ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲಿರುವ ಶಾರ್ಕ್ ಟ್ಯಾಂಕ್ ಇಂಡಿಯಾದ (Shark Tank India) ಅಶ್ನೀರ್ ಗ್ರೋವರ್ (Ashneer Grover) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಅವರು ಸುದ್ದಿಯಲ್ಲಿರುವುದು ಒಬ್ಬ ನಟಿಯ ಬಿಕಿನಿ ಫೋಟೋವನ್ನ ಲೈಕ್ ಮಾಡಿದ್ದ ವಿಚಾರಕ್ಕಾಗಿ ಮತ್ತು ಅದಕ್ಕೆ ಅವರ ಪತ್ನಿ ಮಾಧುರಿ (Madhuri, Ashneer Grover Wife) ಸಾಮಾಜಿಕ ಮಾಧ್ಯಮದಲ್ಲಿ ಮೌನಿ ರಾಯ್ ಅವರನ್ನು ಅಶ್ನೀರ್ ಫಾಲೋ ಮಾಡದ ಹಾಗೆ ಮಾಡಿದ್ದಕ್ಕಾಗಿ. ಅಂದ ಹಾಗೆ ಅಶ್ನೀರ್ ಗ್ರೋವರ್ ಮತ್ತು ಅವರ ಹೆಂಡತಿ ಮಾಧುರಿ ಅವರ ಪ್ರೇಮಕಥೆ ಯಾವ ಬಾಲಿವುಡ್ ಚಲನಚಿತ್ರಕ್ಕಿಂತ (Cinema) ಏನೂ ಕಡಿಮೆಯಿಲ್ಲ ಮತ್ತು ಅವರ ವಿವಾಹ ಜೀವನದ ಮೇಲೆ ಸಾಮಾಜಿಕ ಮಾಧ್ಯಮ ಹೇಗೆಲ್ಲಾ ಪರಿಣಾಮ ಬೀರುತ್ತೆ ಅನ್ನೋದರ ಬಗ್ಗೆ ಈ ಸುದ್ದಿ ಒಂದು ಒಳ್ಳೆಯ ಉದಾಹರಣೆಯಾಗಿದೆ.
ಅಮೃತಾ ರಾವ್ ಮತ್ತು ಆರ್‌ಜೆ ಅನ್ಮೋಲ್ ಅವರೊಂದಿಗಿನ ಪಾಡ್ಕಾಸ್ಟ್ ನಲ್ಲಿ ಅಶ್ನೀರ್ ಗ್ರೋವರ್ ಮತ್ತು ಮಾಧುರಿ ತಮ್ಮ ಡೇಟಿಂಗ್ ಜೀವನದ ಹಲವಾರು ಕ್ಷಣಗಳನ್ನು ಹಂಚಿಕೊಂಡರು.
ಅಶ್ನೀರ್ ಮೌನಿಯನ್ನು 'ಅನ್ ಫಾಲೋ' ಮಾಡುವಂತೆ ಮಾಡಿದ್ದು ಮಾಧುರಿಯಂತೆ
ಮಾಧುರಿ ಬಗ್ಗೆ ತಾನು ಎಷ್ಟು ಭಯಭೀತನಾಗಿದ್ದೆ ಎಂಬುದನ್ನು ನೆನಪಿಸಿಕೊಂಡ ಅಶ್ನೀರ್ "ಒಂದು ದಿನ ನಾನು ಮೌನಿ ರಾಯ್ ಅವರ ಬಿಕಿನಿ ಫೋಟೋವನ್ನು ಇಷ್ಟಪಟ್ಟೆ. ನಾನು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಕಡಿಮೆ ಜನರನ್ನು ಫಾಲೋ ಮಾಡುತ್ತೇನೆ.
ಅಲ್ಲಿ ಕೇವಲ 60 ಜನರಿರಬಹುದು ಅಷ್ಟೇ. ಮೌನಿ ರಾಯ್ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ್ದರು ಮತ್ತು ನಾನು ಅದನ್ನು ಲೈಕ್ ಮಾಡಿದೆ. ಅದನ್ನು ಮಾಧುರಿ ನೋಡಿ "ಇಂತಹ ಫೋಟೋಗಳಿಗೆಲ್ಲಾ ಲೈಕ್ ಮಾಡುವುದು ಏನು? ಬೇರೆ ಫೋಟೋ ಆದರೆ ಲೈಕ್ ಮಾಡಿ, ಇದು ಬಿಕಿನಿ ಧರಿಸಿದ್ದು” ಅಂತ ಹೇಳಿದರಂತೆ. "ಮಾಧುರಿ ಆ ದಿನ ತುಂಬಾನೇ ಕೋಪಗೊಂಡಿರುವುದನ್ನು ನಾನು ನೋಡಿದೆ" ಎಂದು ಅಶ್ನೀರ್ ನೆನಪಿಸಿಕೊಂಡರು.
"ಮೌನಿ ರಾಯ್ ಅಷ್ಟೇ ಅಲ್ಲದೆ, ಇನ್ನೂ 15 ರಿಂದ 20 ಜನರು ‘ಅನ್ ಫಾಲೋ’ ಆಗಿದ್ದಾರೆ. ಸೋನಮ್ ಬಾಜ್ವಾ, ದಿಶಾ ಪಟಾನಿ ಎಲ್ಲರೂ ಅನ್ ಫಾಲೋ ಆಗಿದ್ದಾರೆ. ಏಕೆಂದರೆ ಮಾಧುರಿ, ಅಶ್ನೀರ್ ಅವರನ್ನು ಕುರಿತು "ನೀವು ಅನ್ ಫಾಲೋ ಮಾಡಬೇಕಾಗಿತ್ತು, ಏಕೆಂದರೆ ನೀವು ಅವರನ್ನು ನೋಡಿದರೆ, ನೀವು ಅವರ ಫೋಟೋಗಳನ್ನು ಇಷ್ಟಪಡುತ್ತೀರಿ" ಅಂತ ಹೇಳಿದ್ದರಂತೆ.
ಅಶ್ನೀರ್ ಜೊತೆ ಡೇಟಿಂಗ್ ಮಾಡುವ ಯಾವುದೇ ಆಸಕ್ತಿ ಇರಲಿಲ್ವಂತೆ ಮಾಧುರಿಗೆ
ಅಶ್ನೀರ್ ಮತ್ತು ಮಾಧುರಿ ಇಬ್ಬರು ಆಫೀಸಿನಲ್ಲಿ ಭೇಟಿಯಾದಾಗ, ಅಶ್ನೀರ್ ಮಾಧುರಿಯನ್ನು ಡೇಟಿಂಗ್ ಮಾಡಲು ದುಂಬಾಲು ಬಿದ್ದಿದ್ದರಂತೆ. ಚಿಕ್ಕ ನಗರದಿಂದ ಬಂದ ಮಾಧುರಿ ದೆಹಲಿ ಹುಡುಗರ ಬಗ್ಗೆ ಸಾಕಷ್ಟು ಜಾಗರೂಕರಾಗಿದ್ದರಂತೆ.
"ನಾನು ಅವನೊಂದಿಗೆ ಡೇಟಿಂಗ್ ಮಾಡುವ ಆಲೋಚನೆಯನ್ನು ಎಂದಿಗೂ ಹೊಂದಿರಲಿಲ್ಲ, ಏಕೆಂದರೆ ಮೊದಲನೆಯದಾಗಿ, ನಾನು ಚಿಕ್ಕ ನಗರದಿಂದ ಬಂದವಳು ಮತ್ತು ನಾನು ಎಲ್ಲಾದರೂ ಹೊರಗೆ ಜನರಿಗೆ ಕಾಣಿಸಿಕೊಂಡರೆ ಅಂತ ನನಗೆ ಭಯವಾಗುತ್ತಿತ್ತು ಮತ್ತು ಎರಡನೆಯದಾಗಿ, ನಾನು ಅವನೊಂದಿಗೆ ಡೇಟಿಂಗ್ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ಅಶ್ನೀರ್ ತುಂಬಾನೇ ಹಿಂದೆ ಬಿದ್ದಿದ್ದ” ಅಂತ ಮಾಧುರಿ ಹೇಳಿದರು.
ಮೊದಲ ಬಾರಿ ಡೇಟಿಂಗ್ ನಲ್ಲಿ ಎಂತಹ ತಮಾಷೆ ನಡೆದಿತ್ತು ನೋಡಿ..
"ತುಂಬಾ ಮನವೊಲಿಸಿದ ನಂತರ ಅವನು ನನ್ನನ್ನು ಡೇಟಿಂಗ್ ಗೆ ಕರೆದೊಯ್ದ ಮತ್ತು ಅಲ್ಲಿ ನಾವು ಊಟವನ್ನು ಆರ್ಡರ್ ಮಾಡಿದ್ದೆವು. ಅಶ್ನೀರ್ ತುಂಬಾನೇ ವಿಚಿತ್ರವಾದ ವ್ಯಕ್ತಿಯಾಗಿದ್ದರು.
ಡೇಟಿಂಗ್ ಗೆ ಕರೆದುಕೊಂಡು ಹೋಗಿ, ಪರ್ಸ್ ನಲ್ಲಿ ದುಡ್ಡು ಸಹ ಇರಲಿಲ್ಲ. ಊಟದ ಬಿಲ್ ಟೇಬಲ್ ಗೆ ಬಂದಾಗ ಇಬ್ಬರು ಓಡಿ ಹೋಗುವುದಾಗಿ ಪ್ಲ್ಯಾನ್ ಮಾಡಿ, ಅಲ್ಲಿಂದ ಓಡಿ ಹೋದರಂತೆ" ಅಂತ ಮಾಧುರಿ ಆ ದಿನಗಳನ್ನು ನೆನಪಿಸಿಕೊಂಡರು.
"ನಾನು ಬಿಸಿನೆಸ್ ಕ್ಲಾಸ್ ಕುಟುಂಬದಿಂದ ಬಂದಿದ್ದೇನೆ ಮತ್ತು ಅಶ್ನೀರ್ ಕಂಪನಿಯಲ್ಲಿ ಕೆಲಸ ಮಾಡುವ ಕುಟುಂಬದಿಂದ ಬಂದವನು. ಆದ್ದರಿಂದ ಇಂದಿಗೂ ಐಐಟಿ, ಐಐಎಂ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ.
ಅಶ್ನೀರ್ ತನ್ನದೇ ಆದ ಹೆಸರನ್ನು ಗಳಿಸುತ್ತಾನೆ ಅಂತ ನನಗೆ ತಿಳಿದಿತ್ತು. ನನ್ನ ಭವಿಷ್ಯ ಇವರ ಜೊತೆ ಸುರಕ್ಷಿತವಾಗಿರುತ್ತೆ ಅಂತ ನನಗೆ ಅನ್ನಿಸಿತ್ತು. ಅಶ್ನೀರ್ ಐಐಟಿಯಿಂದ ಬಂದಿದ್ದರೂ, ಅವರ ಶೈಕ್ಷಣಿಕ ಟ್ಯಾಗ್ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ” ಅಂತ ಮಾಧುರಿ ಹೇಳಿದರು.
ಅಶ್ನೀರ್ ನನ್ನು ಡೇಟ್ ಮಾಡುತ್ತಿರುವ ವಿಚಾರ ಮಾಧುರಿಯ ತಂದೆಗೆ ಕಾರ್ ಡ್ರೈವರ್ ಹೇಳಿದ್ರಂತೆ..
ಅಶ್ನೀರ್ ಮತ್ತು ಮಾಧುರಿ ಡೇಟಿಂಗ್ ಗೆ ಹೋಗುವುದನ್ನು ಸ್ವಲ್ಪ ಸಮಯದವರೆಗೆ ಕಾರಿನ ಚಾಲಕ ನೋಡಿ, ಒಂದು ದಿನ ಮಾಧುರಿಯ ತಂದೆಯ ಬಳಿ ಹೋಗಿ ಆ ಡ್ರೈವರ್ ‘ಇವರಿಬ್ಬರ ನಡುವೆ ಏನೋ ನಡೆದಿದೆ ನೋಡಿ’ ಅಂತ ಹೇಳಿದ್ರಂತೆ.
ಅದನ್ನು ಕೇಳಿದ ಮಾಧುರಿಯ ತಂದೆ ತುಂಬಾನೇ ನಿರಾಶೆಗೊಂಡರಂತೆ, ಏಕೆಂದರೆ ಅವರು ಅವಳನ್ನು ಓದಲು ಕಳುಹಿಸಿದರೆ, ವ್ಯಕ್ತಿ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಅಂತ ಬೇಸರ ಮಾಡಿಕೊಂಡಿದ್ರಂತೆ.
"ನಾನು ಸತ್ಯ ಪಾಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ನನ್ನ ತಂದೆ ನನ್ನ ಕಚೇರಿಗೆ ಬಂದು ನಾನು ನಿಜವಾಗಿಯೂ ಏನೋ ತಪ್ಪು ಮಾಡಿದ್ದೇನೆ ಎಂಬಂತೆ ನನ್ನನ್ನು ನೋಡಿದರು ಮತ್ತು ನನ್ನನ್ನು ಮನೆಗೆ ಕರೆದೊಯ್ದರು.
ಅವರಿಗೆ ನಾನು ಅಶ್ನೀರ್ ಬಗ್ಗೆ ತಿಳಿಸದ ಕಾರಣ ತುಂಬಾನೇ ನೋವಾಗಿತ್ತು ಮತ್ತು ನಾನು ಅವರಿಗೆ ಎಂದಿಗೂ ಸುಳ್ಳು ಹೇಳಿರಲಿಲ್ಲ" ಎಂದು ಮಾಧುರಿ ಆ ದಿನಗಳನ್ನು ನೆನಪಿಸಿಕೊಂಡರು.
ಇದನ್ನೂ ಓದಿ: Actress Megha Shetty: ಜೊತೆ ಜೊತೆಯಲಿ ನಟಿಯ ನೆನಪಿಡುವ ದಿನದ ಸುಂದರ ಕ್ಷಣಗಳನ್ನು ಫೋಟೋಗಳಲ್ಲಿ ನೋಡಿ
ಅಶ್ನೀರ್ ಅವರಿಗೆ ಕೆಲಸ ಸಿಕ್ಕ ನಂತರ ಮದುವೆ ಮಾಡಿಸಿದ್ರಂತೆ ಮಾಧುರಿ ತಂದೆ
"ಆ ದಿನಗಳಲ್ಲಿ ಕಾಯುವ ಪರಿಕಲ್ಪನೆ ಇರಲಿಲ್ಲ, ಅಶ್ನೀರ್ ಗೆ ಕೆಲಸ ಸಿಕ್ಕ ನಂತರ ಮತ್ತು ಅವನ ಸಂಬಳದ ಪ್ಯಾಕೇಜ್ ಬಗ್ಗೆ ಚರ್ಚಿಸಿದ ನಂತರ, ನನ್ನ ಪೋಷಕರು ತಮ್ಮ ನಿರ್ಧಾರವನ್ನು ತೆಗೆದುಕೊಂಡರು ಮತ್ತು ನಾವು ಮದುವೆ ಸಮಾರಂಭಗಳನ್ನು ಶುರು ಮಾಡಿದೆವು” ಅಂತ ಮಾಧುರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ