Pawan Kalyan: ಪವನ್​ ಕಲ್ಯಾಣ್​ ಜತೆ ಸಂಬಂಧ ಇದೆ ಎಂದು ಟ್ವೀಟ್​ ಮಾಡಿದ್ದ ನಟಿಯ ಪೋಟೋ ವೈರಲ್​..!

Pawan Kalyan: ಈಗಾಗಲೇ ಮೂರು ಮದುವೆಯಾಗಿರುವ ಪವನ್ ಕಲ್ಯಾಣ್‍ಗೆ ಇಲ್ಲೊಬ್ಬ ಚೆಲುವೆ ನನಗೆ ಪವನ್ ಜೊತೆ ಸಂಬಂಧ ಇದೆ ಅಂತ ಹೇಳಿಕೊಂಡಿದ್ದಾರೆ.

Anitha E | news18
Updated:August 1, 2019, 5:46 PM IST
Pawan Kalyan: ಪವನ್​ ಕಲ್ಯಾಣ್​ ಜತೆ ಸಂಬಂಧ ಇದೆ ಎಂದು ಟ್ವೀಟ್​ ಮಾಡಿದ್ದ ನಟಿಯ ಪೋಟೋ ವೈರಲ್​..!
Pawan Kalyan: ಈಗಾಗಲೇ ಮೂರು ಮದುವೆಯಾಗಿರುವ ಪವನ್ ಕಲ್ಯಾಣ್‍ಗೆ ಇಲ್ಲೊಬ್ಬ ಚೆಲುವೆ ನನಗೆ ಪವನ್ ಜೊತೆ ಸಂಬಂಧ ಇದೆ ಅಂತ ಹೇಳಿಕೊಂಡಿದ್ದಾರೆ.
  • News18
  • Last Updated: August 1, 2019, 5:46 PM IST
  • Share this:
ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್​ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರ ಹೆಸರುಗಳನ್ನು ತಮ್ಮ ದೇಹದ ಮೇಲೆ ಅಚ್ಚೆ ಹಾಕಿಸಿಕೊಳ್ಳುವುದು, ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳ ಹೆಸರುಗಳ ಟ್ಯಾಟೂ ಹಾಕಿಕಕೊಳ್ಳುವುದು ಈಗಿರುವ ಟ್ರೆಂಡ್​.

ಆದರೆ ಇಲ್ಲೊಬ್ಬರು ಚೆಲುವೆ ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರ ಹೆಸರನ್ನು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಆ ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ತನಗೆ ಪವನ್​ ಕಲ್ಯಾಣ್​ ಜೊತೆ ಸಂಬಂಧ ಇದೆಯಾ..? ಎಂದು ಬರೆದುಕೊಂಡಿದ್ದಾರೆ.

So I have Pawan Kalyan tattoo, which means I have an affair with him? Answer ! #KathiLeaks @kathimahesh @PawanKalyan #PawanKalyan pic.twitter.com/hlgvne2yKv
ಅಶು ಮಾಡಿರುವ ಟ್ವೀಟ್​ನಲ್ಲಿ 'ನನ್ನ ಬಳಿ ಪವನ್​ ಟ್ಯಾಟೂ ಇದೆ. ಹಾಗೆಂದ ಕೂಡಲೆ ನನಗೆ ಅವರೊಂದಿಗೆ ಅಫೇರ್​ ಇದೆ ಎಂದಾ..? ಉತ್ತರಿಸಿ ..?'  ಎಂದು ಪವನ್​ ಕಲ್ಯಾಣ್​ ಹಾಗೂ ಕಾತಿ ಮಹೇಶ್​ ಎಂಬುವರನ್ನು ಟ್ಯಾಗ್​ ಮಾಡಿದ್ದಾರೆ.

Ashu Reddy with Pawan Kalyan
ಪವನ್​ ಜತೆ ಅಶು ರೆಡ್ಡಿ ಇತ್ತೀಚೆಗೆ ತೆಗೆಸಿಕೊಂಡಿರುವ ಚಿತ್ರ
ಅಂದಹಾಗೆ ಹೀಗೆಲ್ಲ ಟ್ವೀಟ್​ ಮಾಡಿಕೊಂಡಿರುವುದು ಅಶು ರೆಡ್ಡಿ. ಟಾಲಿವುಡ್​ನಲ್ಲಿ ಜೂನಿಯರ್ ಸಮಂತಾ ಎಂದೇ ಫೇಮಸ್​.  ಡಬ್‍ಸ್ಮ್ಯಾಷ್ ವೀಡಿಯೋಗಳಿಂದ ಹೆಸರು ಮಾಡಿರುವ ಈಕೆ ಕೆಲವು ಆಲ್ಬಂ ಸಾಂಗ್ ಹಾಗೂ, ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kurukshetra: ಕರ್ನಾಟಕಕ್ಕೆ ಇರುವುದು ಒಬ್ಬನೇ ದುರ್ಯೋಧನ ಎಂದು ಡಿಬಾಸ್​ರನ್ನು ಕೊಂಡಾಡಿದ ರವಿಮಾಮ

ಅಶು ಮಾಡಿರುವ ಟ್ವೀಟ್​ ಹಾಗೂ ಅವರ ಟ್ಯಾಟೂ ಫೋಟೋ ಹಳೆಯದಾದರೂ ಈಗ ವೈರಲ್​ ಆಗುತ್ತಿದೆ. ಈಕೆಗೆ ಪವರ್​ ಸ್ಟಾರ್ ಎಂದರೆ ತುಂಬಾ ಇಷ್ಟವಂತೆ. ಅದಕ್ಕೆ ಅವರ ಹೆಸರನ್ನು ತಮ್ಮ ಎದೆಯ ಭಾಗದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಪವನ್​ ಕಲ್ಯಾಣ್​ಗೆ ಇರುವ ಫ್ಯಾನ್​ ಫಾಲೋಯಿಂಗ್​ ಹಾಗೂ ಅವರಿಗೆ ಇರುವ ಮಹಿಳಾ ಅಭಿಮಾನಿಗಳ ಬಗ್ಗೆ ಹೇಳುವಂತಿಲ್ಲ. ಹೀಗಿರುವಾಗ ಅಶು ರೆಡ್ಡಿಯ ಟ್ವೀಟ್​ ನೋಡಿದವರು ಮಹಿಳಾ ಅಭಿಮಾನಿಯ ಹುಚ್ಚುತನಕ್ಕೆ ನಕ್ಕು ಸುಮ್ಮನಾಗುತ್ತಿದ್ದಾರೆ.

HBD Kiara Advani: 27ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರ ಅಡ್ವಾಣಿಯ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳು..!


 
 
First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading