Lata Mangeshkar: ಲತಾ ಮಂಗೇಶ್ಕರ್ ಅವರ ಆರೋಗ್ಯ ಈಗ ಹೇಗಿದೆ? ಶೀಘ್ರ ಚೇತರಿಕೆಗಾಗಿ ಮನೆಯಲ್ಲಿ ಹೋಮ-ಹವನ!

ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದೆ ಆದರೆ ಇದು ಕೋವಿಡ್19 ಪ್ರಕರಣವಾಗಿರುವುದರಿಂದ ನನ್ನನು ಒಳಗಡೆ ಹೋಗಲು ಅನುಮತಿ ನೀಡಲಿಲ್ಲ ಎಂದು ಗಾಯಕಿ ಆಶಾ ಭೋಸ್ಲೆ ತಿಳಿಸಿದ್ದಾರೆ

ಲತಾ ಮಂಗೇಶ್ಕರ್ , ಆಶಾ ಭೋಸ್ಲೆ

ಲತಾ ಮಂಗೇಶ್ಕರ್ , ಆಶಾ ಭೋಸ್ಲೆ

  • Share this:
ಈಗಾಗಲೇ ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ (Covid-19 Epidemic) ಪ್ರಕರಣಗಳು ಹೆಚ್ಚುತ್ತಿರುವುದಂತೂ ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದ್ದು, ಈ ಪೈಕಿ ಬಾಲಿವುಡ್‌ನ ಹಿರಿಯ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಕೋವಿಡ್-19 ಮತ್ತು ನ್ಯುಮೋನಿಯಾದಿಂದ (Pneumonia) ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ಚೇತರಿಕೆಗಾಗಿ ದೇಶಾದ್ಯಂತ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿರುವಾಗ, ಅವರ ಸಹೋದರಿ ಮತ್ತು ಇನ್ನೊಬ್ಬ ಬಾಲಿವುಡ್ ನ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಲತಾ ಅವರ ಮನೆಯಲ್ಲಿ ಅವರಿಗಾಗಿ ಪೂಜೆಗಳನ್ನು ಆಯೋಜಿಸಲಾಗಿದೆ ಎಂಬ ಸುದ್ದಿಯನ್ನು ಸುದ್ದಿ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಭುಕುಂಜ್ ನಿವಾಸದಲ್ಲಿ ಪೂಜೆ
ಲತಾ ಮಂಗೇಶ್ಕರ್ ಮುಂಬೈ ನಗರದ ದಕ್ಷಿಣ ಭಾಗದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರನ್ನು ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಆಶಾ ಭೋಸ್ಲೆ "ಲತಾ ಮಂಗೇಶ್ಕರ್ ಅವರ ಪ್ರಭುಕುಂಜ್ ನಿವಾಸದಲ್ಲಿ ಭಗವಾನ್ ಶಿವ ರುದ್ರರನ್ನು ಅವರ ಮನೆಯಲ್ಲಿ ಇರಿಸಲಾಗಿದೆ ಮತ್ತು ಅವರ ಚೇತರಿಕೆಗಾಗಿ ಪೂಜೆಗಳನ್ನು ಆಯೋಜಿಸಲಾಗಿದೆ" ಎಂದು ಹೇಳಿದರು.

ಆರೋಗ್ಯದಲ್ಲಿ ಸುಧಾರಣೆ
ಭಾನುವಾರದಂದು ಮಹಾರಾಷ್ಟ್ರ ಆರೋಗ್ಯ ಸಚಿವರಾದಂತಹ ರಾಜೇಶ್ ತೋಪೆ ಹಿರಿಯ ಗಾಯಕಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು "ಲತಾ ಮಂಗೇಶ್ಕರ್ ಅವರ ಆರೋಗ್ಯವು ಸುಧಾರಿಸುತ್ತಿದೆ. ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದೆ, ಅವರು ಲತಾ ಅವರ ಆರೋಗ್ಯದ ಬಗ್ಗೆ ನನಗೆ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದರಿಂದ ಆಸ್ಪತ್ರೆಯ ವಕ್ತಾರರು ಗಾಯಕಿಯ ಸ್ಥಿತಿಯ ಬಗ್ಗೆ ಆಗಾಗ್ಗೆ ಅಪ್‌ಡೇಟ್ ಒದಗಿಸಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ" ಎಂದು ಆರೋಗ್ಯ ಸಚಿವ ಹೇಳಿದರು.

ಇದನ್ನೂ ಓದಿ: Lata Mangeshkar Hospitalized: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕೋವಿಡ್ ಸೋಂಕು, ICUನಲ್ಲಿ ಚಿಕಿತ್ಸೆ

ತೀವ್ರ ನಿಗಾ ಘಟಕದಲ್ಲಿ ದಾಖಲು
ಈ ಹಿಂದೆ 92 ವರ್ಷದ ಗಾಯಕಿಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಪ್ರತಿತ್ ಸಂದಾನಿ ಅವರು ಭಾನುವಾರ ಸುದ್ದಿ ಸಂಸ್ಥೆಗೆ “ಲತಾ ಮಂಗೇಶ್ಕರ್ ಅವರು ಇನ್ನೂ ಐಸಿಯುನಲ್ಲಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹೇಳಿದ್ದರು. ಕಳೆದ ವಾರ ಲತಾ ಅವರಿಗೆ ಕೆಲವು ರೋಗಲಕ್ಷಣಗಳನ್ನು ಹೊಂದಿದ್ದು, ಕೋವಿಡ್-19 ತಪಾಸಣೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದ್ದು ನಂತರ ಕೂಡಲೇ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿದ್ದರು. ಅವತ್ತಿನಿಂದ ಇವರ ಲಕ್ಷಾಂತರ ಅಭಿಮಾನಿಗಳು ತುಂಬಾನೇ ಚಿಂತಿತರಾಗಿ ಇವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಎದುರು ನೋಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಅಕ್ಕನ ಬಗ್ಗೆ ತಂಗಿ ಆಶಾ ಹೇಳಿದ್ದೇನು ಗೊತ್ತೇ?
ಲತಾ ಅವರ ಸಹೋದರಿ ಮತ್ತು ಗಾಯಕಿ ಆಶಾ ಭೋಸ್ಲೆ ಸಹ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಥಿತಿಯ ಬಗ್ಗೆ ಗುರುವಾರ ಮಾಹಿತಿಯನ್ನು ಸುದ್ದಿ ಮಾಧ್ಯಮದವರಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಆದರೆ ಇದು ಕೋವಿಡ್-19 ಪ್ರಕರಣವಾಗಿರುವುದರಿಂದ ನನ್ನನು ಒಳಗಡೆ ಹೋಗಲು ಅನುಮತಿ ನೀಡಲಿಲ್ಲ ಎಂದು ಗಾಯಕಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಅವರು ಯಾರಿಗೂ ಅವರನ್ನು ನೋಡಲು ಅವಕಾಶ ನೀಡುತ್ತಿಲ್ಲ, ನಾನು ಒಮ್ಮೆ ಹೋದೆ. ಆದರೆ ಕಾಂಪೌಂಡ್ ಒಳಗೆ ಸಹ ನನ್ನನ್ನು ಅನುಮತಿಸಲಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಗಾಯಕಿ ಲತಾ ಮಂಗೇಶ್ಕರ್ ಬಂಗಲೆ ಬಳಿ ಕಂಡ ಚಿರತೆ: ಆತಂಕದಲ್ಲಿ ಸ್ಥಳೀಯರು..!

“ಅಕ್ಕನಿಗೆ ಸ್ವಲ್ಪ ಕೆಮ್ಮು ಮತ್ತು ಶೀತವಿದ್ದು, ಆಕೆಯ ಆರೋಗ್ಯವು ಮೊದಲಿಗಿಂತಲೂ ಈಗ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ, ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದು ಅವಳು ಬೇಗನೆ ಚೇತರಿಸಿಕೊಂಡು ಮನೆಗೆ ಬರುತ್ತಾಳೆ ಎನ್ನುವ ಭರವಸೆ ನನಗಿದೆ" ಎಂದು ಹೇಳಿದರು.
Published by:vanithasanjevani vanithasanjevani
First published: