Puneeth Rajkumar: ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಪುನೀತ್ ಅವರ ಪತ್ನಿ ಅಶ್ವಿನಿ (Ashwini PuneethRajkumar) ಕಣ್ಣೀರು ಹಾಕುತ್ತಲೇ ಊಟ ಬಡಿಸಿದರು. ಅನ್ನಸಂತರ್ಪಣೆಗೆ ಆಗಮಿಸಿರುವ ಅಪಾರ ಅಭಿಮಾನಿಗಳನ್ನು (Puneeth Fans) ಕಂಡು ಕಣ್ಣೀರು ಹಾಕುತ್ತಲೇ ಅಶ್ವಿನಿ ಅವರು ಕಾರ್ ಹತ್ತಿದರು.

ಅನ್ನ ಸಂತರ್ಪಣೆಗೆ ಚಾಲನೆ

ಅನ್ನ ಸಂತರ್ಪಣೆಗೆ ಚಾಲನೆ

  • Share this:
ಬೆಂಗಳೂರು: ಚಂದನವನದ ರಾಜಕುಮಾರ ಪುನೀತ್ ರಾಜ್ ಕುಮಾರ್ (Power Star Puneeth Rajkumar) ನಮ್ಮನಗಲಿ ಇಂದಿಗೆ 12 ದಿನ. ನಿನ್ನೆ 11 ದಿನ ಕಾರ್ಯವನ್ನು ದೊಡ್ಮನೆ ಕುಟುಂಬ ನೆರವೇರಿಸಿತ್ತು. ಅಪ್ಪುಗೆ ಇಷ್ಟವಾದ ಆಹಾರಗಳನ್ನಿರಿಸಿ ಪೂಜೆ ಸಲ್ಲಿಸಲಾಗಿತ್ತು. ಇಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನಟ ಶಿವರಾಜ್ ಕುಮಾರ್ (Shivarajkumar) ಮತ್ತು ಪುನೀತ್ ಅವರ ಪತ್ನಿ ಅಶ್ವಿನಿ (Ashwini PuneethRajkumar) ಕಣ್ಣೀರು ಹಾಕುತ್ತಲೇ ಊಟ ಬಡಿಸಿದರು. ಅನ್ನಸಂತರ್ಪಣೆಗೆ ಆಗಮಿಸಿರುವ ಅಪಾರ ಅಭಿಮಾನಿಗಳನ್ನು (Puneeth Fans) ಕಂಡು ಕಣ್ಣೀರು ಹಾಕುತ್ತಲೇ ಅಶ್ವಿನಿ ಅವರು ಕಾರ್ ಹತ್ತಿದರು. ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar), ನಟ ಮುರಳಿ (Murali) ಸೇರಿದಂತೆ ದೊಡ್ಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.

ಅನ್ನ ಸಂತರ್ಪಣೆ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಅಭಿಮಾನಿಗಳಿಗೆ ಊಟ ಹಾಕಬೇಕು ಅನ್ನೋ  ಆಸೆ ಅಪ್ಪುಗೆ ಇತ್ತು. ಆದ್ರೆ ಆಸೆ ಈ ರೀತಿ ನೆರವೇರುತ್ತಿರೋದಕ್ಕೆ ನೋವು ಆಗುತ್ತಿದೆ. ಅಭಿಮಾನಿಗಳಿಂದಲೇ ನಾವು ಇಲ್ಲಿದ್ದೇವೆ. ಅಭಿಮಾನಿಗಳ ನೀಡಿದ್ದರಿಂದಲೇ ಈ ಹಂತದಲ್ಲಿದ್ದೇವೆ. ನಾವು ಮಾಡಿದ ಕೆಲಸ ನಮ್ಮ ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಅದೇ ರೀತಿ ಅಪ್ಪು ಕೆಲಸ ಮಾಡುತ್ತಿದ್ದೇನೆ. ಎಲ್ಲ ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಯಾರಿಗೂ ನಿರಾಸೆ ಮಾಡಲ್ಲ. ಎಷ್ಟೋ ಸಾಧ್ಯವಾಗುತ್ತೋ ಅಷ್ಟು ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ:  Puneeth Rajkumar ತಿಥಿ ಕಾರ್ಯದ ದಿನ ಕಾವೇರಿ ನದಿಗೆ ತರ್ಪಣ ಬಿಟ್ಟ ನಟ Vinod Raj

ಶಿವಣ್ಣನಿಂದ ರಕ್ತದಾನ

ನವೆಂಬರ್ 16ರಂದು ವಾಣಿಜ್ಯ ಚಲನಚಿತ್ರ ಮಂಡಳಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವಿದೆ. ಆ ದಿನ  ಬೇರೆ ಇಂಡಸ್ಟ್ರಿಯ ಕಲಾವಿದರು ಸಹ ಆಗಮಿಸಲಿದ್ದಾರೆ. ಇಂದು ಎಲ್ಲ ಅಭಿಮಾನಿಗಳು ಶಾಂತಿಯುತವಾಗಿ ಕಾರ್ಯಕ್ರಮ ನಡೆಸಿಕೊಡಬೇಕು. ಯಾರೂ ಗಲಾಟೆ ಮಾಡಿಕೊಳ್ಳಬೇಡಿ ಎಂದು ಹೇಳಿದರು. ಅನ್ನ ಸಂತರ್ಪಣೆಯ ನಂತರ ಶಿವರಾಜ್ ಕುಮಾರ್ ರಕ್ತದಾನ ಮಾಡಿದರು.

ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್


ನಟ ಮುರಳಿ ಮಾತನಾಡಿ, ಅಪ್ಪು ದೇವರ ಬಳಿ ಹೋಗಿದ್ದಾರೆ. ಅವರು ನಮ್ಮನ್ನ ಅಗಲಿದ್ದಾರೆಎ ಎಮದು ಹೇಳಲು ಆಗುತ್ತಿಲ್ಲ. ಎಲ್ಲರ‌ ಮನಸ್ಸಿನಲ್ಲಿ ಉಳಿದಿದ್ದಾರೆ. ಅಪ್ಪು ಅವರ ಸಾಮಾಜಿಕ ಕಾರ್ಯ ಮಾದರಿಯಾಗಿದೆ. ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡುತ್ತಿರೋದಕ್ಕೆ ಅಪ್ಪು ಅವರಿಗೆ ಸಂತೋಷವಾಗುತ್ತದೆ. ಎಲ್ಲರೂ ಹೊಟ್ಟೆ ತುಂಬ ಊಟ ಮಾಡಿದ್ರೆ ಅಪ್ಪು ಖುಷಿಪಡ್ತಾರೆ ಎಂದರು.

ನಾನ್ ವೆಜ್ ಅಡುಗೆ ಮಾಹಿತಿ: 

ಗೀ ರೈಸ್,  ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ ಪಾಯಸ ಹಾಗೂ ಅನ್ನ, ರಸಂ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಮಾಂಸಾಹಾರ ಅಡುಗೆ ಸಿದ್ಧಪಡಿಸಲು ಸೌದೆ ಒಲೆಯ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:  Puneeth Rajkumar: ಮತ್ತೊಂದು ಹಂತ ತಲುಪಿದ ಅಪ್ಪು ಸಾವಿನ ನಿಗೂಢತೆ!

ವೆಜ್ ಅಡುಗೆ ಮಾಹಿತಿ:

ಗೀರೈಸ್ ಮತ್ತು ಕುರ್ಮ, ಹಾಲು ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಅಕ್ಕಿಪೇರಣಿ ಪಾಯಸ, ಮಸಾಲೆ ವಡೆ ಹಾಗೂ ಅನ್ನರಸಂ . ಸಸ್ಯಹಾರ ಅಡುಗೆಗೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ.

50, 60,70 ಹಾಗೂ 80 ಕೆಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ಮಾಡಲಾಗುತ್ತಿದೆ.  ಪುನೀತ್ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುತ್ತಿದ್ದ ಬಾಣಸಿಗರನ್ನು ಇಲ್ಲಿಯೂ ನಿಯೋಜನೆ ಮಾಡಲಾಗಿದೆ. ಭಾನುವಾರವೇ ಅಡುಗೆ ಸಿದ್ಧತೆ ಆರಂಭಿಸಲಾಗಿತ್ತು.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 3 ಎಸಿಪಿ, 32 ಪೊಲೀಸ್ ಇನ್ಸ್ಪೆಕ್ಟರ್, 70 ಪಿಎಸ್ಐ , 6 ಕೆಎಸ್ಆರ್ ಪಿ ತುಕಡಿ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.
Published by:Mahmadrafik K
First published: