ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರ ಮದುವೆಯಾಗಿದ್ದು ಅವರ ಮದುವೆ ಫೋಟೋಸ್ ಎಲ್ಲಾ ಕಡೆಗಳಲ್ಲಿ ವೈರಲ್ (Viral) ಆಗಿವೆ. ನಟ ಎರಡನೇ ಮದುವೆಯಾಗಿದ್ದು (Second Marriage) ಅವರ ಪತ್ನಿ ರೂಪಾಲಿ ಬರುವಾ (Rupali Baruva) ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮದುವೆ (Marriage) ಬೇಕಿತ್ತಾ? ಇದು ಮದುವೆಯಾಗಿ ವಯಸ್ಸಾ? ಇಷ್ಟು ತಡವಾಗಿ ಮದುವೆಯಾಗಿದ್ದೇಕೆ ಎಂದು ಕೇಳಿದ ನೆಟ್ಟಿಗರ ಎಲ್ಲ ಪ್ರಶ್ನೆಗಳಿಗೆ ನಟ ವಿಡಿಯೋ (Video) ಮೂಲಕ ಉತ್ತರ ಕೊಟ್ಟಿದ್ದಾರೆ.
ನಟ ಮೊದಲ ಪತ್ನಿ ಜೊತೆ ಬ್ರೇಕಪ್ ನಂತರ ರೂಪಾಲಿ ಜೊತೆ ಹೇಗೆ ಕ್ಲೋಸ್ ಆದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಹಾಗೆಯೇ ನಾನು 60 ವರ್ಷದವನಲ್ಲ. ನನಗೆ 57 ವರ್ಷ ವಯಸ್ಸು. ಜನರು ಹೇಗೆ ತಮ್ಮ ಬದುಕನ್ನು ಜೀವಿಸುತ್ತಾರೋ ಅದನ್ನು ಗೌರವಿಸಿ ಎಂದು ನಟ ಜನರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.
View this post on Instagram
ನಂತರ ನಮಗೆ ಸತಿ ಪತಿಯಾಗೋಣ ಎನಿಸಿತು. ಹಾಗಾಗಿ ನಾವಿಬ್ಬರೂ ಮದುವೆಯಾದೆವು. ಅವಳಿಗೆ 50 ವರ್ಷ ವಯಸ್ಸು. ನನಗೆ 57. ಆದರೆ ವಯಸ್ಸು ಎಷ್ಟಾದರೇನು? ನಾವು ಮುನ್ನಡೆಯುತ್ತಿರಬೇಕು. ಜನರು ಹೇಗೆ ಬದುಕುತ್ತಾರೋ ಅದನ್ನು ಗೌರವಿಸೋಣ ಎಂದಿದ್ದಾರೆ.
ಆಶಿಶ್ ಹಾಗೂ ರೂಪಾಲಿ ಮದುವೆ ಫೋಟೋಗಳು ವೈರಲ್ ಆಗಿದ್ದವು. ಆಶಿಶ್ ಎರಡನೇ ಮದುವೆ ಬಗ್ಗೆ ಮಾತನಾಡಿ, ನನ್ನ ಜೀವನದ ಈ ವಯಸ್ಸಿನಲ್ಲಿ ರೂಪಾಲಿಯನ್ನು ಮದುವೆಯಾಗಿದ್ದು ವಿಶೇಷ ಅನುಭವ. ನಾವು ರಿಜಿಸ್ಟರ್ ಮದುವೆಯಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Ashish Vidyarthi Marriage: 60ನೇ ವರ್ಷದಲ್ಲಿ 2ನೇ ಮದುವೆಯಾದ ನಟ
ನಮಗಿಬ್ಬರಿಗಿಗೂ ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆನ್ನುವ ಆಸೆ ಇತ್ತು ಎಂದು ನಟ ರಿವೀಲ್ ಮಾಡಿದ್ದ ತಮ್ಮ ಸರಳ ವಿವಾಹದ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಆಶಿಶ್ ವಿದ್ಯಾರ್ಥಿ ಅವರು ಹಲವಾರು ಸಿನಿಮಾ ಇಂಡಸ್ಟ್ರಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಹಿರಿಯ ನಟ ದೆಹಲಿಯಲ್ಲಿ ಹುಟ್ಟಿದ್ದಾರೆ. 1962 ಜೂನ್ 19ರಂದು ಹುಟ್ಟಿದ ನಟ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾಎರ, ಅವರ ಸಿನಿಮಾ ಕೆರಿಯರ್ 1989ರಲ್ಲಿ ಶುರುವಾಯಿತು.
ನಟ ಈ ತನಕ ಸುಮಾರು 11 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ನಟ ತಮ್ಮ ಮೊದಲ ಸಿನಿಮಾ ಸರ್ದಾರ್ನಲ್ಲಿ ವಿಪಿ ಮೆನೋನ್ ಪಾತ್ರ ಮಾಡಿದ್ದರು. ಈ ಸಿನಿಮಾ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನಾಧಾರಿತ ಸಿನಿಮಾ.
ಅವರ ಮೊದಲ ರಿಲೀಸ್ ದ್ರೋಹ್ಕಾಲ್ ನಲ್ಲಿ ಅವರ ಅಭಿನಯಕ್ಕಾಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಗೆದ್ದರು. ಬೆಸ್ಟ್ ಸಪೋರ್ಟಿಂಗ್ ಪಾತ್ರಕ್ಕಾಗಿ 1995ರಲ್ಲಿ ಅವರಿಗೆ ಪ್ರಶಸ್ತಿ ಬಂತು. 1942: ಎ ಲವ್ ಸ್ಟೋರಿಯಲ್ಲಿ ಅಶುತೋಷ್ ಪಾತ್ರದಿಂದ ಅವರು ತಿಳಿಯಲ್ಪಟ್ಟಿದ್ದಾರೆ. ನಟ ಸ್ಟಾರ್ ಸ್ಕ್ರೀನ್ ಅವಾರ್ಡ್ ಕೂಡಾ ಪಡೆದಿದ್ದಾರೆ. ಇದರಲ್ಲಿ ಅವರ ಪಾತ್ರ ಖಳನಾಯಕನದ್ದಾಗಿತ್ತು.
ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು. ಅವರ ತಾಯಿ ರೆಬಾ ವಿದ್ಯಾರ್ಥಿ. ಅವರು ಕಥಕ್ ಗುರುವಾಗಿದ್ದರು. ಆಶಿಶ್ ತಂದೆ ಗೋವಿಂದ ವಿದ್ಯಾರ್ಥಿ ಸಂಗೀತ ನಾಟಕ ಅಕಾಡೆಮಿಗಾಗಿ ಭಾರತದ ಕಣ್ಮರೆಯಾಗುತ್ತಿರುವ ಪ್ರದರ್ಶನ ಕಲೆಗಳನ್ನು ಪಟ್ಟಿಮಾಡುವ ಮತ್ತು ಆರ್ಕೈವ್ ಮಾಡುವಲ್ಲಿ ಪರಿಣತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ