• Home
  • »
  • News
  • »
  • entertainment
  • »
  • Ashneer Grover: ಬಿಗ್​ಬಾಸ್ ಸ್ಪರ್ಧಿಗೆ ಸಲ್ಮಾನ್ ಖಾನ್​ಗಿಂತ ಹೆಚ್ಚು ಸಂಭಾವನೆ?

Ashneer Grover: ಬಿಗ್​ಬಾಸ್ ಸ್ಪರ್ಧಿಗೆ ಸಲ್ಮಾನ್ ಖಾನ್​ಗಿಂತ ಹೆಚ್ಚು ಸಂಭಾವನೆ?

ಅಶ್ನೀರ್ ಗ್ರೋವರ್

ಅಶ್ನೀರ್ ಗ್ರೋವರ್

ಒಂದು ಕಾಲದಲ್ಲಿ ನಾನು ಬಿಗ್‌ಬಾಸ್ ಶೋ ಅನ್ನು ನೋಡುತ್ತಿದ್ದೆ, ಆದರೆ ಅದು ಈಗ ಹಳಸಿದೆ ಎಂದು ನಾನು ಭಾವಿಸುತ್ತೇನೆ. ಅವರು ನನ್ನನ್ನು ಸಂಪರ್ಕಿಸಿದರು, ನಾನು ಬರುವುದಿಲ್ಲ ಅಂತ ಹೇಳಿದೆ ಎಂದು ಗ್ರೋವರ್ ಹೇಳಿದ್ದಾರೆ.

  • Share this:

ಇತ್ತೀಚೆಗೆ ಉದ್ಯಮಿ (Businessman) ಅಶ್ನೀರ್ ಗ್ರೋವರ್ (Ashneer Grover) ಅವರು ‘ಶಾರ್ಕ್ ಟ್ಯಾಂಕ್ ಇಂಡಿಯಾ 2’ ರಿಯಾಲಿಟಿ ಸಿರೀಸ್ ನ ಭಾರತೀಯ ಆವೃತ್ತಿಯ ಮುಂಬರುವ ಋತುವಿನ ಭಾಗವಾಗದಿರುವ ಬಗ್ಗೆ ಅಂತಿಮವಾಗಿ ಪ್ರತಿಕ್ರಿಯಿಸಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಉದ್ಯಮಿ ಇತ್ತೀಚೆಗೆ ರೇಡಿಯೋ  ಪಾಡ್ಕಾಸ್ಟ್ ನಲ್ಲಿ ನಡೆದ ಎರಡನೇ ಎಪಿಸೋಡ್ ಮಿಸ್ ಮಾಡುವ ಬಗ್ಗೆ ಕೇಳಿದಾಗ ಈ ವಿಷಯವನ್ನು ತಿಳಿಸಿದ್ದರು. ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಸಿರೀಸ್ ನ ತಯಾರಕರನ್ನು ತರಾಟೆಗೆ ತೆಗೆದುಕೊಂಡ ಗ್ರೋವರ್ ಅವರು “ಇದು ಅವರಿಗೆ ಹಣವನ್ನು ಭರಿಸಲು ಸಾಧ್ಯವಾಗದಿರುವ ಬಗ್ಗೆ ಅಲ್ಲ, ಶೋ ನಲ್ಲಿ ನೀಡುವ ಸ್ಥಾನಮಾನವೂ ಮುಖ್ಯವಾಗುತ್ತದೆ ಎಂದು ಅವರು ಹೇಳಿದ್ದರು.


ಇತ್ತೀಚಿಗಷ್ಟೇ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಸಿರೀಸ್ ನ ಗ್ರೋವರ್ ಅವರ ತೀರ್ಪುಗಾರ ಸ್ಥಾನವನ್ನು ಉದ್ಯಮಿ ಅಮಿತ್ ಜೈನ್ ಅವರು ಪಡೆದುಕೊಂಡಿದ್ದು ಸೀಸನ್ ಎರಡರಲ್ಲಿ ಕಾಣಿಸಿಕೊಳ್ಳಲಿದ್ದಾರೆ


ಬಿಗ್ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸುವುದರ ಬಗ್ಗೆ ಅಶ್ನೀರ್ ಹೇಳಿದ್ದೇನು?


ರೇಡಿಯೋ ಪಾಡ್ಕಾಸ್ಟ್ ಸಂಭಾಷಣೆಯಲ್ಲಿ ಬಿಗ್‌ಬಾಸ್ ಶೋ ನವರು ನಿಮ್ಮನ್ನು ಭಾಗವಹಿಸಲು ಸಂಪರ್ಕಿಸಿದ್ದಾರೆಯೇ ಎಂದು ಗ್ರೋವರ್ ಅವರನ್ನು ಕೇಳಿದ್ದಾರೆ.
ಅಶ್ನೀರ್ ಈ ಪ್ರಶ್ನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಜನರು ತಮ್ಮ ವೃತ್ತಿಜೀವನದಲ್ಲಿ ಅಷ್ಟೊಂದು ಕೆಲಸವು ದೊರೆಯದೆ ಇದ್ದಾಗ ಆ ರಿಯಾಲಿಟಿ ಶೋ ನಲ್ಲಿ ಭಾಗವಹಿಸುತ್ತಾರೆ ಎಂದು ಅವರು ನಂಬಿದ್ದರಿಂದ ಅವರು ಭಾಗವಹಿಸಲು ಬಯಸಲಿಲ್ಲ. ಬಿಗ್‌ಬಾಸ್ ರಿಯಾಲಿಟಿ ಶೋ ಏನಿದ್ದರೂ 'ಸೋತವರಿಗೆ' ಎಂದು ಅವರು ಉಲ್ಲೇಖಿಸಿದರು.


ಬಿಗ್ಬಾಸ್ ಶೋ ಗೆ ಬರಲು ಅಶ್ನೀರ್ ಹಾಕಿದ ಷರತ್ತೇನು?


ಒಂದು ಕಾಲದಲ್ಲಿ ನಾನು ಬಿಗ್‌ಬಾಸ್ ಶೋ ಅನ್ನು ನೋಡುತ್ತಿದ್ದೆ, ಆದರೆ ಅದು ಈಗ ಹಳಸಿದೆ ಎಂದು ನಾನು ಭಾವಿಸುತ್ತೇನೆ. ಅವರು ನನ್ನನ್ನು ಸಂಪರ್ಕಿಸಿದರು, ನಾನು ಕ್ಷಮಿಸಿ, ನಾನು ಬರುವುದಿಲ್ಲ ಅಂತ ಹೇಳಿದೆ ಎಂದು ಗ್ರೋವರ್ ಹೇಳಿದರು.


ಶೋ ನ ನಿರೂಪಕರಾದ ಸಲ್ಮಾನ್ ಖಾನ್ ಅವರಿಗಿಂತ ಹೆಚ್ಚಿನ ದುಡ್ಡು ಕೊಟ್ಟರೆ ಅವರು ಮತ್ತೊಮ್ಮೆ ಯೋಚಿಸಬಹುದು ಎಂದು ಅವರು ಹೇಳಿದರು. ಇದಕ್ಕೆ ಸಂದರ್ಶಕರು "ಅವರು ನಿಮಗೆ ಅಷ್ಟು ಪಾವತಿಸಿದರೆ ನೀವು ಆತಿಥ್ಯ ವಹಿಸುವಿರಾ?" ಎಂದು ಕೇಳಿದ್ದಕ್ಕೆ ಗ್ರೋವರ್ "ಇಲ್ಲ ಇಲ್ಲ, ನಾನು ಖಂಡಿತವಾಗಿಯೂ ಶೋ ನಲ್ಲಿ ಭಾಗವಹಿಸುತ್ತೇನೆ" ಎಂದು ಅಶ್ನೀರ್ ವ್ಯಂಗ್ಯವಾಡಿದರು.
ಟಿವಿ ಕಾರ್ಯಕ್ರಮದ ನಿರ್ಮಾಪಕರು ಇನ್ನು ಮುಂದೆ ಅವರನ್ನು ದುಡ್ಡಿನಿಂದ ಸುಲಭವಾಗಿ ಖರೀದಿಸಲು ಸಾಧ್ಯವಿಲ್ಲ ಎಂದು ಉದ್ಯಮಿ ಇತ್ತೀಚೆಗೆ ರೇಡಿಯೋ ಪಾಡ್ಕಾಸ್ಟ್ ನಲ್ಲಿ ಹೇಳಿದರು.


‘ಶಾರ್ಕ್ ಟ್ಯಾಂಕ್ ಇಂಡಿಯಾ’ ಶೋ ಗೆ ಮರಳುವಂತೆ ಗ್ರೋವರ್ ಅವರನ್ನ ಫ್ಯಾನ್ಸ್ ಕೇಳಿದ್ರಂತೆ!


ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2 ಟ್ರೈಲರ್ ಬಿಡುಗಡೆಯಾದ ನಂತರ, ಗ್ರೋವರ್ ಅವರ ಫಾಲೋವರ್ ಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು ಮತ್ತು ಅವರನ್ನು ಶೋ ಗೆ ಮರಳಲು ಕೇಳಿಕೊಂಡರು. ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ 1 ರಲ್ಲಿ ಗ್ರೋವರ್ ಅತ್ಯಂತ ಪ್ರಸಿದ್ಧ ತೀರ್ಪುಗಾರರಾಗಿದ್ದರು.


ಇದನ್ನೂ ಓದಿ: Kavya Gowda: ಹಳದಿ ಬಣ್ಣದ ಸೀರೆಯಲ್ಲಿ ಕಿರುತೆರೆ ನಟಿ! ಮುಡಿ ತುಂಬ ಮಲ್ಲಿಗೆ, ಕಾವ್ಯ ಗೌಡ ಲುಕ್ ನೋಡಿ


ಪ್ರಸ್ತುತವಾಗಿ ಉದ್ಯಮಿ ಅಶ್ನೀರ್ ಗ್ರೋವರ್ ಅವರು "ದೊಗ್ಲಾಪನ್" ಅನ್ನು ಹೆಚ್ಚು ಪ್ರಚಾರ ಮಾಡುವ ಕೆಲಸದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ನಲ್ಲಿ ನಿರಂತರವಾಗಿರುವ ನಮಿತಾ ಥಾಪರ್ ಅವರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಅಶ್ನೀರ್ ಅವರ ಶೋ ದಿಂದ ಹೊರಗುಳಿಯುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದಾರೆ.


“ಒಬ್ಬ ವ್ಯಕ್ತಿಯು ಶೋ ದಲ್ಲಿ ಭಾಗವಹಿಸುವುದಿಲ್ಲ ಎಂದ ಮಾತ್ರಕ್ಕೆ ಅದು ಹಾಳಾಗುವುದಿಲ್ಲ” ಎಂದು ನಮಿತಾ ಟ್ವೀಟ್ ಮಾಡಿದ್ದಾರೆ. ಅವರು ಯಾವುದೇ ಹೆಸರನ್ನು ತೆಗೆದುಕೊಳ್ಳದಿದ್ದರೂ, ಈ ಟ್ವೀಟ್ ಆಶ್ನೀರ್ ಗ್ರೋವರ್ ಶೋ ನಿಂದ ಅನುಪಸ್ಥಿತಿಗೆ ನಿರ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು