ಕನ್ನಡದವರೇ ಆಗಿದ್ದರೂ ಸಾಕಷ್ಟು ಮಂದಿ ಬೇರೆ ಭಾಷೆಯ ಸಿನಿರಂಗದಲ್ಲಿ ಹೆಸರು ಮಾಡಿದ್ದಾರೆ. ಅನುಷ್ಕಾ ಶೆಟ್ಟಿ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಹೀಗೆ ಸಾಕಷ್ಡು ಮಂದಿ ಇದ್ದಾರೆ. ಕನ್ನಡತಿ ಆಶಾ ಭಟ್ ಸಹ ಇದಕ್ಕೆ ಹೊರತಾಗಿಲ್ಲ. ಭದ್ರಾವತಿಯ ಹುಡುಗಿ ಆಶಾ ಭಟ್ ಸ್ಯಾಂಡಲ್ವುಡ್ಗಿಂತ ಮೊದಲು ಬಾಲಿವುಡ್ನಲ್ಲಿ ನಟಿಸಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಹಿಂದಿಯಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸುತ್ತಲೇ ರೂಪದರ್ಶಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಬರ್ಟ್ ಸಿನಿಮಾದ ಮೂಲಕ ಈ ಕನ್ನಡತಿ ಈಗ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ದರ್ಶನ್ ಜೊತೆ ನಾಯಕಿಯಾಗಿ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದು, ಇನ್ನೇನು ಸಿನಿಮಾ ರಿಲೀಸ್ ಆಗಬೇಕಿದೆ. ಕನ್ನಡಕ್ಕೆ ಬರುತ್ತಿದ್ದಂತೆಯೇ ಆಶಾ ಭಟ್ ಅವರನ್ನು ಹಿಂಬಾಲಿಸುವ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಖತ್ ಡ್ಯಾನ್ಸ್ ಮಾಡುವ ಆಶಾ ಭಟ್ ಅವರ ಮೂಲ ಮಲೆನಾಡಿನದ್ದು. ಹೌದು, ಆಶಾ ಭಟ್ ಅವರ ಅಜ್ಜಿ ಮಲೆನಾಡಿನವರು. ಸಮಯ ಸಿಕ್ಕಾಗಲೆಲ್ಲ ಆಶಾ ಅಜ್ಜಿ ಮನೆಗೆ ಹೋಗಿ ಕಾಲ ಕಳೆಯುತ್ತಾರಂತೆ.
ಕೊರೋನಾ ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲೇ ಇದ್ದ ಆಶಾ, ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲೇ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಾರಂಭಿಸಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಬಗ್ಗೆ ಅಪ್ಡೇಟ್ ಸಹ ಕೊಡುತ್ತಿದ್ದರು.
View this post on Instagram
View this post on Instagram
View this post on Instagram
View this post on Instagram
ವಿದ್ಯುತ್ ಜಮ್ವಾಲ್ ಹಿಂದಿ ಸಿನಿಮಾ 'ಜಂಗ್ಲಿ'ಯಲ್ಲಿ ನಟಿಸಿರುವ ಆಶಾ ಭಟ್, ಈಗ ದೋಸ್ತಾನಾ 2ನಲ್ಲೂ ಅಭಿನಯಿಸುತ್ತಿದ್ದಾರೆ. ಇದರ ಜೊತೆ ಕನ್ನಡದಲ್ಲಿ ದರ್ಶನ್ ಜೊತೆ ರಾಬರ್ಟ್ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಇನ್ನೇನು ಬಿಡುಗಡೆ ದಿನಾಂಕ ಪ್ರಕಟಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ