Puneeth Rajkumar: ಅಪ್ಪು ಕನಸು ನನಸು ಮಾಡುತ್ತಿರೋ ಅಶ್ವಿನಿ: ಪುನೀತ್​ ಪತ್ನಿ ಕಡೆಯಿಂದ ಬಿಗ್​ ಅನೌನ್ಸ್​​ಮೆಂಟ್​!

Puneeth Rajkumar: ಆ ಕನಸುಗಳು ಪೂರ್ಣಗೊಳ್ಳುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್​ ರಾಜ್​ಕುಮಾರ್​(Ashwini Puneeth Rajkumar) ಅವರ ಹೆಗಲು ಏರಿದೆ. ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಸೇರಿ ಎಲ್ಲ ಉದ್ಯಮಗಳನ್ನು ಅವರೇ ನೋಡಿಕೊಳ್ಳಬೇಕಿದೆ. ಈಗ ಅಶ್ವಿನಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್, ಪುನೀತ್​ ರಾಜ್​​ಕುಮಾರ್​

ಅಶ್ವಿನಿ ಪುನೀತ್​ ರಾಜ್​ಕುಮಾರ್, ಪುನೀತ್​ ರಾಜ್​​ಕುಮಾರ್​

  • Share this:
‘ಬೇಸರದ ರಾಟೆಯೂ ಎದೆಯಲ್ಲಿ ತಿರುಗಿ.. ತಿರುಗುವ ಈ ಭೂಮಿಯೆ ನಿಂತಿದೆ ಕೊರಗಿ.. ಎಲ್ಲೆ ನೋಡು ಹಳೇ ಗುರುತು.. ಬಾಳೋದೇಗೆ ಎಲ್ಲಾ ಮರೆತು..’ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್(Power Star Puneeth Rajkumar)​ ಅವರನ್ನು ನಮ್ಮೊಂದಿಗೆ ಇಲ್ಲ ಅನ್ನುವುದನ್ನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೊತೆ ಇದ್ದಾರೆ.. ಕೋಟ್ಯಂತರ ಅಭಿಮಾನ(Fans)ಗಳ ಮನಸ್ಸಿನಲ್ಲಿ ಅಪ್ಪು ಇದಾರೆ. ಎಲ್ಲಿವರೆಗೂ ಅಭಿಮಾನಿಗಳು ಇರುತ್ತಾರೆ. ಅಲ್ಲಿವರೆಗೂ ಅಪ್ಪು ಜೀವಂತ.. ಅಪ್ಪು ಅವರ ಪರಮಾತ್ಮ(Paramathma) ಸಿನಿಮಾದ ಕ್ಲೈಮ್ಯಾಕ್ಸ್(Climax)​​ನಲ್ಲಿ ಒಂದು ಸ್ಲೋಗನ್​ ಇದೆ. ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಅಪ್ಪು(Appu) ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ. ಬುದಕಿದ ಅಷ್ಟೂ ದಿನ ಅಪ್ಪು ಮಾದರಿಯಾಗುವಂತೆ ಜೀವನ ನಡೆಸಿದವರು, ಸಾಮಾಜಿಕ ಕೆಲಸಗಳು, ವ್ಯಕ್ತಿತ್ವ, ಸರಳತೆ ಎಲ್ಲವೂ ಇವರನ್ನು ನೋಡಿ ಕಲಿಯಬೇಕು. ಪುನೀತ್​ ರಾಜ್​ಕುಮಾರ್​ ಅವರು ಕೂಡ ಅನೇಕ ಕನಸು(Dream)ಗಳನ್ನು ಕಂಡಿದ್ದರು . ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆ ಕನಸುಗಳು ಪೂರ್ಣಗೊಳ್ಳುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್​ ರಾಜ್​ಕುಮಾರ್​(Ashwini Puneeth Rajkumar) ಅವರ ಹೆಗಲು ಏರಿದೆ. ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಸೇರಿ ಎಲ್ಲ ಉದ್ಯಮಗಳನ್ನು ಅವರೇ ನೋಡಿಕೊಳ್ಳಬೇಕಿದೆ. ಈಗ ಅಶ್ವಿನಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದಾರೆ. ಹಾಗಾದರೆ ಏನದು ವಿಚಾರ?ಏನದು ಮಹತ್ತರ ಘೋಷಣೆ?  ಆ ಪ್ರಶ್ನೆಗೆ ಇಲ್ಲಿದೆ ಉತ್ತರ. 

ರಿಲೀಸ್​ ಆಗಲಿದೆ ‘ಗಂಧದಗುಡಿ’ ಡಾಕ್ಯಮೆಂಟರಿ

‘ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ನವೆಂಬರ್​ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಈಗ ಇದನ್ನು ಮಾಡುವ ಬಗ್ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಚಿಂತನೆ ಮಾಡಿದ್ದಾರೆ. ಆದಷ್ಟು ಬೇಗ ಇದನ್ನು ರಿಲೀಸ್​ ಮಾಡುವ ಮಾತನಾಡಿದ್ದಾರಂತೆ ಅಶ್ವಿನಿ ರಾಜ್​ಕುಮಾರ್​.ಇದನ್ನು ಓದಿ : ಫೈಟ್ ಸೀನ್​ಗೆ ಎಂದೂ Dupe ಬಳಸೇ ಇಲ್ಲ ಪವರ್ ಸ್ಟಾರ್, ಅವರ ಆಕ್ಷನ್ ನೋಡಿ Allu Arjun ಕೂಡಾ ಶಾಕ್ ಆಗಿದ್ರಂತೆ!

ಪುನೀತ್ ರಾಜ್​ಕುಮಾರ್​ ಅವರ ಕೊನೆಯ  ಪೋಸ್ಟ್​!

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್​ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್​ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು.  ಆದರೆ ಅಕ್ಟೋಬರ್​ 29ರಂದು ಅಪ್ಪು ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದರು. ಅಪ್ಪು ಅವರು ಹೊಸ ಸಿನಿಮಾ ಅನೌನ್ಸ್​ ಮಾಡಲು ಪ್ಲಾನ್​ ಮಾಡಿಕೊಂಡಿದ್ದರು ಹೇಳಲಾಗಿತ್ತು. ಬಳಿಕ ಇದೊಂದು ಡಾಕ್ಯುಮೆಂಟರಿ ಎಂದು ತಿಳಿದು ಬಂದಿತ್ತು.


ಇದನ್ನು ಓದಿ : ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್​, ಸಂತೋಷ್​ ಆನಂದ್​ರಾಮ್​ ಕೊಟ್ಟ ಸುಳಿವೇನು?

‘ನನಸಾಗಿಸುವ ಜವಾಬ್ದಾರಿ ನಮ್ಮದು’

ಅಪ್ಪು ಅವರು ಹೇಳದೇ ಕೇಳದೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಕನಸುಗಳು ಕೂಡ ಅರ್ಧದಲ್ಲೇ ನಿಲುತ್ತಾ ಎಂಬ ಪ್ರಶ್ನೆ ಮೂಡಿತ್ತು.ಈಗ ಅದಕ್ಕೆ ಸಮಯ ಬಂದಿದೆ.  ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ ಕಂಡು ಅಪ್ಪು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಅಪ್ಪು ಅವರನ್ನು ಮತ್ತೆ ನೋಡುವ ಭಾಗ್ಯ ನಮ್ಮದು ಅಂತಿದ್ದಾರೆ.
Published by:Vasudeva M
First published: