• Home
 • »
 • News
 • »
 • entertainment
 • »
 • Puneeth Rajkumar: ಗಂಧದ ಗುಡಿಗೆ ಧ್ವನಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್​

Puneeth Rajkumar: ಗಂಧದ ಗುಡಿಗೆ ಧ್ವನಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್​

ಗಂಧದ ಗುಡಿ ಸಾಕ್ಷ್ಯಚಿತ್ರಕ್ಕೆ ಅಶ್ವಿನಿ ಧ್ವನಿ

ಗಂಧದ ಗುಡಿ ಸಾಕ್ಷ್ಯಚಿತ್ರಕ್ಕೆ ಅಶ್ವಿನಿ ಧ್ವನಿ

ಪುನೀತ್ ರಾಜ್​ಕುಮಾರ್ ಕನಸಿನ ಪ್ರಾಜೆಕ್ಟ್​ ಗಂಧದ ಗುಡಿ ಸಾಕ್ಷ್ಯ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ಇದೀಗ ಸ್ವತಃ ಅಶ್ವಿನಿ ಪುನೀತ್ ಅವರು ಈ ಸಾಕ್ಷ್ಯಚಿತ್ರಕ್ಕೆ ಕಂಠದಾನ ಮಾಡಿದ್ದಾರೆ

 • News18 Kannada
 • Last Updated :
 • Karnataka, India
 • Share this:

ಗಂಧದಗುಡಿ ಸಾಕ್ಷ್ಯಚಿತ್ರಕ್ಕೆ ಇಡೀ ಕರುನಾಡೇ ಕಾತುರದಿಂದ ಕಾಯ್ತಿದೆ. ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​ ಅವರು ಚಿತ್ರವನ್ನು ಯಶಸ್ವಿಯಾಗಿ ಅಭಿಮಾನಿಗಳ ಮುಂದಿಡಲು ಬಹಳ ಶ್ರಮವಹಿಸುತ್ತಾರೆ. ಪವರ್ ಸ್ಟಾರ್​ ಪುನೀತ್​ ಕುಮಾರ್ (Puneeth Rajkumar)​ ನಿಧನದ ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಯಾವ ಕಾರ್ಯಕ್ರಮದಲ್ಲೂ ಹೆಚ್ಚಾಗಿ ಮಾತಾಡಿಲ್ಲ. ಪಿಆರ್​ಕೆ ಪ್ರೊಡೆಕ್ಷನ್​ನ (PRK Production) ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್​ ಹೊತ್ತುಕೊಂಡು ಮುನ್ನಡೆಸುತ್ತಿದ್ದಾರೆ.


ಕಂಠದಾನ ಮಾಡಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​


ಪುನೀತ್ ರಾಜ್​ಕುಮಾರ್ ಕನಸಿನ ಪ್ರಾಜೆಕ್ಟ್​ ಗಂಧದ ಗುಡಿ ಸಾಕ್ಷ್ಯ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ಇದೀಗ ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದು ಯಾರು ಎನ್ನುವ ವಿಚಾರ ರಿವೀಲ್ ಆಗಿದೆ. ಸ್ವತಃ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಈ ಸಾಕ್ಷ್ಯಚಿತ್ರಕ್ಕೆ ಕಂಠದಾನ ಮಾಡಿದ್ದಾರೆ ಅನ್ನೋದು ವಿಶೇಷ.


Rajkumara Film Director Santhosh Ananddram talks about Power Star Puneeth Rajkumar
ಗಂಧದ ಗುಡಿ ಸಿನಿಮಾ ನೋಡೋಣ ಬನ್ನಿ


ಡಾಕ್ಯುಮೆಂಟರಿಯ ಜವಾಬ್ದಾರಿ ಹೊತ್ತ ಅಶ್ವಿನಿ


ಪುನೀತ್ ರಾಜ್​ಕುಮಾರ್ ಅವರು ಗಂಧದ ಗುಡಿ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಇದರ ಟೈಟಲ್ ರಿವೀಲ್ ಆಗುವುದಕ್ಕೂ ಕೆಲವೇ ದಿನದ ಮೊದಲು ಪುನೀತ್ ನಿಧನ ಹೊಂದಿದರು. ನವೆಂಬರ್ 1ಕ್ಕೆ ಇದರ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು.  ಪುನೀತ್ ಅಕ್ಟೋಬರ್ 29ರಂದೇ ಮೃತಪಟ್ಟರು. ನಂತರ ಈ ಡಾಕ್ಯುಮೆಂಟರಿಯ ಜವಾಬ್ದಾರಿ ಅಶ್ವಿನಿ ಅವರ ತೆಗೆದುಕೊಂಡರು.

ಇದನ್ನೂಓದಿ: Gandhada Gudi Trailer: ಅಪ್ಪು ನಿಮ್ಮನ್ನ ಗಂಧದ ಗುಡಿಗೆ ಕರೆದುಕೊಂಡು ಹೋಗ್ತಾರೆ ಬನ್ನಿ


ಗಂಧದ ಗುಡಿಗೆ ಅಶ್ವಿನಿ ಧ್ವನಿ


ಪುನೀತ್ ನಿಧನದ ವೇಳೆ ಕೆಲವು ದಿನಗಳು ಶೂಟಿಂಗ್ ಬಾಕಿ ಇತ್ತು. ಅದನ್ನು ಅಮೋಘವರ್ಷ ಅವರು ಪೂರ್ಣಗೊಳಿಸಿದ್ದಾರೆ. ಈಗ ಅಕ್ಟೋಬರ್ 28ರಂದು ಗಂಧದ ಗುಡಿ ರಿಲೀಸ್ ಆಗುತ್ತಿದೆ. ಇದಕ್ಕೆ ಯಾರು ಧ್ವನಿ ನೀಡುತ್ತಾರೆ ಎಂಬ ಕುತೂಹಲ ಇತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಇದಕ್ಕೆ ಧ್ವನಿ ನೀಡುತ್ತಾರೆ ಎನ್ನಲಾಗಿದೆ.


ಪುನೀತ ಪರ್ವ ಕಾರ್ಯಕ್ರಮಕ್ಕೆ ಸಿದ್ಧತೆ


ಇನ್ನು ಪುನೀತ ಪರ್ವ ಕಾರ್ಯಕ್ರಮ ನಡೆಯುವ ಸ್ಥಳ, ಸಮಯ, ಡ್ರೆಸ್‌ ಕೋಡ್‌ ಹಾಗೂ ಇನ್ನಿತರ ಮಾಹಿತಿಯನ್ನು ಕೂಡಾ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ಅಕ್ಟೋಬರ್‌ 21 ಶುಕ್ರವಾರದಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಹಾಗೇ ಈ ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ಡ್ರೆಸ್‌ ಧರಿಸಿ ಬರಲು ಮನವಿ ಮಾಡಲಾಗಿದೆ.


ನಾಲ್ಕು ದಿನ ಹಲವು ಕಾರ್ಯಕ್ರಮ


ಅಕ್ಟೋಬರ್‌ 26 ರಂದು ವಿಶ್ವದಾಖಲೆ ಮಟ್ಟದಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರ 75 ಕಟೌಟ್‌ಗಳನ್ನು ನಿಲ್ಲಿಸಲಾಗುವುದು. ಅಕ್ಟೋಬರ್‌ 27 ರಂದು ಮಧ್ಯಾಹ್ನ 1.00 ಗಂಟೆಗೆ 75 ಕಟೌಟ್‌ಗಳಿಗೆ ಭಾರೀ ಹೂವಿನ ಹಾರ ಹಾಕುವ ಕಾರ್ಯಕ್ಕೆ ಚಾಲನೆ. ಅದೇ ದಿನ ಸಂಜೆ 7.00ಕ್ಕೆ ಸ್ಮಾರಕದ ಸುತ್ತ ಸುಮಾರು 1 ಕಿಲೋ ಮೀಟರ್‌ ವ್ಯಾಪ್ತಿವರೆಗೂ ಲೈಟಿಂಗ್‌ ಅಳವಡಿಕೆ ಅಕ್ಟೋಬರ್‌ 28 ರಂದು ಗಂಧದಗುಡಿ ಸಿನಿಮಾ ಬಿಡುಗಡೆ ಅಂಗವಾಗಿ ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ.


The 67th Parle Filmfare Awards South 2022 lifetime achievement award Puneeth Raj Kumar see details
ಪುನೀತ್ ರಾಜ್‍ಕುಮಾರ್ ಗೆ ಜೀವಮಾನದ ಸಾಧನೆ ಪ್ರಶಸ್ತಿ


ಇದನ್ನೂ ಓದಿ: Puneeth Rajkumar: ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ


ಅಕ್ಟೋಬರ್‌ 29 ರಂದು ಪುನೀತ್​ ಪುಣ್ಯಸ್ಮರಣೆ


ಅಕ್ಟೋಬರ್‌ 29 ರಂದು ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸ್ಮಾರಕಕ್ಕೆ ಭೇಟಿ ನೀಡುವ ಅಭಿಮಾನಿಗಳಿಗೆ ಬೆಳಗ್ಗೆ 8 ರಿಂದ ಸಂಜೆ 6ವರೆಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ

Published by:ಪಾವನ ಎಚ್ ಎಸ್
First published: