Roberrt: ರಾಬರ್ಟ್​ ಅಡ್ಡಾದಿಂದ ಹೊಸ ಸುದ್ದಿ: ಆಶಾ ಭಟ್​ ಮಾಡುತ್ತಿರುವುದು ಯಾವ ರೀತಿಯ ಪಾತ್ರ ಗೊತ್ತಾ..?

Roberrt: ರಾಬರ್ಟ್​ ಅಡ್ಡಾಗೆ ಕಾಲಿಟ್ಟಿರುವ ಆಶಾ ಹುಟ್ಟಿದ ನೆಲದಲ್ಲೇ ನೆಲೆ ಕಂಡುಕೊಳ್ಳಲು ಸಿಕ್ಕಾಪಟ್ಟೆ ಶ್ರಮಿಸುತ್ತಿದ್ದಾರೆ. ಅದಕ್ಕೆ ಅವರ ಈ ಟ್ವಿಟರ್​ ಪೋಸ್ಟ್ ಒಂದು ಪುಟ್ಟ ಉದಾಹರಣೆ.

Anitha E | news18-kannada
Updated:September 7, 2019, 2:02 PM IST
Roberrt: ರಾಬರ್ಟ್​ ಅಡ್ಡಾದಿಂದ ಹೊಸ ಸುದ್ದಿ: ಆಶಾ ಭಟ್​ ಮಾಡುತ್ತಿರುವುದು ಯಾವ ರೀತಿಯ ಪಾತ್ರ ಗೊತ್ತಾ..?
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​ ಹಾಗೂ ಆಶಾ ಭಟ್​
  • Share this:
ಭದ್ರಾವತಿ ಹುಡುಗಿ ಆಶಾ ಭಟ್​ ದರ್ಶನ್​ ಅವರ 53ನೇ ಸಿನಿಮಾ 'ರಾಬರ್ಟ್​' ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿರುವ ವಿಷಯ ಗೊತ್ತೇ ಇದೆ. ಮುಂಬೈನಲ್ಲಿ ಮಾಡೆಲಿಂಗ್​ ಮಾಡುತ್ತಲೇ ಬಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕನ್ನಡತಿ ಆಶಾ ಡಿಬಾಸ್​ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

'ರಾಬರ್ಟ್'​ ಅಡ್ಡಾಗೆ ಕಾಲಿಟ್ಟಿರುವ ಆಶಾ ಹುಟ್ಟಿದ ನೆಲದಲ್ಲೇ ನೆಲೆ ಕಂಡುಕೊಳ್ಳಲು ಸಿಕ್ಕಾಪಟ್ಟೆ ಶ್ರಮಿಸುತ್ತಿದ್ದಾರೆ. ಅದಕ್ಕೆ ಅವರ ಈ ಟ್ವಿಟರ್​ ಪೋಸ್ಟ್ ಒಂದು ಪುಟ್ಟ ಉದಾಹರಣೆ.

ಈ ಸಿನಿಮಾಗಾಗಿ ಆಶಾ ಈಗಾಗಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ಜಿಮ್​ನಲ್ಲಿ ಬೆರವಳಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಇನ್ನೇನು ಆರಂಭವಾಗಲಿದ್ದು, ಅದಕ್ಕಾಗಿ ಆಶಾ ಸಿದ್ಧವಾಗುತ್ತಿದ್ದಾರೆ.

ಇದನ್ನೂ ಓದಿ: Takkar: ಡಿಬಾಸ್ ದರ್ಶನ್​​ ಕೈಯಿಂದ ಟಕ್ಕರ್​ ಸಿನಿಮಾದ ಆಡಿಯೋ-ಟ್ರೈಲರ್​​​ ಬಿಡುಗಡೆ..!

ಶಿಲ್ಪಿ ಕೆತ್ತಿನ ಶಿಲಾಬಾಲಿಕೆಯಂತಿರುವ ಆಶಾ ಮತ್ತೆ ಜಿಮ್​ನಲ್ಲಿ ವರ್ಕೌಟ್​ ಮಾಡಲು ಹೋಗಿದ್ದಾರೆ ಎಂದರೆ 'ರಾಬರ್ಟ್​' ಸಿನಿಮಾದಲ್ಲಿ ಅವರದ್ದು ಸಾಹಸ ಪ್ರಧಾನ ಪಾತ್ರವಿರಬೇಕು ಎಂಬ ಟಾಕ್​ ಆರಂಭವಾಗಿದೆ.

 
ಆಶಾ ಅಭಿನಯ ಸೇರಿದಂತೆ ನೃತ್ಯದಲ್ಲೂ ಎತ್ತಿ ಕೈ. ಹಲವಾರು ನೃತ್ಯ ಪ್ರಕಾರಗಳನ್ನು ಅಭ್ಯಾಸ ಮಾಡಿರುವ ಅವರು ಹೇಗೆ ಡಾನ್ಸ್​ ಮಾಡುತ್ತಾರೆ ಗೊತ್ತಾ? ಅವರೇ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಒಂದು ವಿಡಿಯೋ ಇಲ್ಲಿದೆ ನೋಡಿ.

 ಈಗಾಗಲೇ ಬಾಲಿವುಡ್​ನಲ್ಲಿ ಆ್ಯಕ್ಷನ್​ ಸಿನಿಮಾ 'ಜಂಗ್ಲಿ'ಯಲ್ಲಿ ಅಭಿನಯಿಸಿರುವ ಆಶಾ, ಕನ್ನಡದಲ್ಲಿ ದಚ್ಚು ಮುಂದೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳದ್ದು.

ಇದನ್ನೂ ಓದಿ: ನಿಮ್ಮೊಂದಿಗೆ ಕಿಚ್ಚ: ಟ್ವಿಟರ್​ ಲೈವ್​ನಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಲಿದ್ದಾರೆ ಸುದೀಪ್​

ಏನೇ ಇರಲಿ ಸದಾ ಕನ್ನಡಿಗರಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುವ ದರ್ಶನ್​ ಈ ಸಲವೂ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತರುಣ್​ ಸುದೀರ್ ನಿರ್ದೇಶನದ  ಈ ಚಿತ್ರ 'ಒಡೆಯ' ಸಿನಿಮಾದ ಚಿತ್ರೀಕರಣ ಮುಗಿದ ನಂತರ ಕಿಕ್​ ಸ್ಟಾರ್ಟ್​ ಆಗಲಿದೆ.

Rashmika Mandanna: ಸೆನ್ಸೇಷನ್​ ಆಫ್​ ದ ಇಯರ್​ ಪ್ರಶಸ್ತಿ ತನ್ನದಾಗಿಸಿಕೊಂಡ ರಶ್ಮಿಕಾರ ಹಾಟ್​ ಚಿತ್ರಗಳು..!

 

First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ