Ashwatthama: ಬ್ಲಾಸ್ಟಿಂಗ್ ನ್ಯೂಸ್ ಕೊಟ್ಟ ಕಿಚ್ಚ- ಅನುಪ್: ಅಶ್ವತ್ಥಾಮನ ಅವತಾರ ತಾಳಲಿರುವ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೆರಿಯರ್​ನ ಸ್ಪೆಷಲ್ ಸಿನಿಮಾ ಇದಾಗಲಿದ್ದು, 5200 ವರ್ಷಗಳ ಹಿಂದಿನ ಕಥೆಯನ್ನ ಇಲ್ಲಿ ಹೇಳಲಾಗುತ್ತಿದೆಯಾ ಎಂಬ ಕುತೂಹಲ ಮೂಡಿಸಿದೆ.

ಅಶ್ವತ್ಥಾಮ ಸಿನಿಮಾ ಪೋಸ್ಟರ್.

ಅಶ್ವತ್ಥಾಮ ಸಿನಿಮಾ ಪೋಸ್ಟರ್.

  • Share this:
ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್​ನಲ್ಲಿ ಫ್ಯಾಂಟಮ್ ಸಿನಿಮಾ ಸಿದ್ಧವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಾರಿ ಬಜೆಟ್​ನ ಈ ಸಿನಿಮಾ ಹೈದರಾಬಾದ್​ನಲ್ಲಿ ದೃಶ್ಯರೂಪ ಪಡೆದುಕೊಳ್ಳುತ್ತಿದೆ. ದಿನಂಪ್ರತಿ ಒಂದಲ್ಲಾ ಒಂದು ಕಾರಣಗಳಿಗೆ ಸುದ್ದಿ ಮಾಡುತ್ತಲೇ ಇದೆ ಫ್ಯಾಂಟಮ್. ಹೀಗಿರುವಾಗಲೇ ಕಿಚ್ಚ ಹಾಗೂ ಅನುಪ್ ಕಾಂಬಿನೇಷನ್ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಕೊಟ್ಟಿದೆ. ಏನದು?, ಈ ಸ್ಟೋರಿ ಓದಿ…

ಅದೇನೆಂದರೆ ಈ ಜೋಡಿ ಅಶ್ವತ್ಥಾಮ ಎಂಬ ಸಿನಿಮಾ ಅನೌನ್ಸ್ ಮಾಡಿದೆ‌. ಸದ್ಯ ಟೈಟಲ್ ಪೋಸ್ಟರ್​ನಷ್ಟೇ ಬಿಡುಗಡೆ ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಸ್ವತಃ ಸುದೀಪ್, ತಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವತ್ಥಾಮನಿಗೆ ಬಂಡವಾಳ ಹಾಕಲಿದ್ದಾರೆ.

Yuvarathnaa: ಯುವರತ್ನ ಚಿತ್ರತಂಡದ ಕಡೆಯಿಂದ ಪುನೀತ್​ ಅಭಿಮಾನಿಗಳಿಗೆ ಸಿಕ್ತು ಡಬಲ್​ ಅಪ್ಡೇಟ್​..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೆರಿಯರ್​ನ ಸ್ಪೆಷಲ್ ಸಿನಿಮಾ ಇದಾಗಲಿದ್ದು, 5200 ವರ್ಷಗಳ ಹಿಂದಿನ ಕಥೆಯನ್ನ ಇಲ್ಲಿ ಹೇಳಲಾಗುತ್ತಿದೆಯಾ ಎಂಬ ಕುತೂಹಲ ಮೂಡಿಸಿದೆ.

ಇನ್ನೂ ಪೋಸ್ಟರ್​ನಲ್ಲಿ ಫಾದರ್ ನೇಮ್ ದ್ರೋಣಚಾರ್ಯಾ ಎಂಬ ಮಾಹಿತಿ ಇರುವುದರಿಂದ ಈ ಸಿನಿಮಾ ಪೌರಾಣಿಕ ಕಥೆಯನ್ನ ಒಳಗೊಂಡಿರಬಹುದಾ? ಎಂಬ ಪ್ರಶ್ನೆಯನ್ನೂ ಸಹ ಹುಟ್ಟುಹಾಕಿದೆ. ಸದ್ಯಕ್ಕೆ ಈಗಷ್ಟೇ ಈ ಸಿನಿಮಾ ಟೈಟಲ್ ರಿವೀಲ್ ಆಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಗದಷ್ಟು ಮಾಹಿತಿ ಚಿತ್ರತಂಡದಿಂದ ಹೊರಬೀಳಬಹುದು.

ಸದ್ಯ ಹೈದರಾಬಾದ್‌ನಲ್ಲಿ 'ಫ್ಯಾಂಟಮ್' ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಅನೂಪ್ ಭಂಡಾರಿ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಜಾಕ್‌ ಮಂಜು ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.

Sanjana Galrani: ಪ್ರಶಾಂತ್​ ಸಂಬರಗಿಯನ್ನು ನಾನು ಸುಮ್ಮನೆ ಬಿಡಲ್ಲ; ಕಣ್ಣೀರಿಟ್ಟ ಸಂಜನಾ ಗಲ್ರಾನಿ

ಇನ್ನು ಫ್ಯಾಂಟಮ್​ ಸಿನಿಮಾದ ನಂತರ ಸುದೀಪ್​ ಹಾಗೂ ಅನೂಪ್​ ಜೋಡಿಯ ‘ಬಿಲ್ಲ ರಂಗ ಬಾದ್​ಷಾ’ ಸೆಟ್ಟೇರುವ ಸಾಧ್ಯತೆ ಇದೆ. ಆದರೆ, ‘ಬಿಲ್ಲ ರಂಗ ಬಾದ್​ಷಾ’ ಮೊದಲು ಆರಂಭ ಆಗುತ್ತಾ ಅಥವಾ ‘ಅಶ್ವತ್ಥಾಮ’ ಮೊದಲು ಸೆಟ್ಟೇರುತ್ತೋ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
Published by:Vinay Bhat
First published: