದ್ರು.  ಈ ಚಿತ್ರದಲ್ಲಿ ಅವರಿಗೆ ಮೇಕಪ್​ ಇಲ್ಲ, ಹೆಚ್ಚು ಜನ ಇಲ್ಲ. ಇದರಲ್ಲಿ ಪುನೀತ್​ ಅವರನ್ನು ಅವರನ್ನಾಗಿಯೇ ನೋಡಬಹುದಾಗಿದೆ ಎಂದು ಅಶ್ವಿನಿ ಹೇಳಿದ್ದಾರೆ.


ಇದನ್ನೂ ಓದಿ: Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು
ಪ್ರತಿ ಶೆಡ್ಯೂಲ್ ಹೋಗುವಾಗಲ್ಲು ಖುಷಿಯಾಗಿ ಹೋಗ್ತಿದ್ದೆ. ನಾನು ಕಾಳಿ ರಿವರ್ ನಲ್ಲಿ ನಡೆದ ಶೂಟಿಂಗ್​ಗೆ ಹೋಗಿದ್ದೆ. ಅಲ್ಲಿ ಶೂಟಿಂಗ್ ಇದ್ದಾಗ ಇಡೀ ದಿನ ಮಾತನಾಡಿರಲಿಲ್ಲ. ಒಂದು ಬೆಟ್ಟ ಹತ್ತಿ ನನಗೆ ಕಾಲ್ ಮಾಡಿದ್ರು. ನಿನಗೆ ಕಾಲ್ ಮಾಡೊಕೆ ಬೆಟ್ಟ ಹತ್ತಿದ್ದೀನಿ ಎಂದು ಹೇಳಿದ್ರು. ನೀನು ಇಲ್ಲಿಗೆ ಬರಲೇ ಬೇಕು ಅಂತ ಹೇಳಿದ್ರು. ನಾನು ಎರಡು ದಿನ ಬಿಟ್ಟು ಅಲ್ಲಿಗೆ ಹೋದೆ. ಟ್ರಕ್ಕಿಂಗ್ ಮಾಡಿದ್ದು ನನಗೆ ಖುಷಿಯಾಯ್ತು ಎಂದು ಅಶ್ವಿನಿ ಅವರು ಮನಬಿಚ್ಚಿ ಮಾತಾಡಿದ್ದಾರೆ.


ಇದನ್ನೂ ಓದಿ: Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮ; ರಜನಿಕಾಂತ್​, ಜ್ಯೂ. ಎನ್​ಟಿಆರ್​ಗೆ ಸರ್ಕಾರದ ಆಹ್ವಾನ


ಒಂದು ಕಡೆ ಬೇಸರ; ಒಂದು ಕಡೆ ಹೆಮ್ಮೆ


ಈ ಗಂಧದ ಗುಡಿ ಚಿತ್ರ ನನಗೆ ಹೆಮ್ಮೆ ತಂದಿದೆ. ಒಂದು ಕಡೆ ಅವರಿಲ್ಲದ ಬೇಸರ ಕೂಡ ಇದೆ. ಗಂಧದಗುಡಿ ನೋಡಿದ ಮೇಲೆ ಯುವಕರಲ್ಲಿ ಹಾಗೂ ಸಮಾಜದಲ್ಲಿ ಅನೇಕ ಬದಲಾವಣೆ ತರುತ್ತದೆ ಎನ್ನುವ ನಂಬಿಕೆ ಇದೆ ಎಂದ್ರು. ಇನ್ನು 28ನೇ ತಾರೀಖು ಎಲ್ಲರೂ ಗಂಧದಗುಡಿ ಚಿತ್ರವನ್ನು ಥಿಯೇಟರ್​ನಲ್ಲಿ ನೋಡಿ ನಮಗೆ ಆಶೀರ್ವಾದ ಮಾಡಿ ಎಂದು ಇದೇ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕನ್ನಡ ಜನತೆಯಲ್ಲಿ ಮನವಿ ಮಾಡಿದ್ದಾರೆ. 
Published by:ಪಾವನ ಎಚ್ ಎಸ್
First published: