ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ (Rupali Baruva) ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ (Marriage). ಕೊಲ್ಕತ್ತಾ ಕ್ಲಬ್ನಲ್ಲಿ (Kolkatta Club) ಗುರುವಾರ ಮದುವೆ (Marriage) ನಡೆದಿದೆ. ರಾಷ್ಟ್ರೀಯ ಪ್ರಶಸ್ತಿ (National Award) ವಿಜೇತ ನಟ ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು (Daughter) ರಾಜೋಶಿ ಬರುವಾ ಅವರನ್ನು ಮದುವೆಯಾಗಿದ್ದರು. ಗುವಾಹಟಿಯವರಾಗಿರುವ (Guwahati) ರೂಪಾಲಿ ಕೊಲ್ಕತ್ತಾದ ಫ್ಯಾಷನ್ ಸ್ಟೋರ್ ಜೊತೆ ಕೆಲಸ ಮಾಡುತ್ತಾರೆ. ಆಶಿಶ್ ಹಾಗೂ ರೂಪಾಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ (Family) ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.
ನಾನು ನನ್ನ ಜೀವನದ ಈ ಘಟ್ಟದಲ್ಲಿ ನಾನು ರೂಪಾಲಿಯನ್ನು ಮದುವೆಯಾಗುತ್ತಿರುವುದು ವಿಶೇಷವಾದ ಭಾವನೆ. ನಾವು ಇಂದು ಬೆಳಗ್ಗೆ ರಿಜಿಸ್ಟರ್ ಮದುವೆಯಾಗಿದ್ದೇವೆ. ಸಂಜೆ ಒಂದು ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದಿದ್ದಾರೆ.
ಅಂದ ಹಾಗೆ ಈ ಜೋಡಿ ಹೇಗೆ ಭೇಟಿಯಾದರು ಎನ್ನುವ ಕುತೂಹಲ ಇರಬಹುದು. ಅದು ದೊಡ್ಡ ಕಥೆ ಎಂದು ನಕ್ಕಿದ್ದಾರೆ ನಟ. ಇನ್ನೊಮ್ಮೆ ಆ ವಿಚಾರವನ್ನು ಶೇರ್ ಮಾಡುತ್ತೇನೆ ಎಂದು ಹೇಳಿದ್ದಾರೆ ನಟ.
ಇದನ್ನೂ ಓದಿ: Aditi Rao Hydari: ಕಾನ್ನಲ್ಲಿ ಅದಿತಿ! ಬಾಯ್ಫ್ರೆಂಡ್ ಸಿದ್ಧಾರ್ಥ್ ಏನಂದ್ರು?
ನಮಗಿಬ್ಬರಿಗಿಗೂ ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆನ್ನುವ ಆಸೆ ಇತ್ತು ಎಂದು ನಟ ರಿವೀಲ್ ಮಾಡಿದ್ದ ತಮ್ಮ ಸರಳ ವಿವಾಹದ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಆಶಿಶ್ ವಿದ್ಯಾರ್ಥಿ ಅವರು ಹಲವಾರು ಸಿನಿಮಾ ಇಂಡಸ್ಟ್ರಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಹಿರಿಯ ನಟ ದೆಹಲಿಯಲ್ಲಿ ಹುಟ್ಟಿದ್ದಾರೆ. 1962 ಜೂನ್ 19ರಂದು ಹುಟ್ಟಿದ ನಟ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾಎರ, ಅವರ ಸಿನಿಮಾ ಕೆರಿಯರ್ 1989ರಲ್ಲಿ ಶುರುವಾಯಿತು.
ನಟ ಈ ತನಕ ಸುಮಾರು 11 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ನಟ ತಮ್ಮ ಮೊದಲ ಸಿನಿಮಾ ಸರ್ದಾರ್ನಲ್ಲಿ ವಿಪಿ ಮೆನೋನ್ ಪಾತ್ರ ಮಾಡಿದ್ದರು. ಈ ಸಿನಿಮಾ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನಾಧಾರಿತ ಸಿನಿಮಾ.
ಅವರ ಮೊದಲ ರಿಲೀಸ್ ದ್ರೋಹ್ಕಾಲ್ ನಲ್ಲಿ ಅವರ ಅಭಿನಯಕ್ಕಾಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಗೆದ್ದರು. ಬೆಸ್ಟ್ ಸಪೋರ್ಟಿಂಗ್ ಪಾತ್ರಕ್ಕಾಗಿ 1995ರಲ್ಲಿ ಅವರಿಗೆ ಪ್ರಶಸ್ತಿ ಬಂತು. 1942: ಎ ಲವ್ ಸ್ಟೋರಿಯಲ್ಲಿ ಅಶುತೋಷ್ ಪಾತ್ರದಿಂದ ಅವರು ತಿಳಿಯಲ್ಪಟ್ಟಿದ್ದಾರೆ. ನಟ ಸ್ಟಾರ್ ಸ್ಕ್ರೀನ್ ಅವಾರ್ಡ್ ಕೂಡಾ ಪಡೆದಿದ್ದಾರೆ. ಇದರಲ್ಲಿ ಅವರ ಪಾತ್ರ ಖಳನಾಯಕನದ್ದಾಗಿತ್ತು.
ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು. ಅವರ ತಾಯಿ ರೆಬಾ ವಿದ್ಯಾರ್ಥಿ. ಅವರು ಕಥಕ್ ಗುರುವಾಗಿದ್ದರು. ಆಶಿಶ್ ತಂದೆ ಗೋವಿಂದ ವಿದ್ಯಾರ್ಥಿ ಸಂಗೀತ ನಾಟಕ ಅಕಾಡೆಮಿಗಾಗಿ ಭಾರತದ ಕಣ್ಮರೆಯಾಗುತ್ತಿರುವ ಪ್ರದರ್ಶನ ಕಲೆಗಳನ್ನು ಪಟ್ಟಿಮಾಡುವ ಮತ್ತು ಆರ್ಕೈವ್ ಮಾಡುವಲ್ಲಿ ಪರಿಣತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ