ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಸದಾ ಒಂದಿಲ್ಲೊಂದು ಪೋಸ್ಟ್ಗಳನ್ನು ಕೂಡ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಹಾಕಿರುವ ಪೋಸ್ಟ್ ಒಂದಕ್ಕೆ ನಿರ್ದೇಶಕ ಸಿಂಪಲ್ ಸುನಿ ಮಾಡಿರುವ ಕಮೆಂಟ್ ತುಂಬಾನೇ ವೈರಲ್ ಆಗಿದೆ.
ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಅವತಾರ ಪುರುಷ ಚಿತ್ರದಲ್ಲಿ ಶರಣ್ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶರಣ್ ಹಾಗೂ ಆಶಿಕಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಆಶಿಕಾ ಇತ್ತೀಚೆಗೆ ಶೂಟಿಂಗ್ಗೆ ಚಕ್ಕರ್ ಹಾಕಿದ್ದಾರಂತೆ!
ಆಶಿಕಾ ಟ್ವಿಟ್ಟರ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಸೀರೆ ಉಟ್ಟು ಮಿಂಚಿದ್ದರು ಆಶಿಕಾ. ನಿಮ್ಮ ವೀಕೆಂಡ್ ಹೇಗೆ ನಡೆಯುತ್ತಿದೆ ಎಂದು ಫ್ಯಾನ್ಸ್ ಬಳಿ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸಿಂಪಲ್ ಸುನಿ, ಹೀರೋಯಿನ್ ಸೀರೆ ಉಟ್ಕೊಂಡು ಫೋಟೋಶೂಟ್ಗೆ ಹೋಗಿದ್ದರು. ಹೀಗಾಗಿ ಹೀರೋಯಿನ್ ಡೇಟ್ ಇಲ್ಲದೆ, ಶೂಟಿಂಗ್ ಇಲ್ಲದೆ ನಾವು ಮನೆಯಲ್ಲಿ ಕೂತಿದ್ದೆವೆ ಎಂದು ಉತ್ತರಿಸಿದ್ದಾರೆ ಸುನಿ.
How was your weekend? pic.twitter.com/8yDN9ccLqf
— Ashika Ranganath (@AshikaRanganath) October 27, 2020
Heroine saree utkondu photo shoot ge hogidru,,
so avr date ilde ,
shooting aagde
maneli kaali koothiddo.....😔🤪
— ಸುನಿ/SuNi (@SimpleSuni) October 27, 2020
😅 yappa nandu free dates kottidde.. kottideeni neeve madkondilla 🙆🏻♀️😉 https://t.co/EnVAH03IPi
— Ashika Ranganath (@AshikaRanganath) October 27, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ