ಬಾಲಿವುಡ್ನ (Bollywood) ಬಾದ್ ಶಾ ಅಂತಾನೆ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್ (Shah Rukh Khan) ಅವರು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ನಟ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು. ಶಾರುಖ್ ಅವರ ಅಭಿಮಾನಿಗಳ ಬಳಗ ತುಂಬಾನೇ ದೊಡ್ಡದು ಅಂತ ಹೇಳಬಹುದು. ಶಾರುಖ್ ಖಾನ್ ಅವರು ಇತ್ತೀಚೆಗೆ ಮುಸ್ಲಿಂ (Muslim) ನಂಬಿಕೆ ಮತ್ತು ಹಿಂದೂ ನಂಬಿಕೆಗಳ ಪ್ರಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಕೆಲವು ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದು ಸುದ್ದಿಯಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ತಮ್ಮ 'ಡಂಕಿ' ಸಿನಿಮಾದ ಚಿತ್ರದ ಚಿತ್ರೀಕರಣವನ್ನು ಮುಗಿಸಿದ ನಂತರ ಮೆಕ್ಕಾದಲ್ಲಿ 'ಉಮ್ರಾ' ಮಾಡಿದ ನಂತರ, 'ಪಠಾನ್' ತಾರೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಾಲಯದಲ್ಲಿ ಕಾಣಿಸಿಕೊಂಡರು.
ಅವರ ಅಭಿಮಾನಿಗಳು ಸೆರೆಹಿಡಿದ ಚಿತ್ರಗಳು ಮತ್ತು ವೀಡಿಯೋಗಳಲ್ಲಿ, ಬಾಲಿವುಡ್ ನಟನ ಭೇಟಿಯು 2023 ರಲ್ಲಿ ಬಿಡುಗಡೆಯಾಗಲಿರುವ ಅವರ ಚಿತ್ರದ ಹಾಡಿನ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು ನಡೆಯಿತು ಎಂದು ಹೇಳಲಾಗುತ್ತದೆ.
ಈ ಚಿತ್ರದಲ್ಲಿ ನಟ ಶಾರುಖ್ ಜೊತೆಯಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ.
ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ ಶಾರುಖ್
ದೀರ್ಘಕಾಲದ ಕಾಯುವಿಕೆಯ ನಂತರ ಚಲನ ಚಿತ್ರವೊಂದರಲ್ಲಿ ನಟಿಸುತ್ತಿರುವ ನಟನಿಗೆ ಇದು ವಿಶೇಷವಾದ ಕ್ಷಣವಾಗಿದೆ ಎಂದು ಅಭಿಮಾನಿಗಳಿಗೆ ಮನವರಿಕೆಯಾಗಿದೆ.
ಬಹುಶಃ ಇದಕ್ಕಾಗಿ ಅವರು ಹೆಚ್ಚಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮೌಲ್ಯವನ್ನು ಹೊಂದಿರುವ ವಿವಿಧ ಪ್ರಮುಖ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Allu Arjun-Mahesh Babu: ಅಲ್ಲು ಸ್ಟೇಜ್ ಹತ್ತಿದಾಗ ಇಳಿದು ಹೋದ ಮಹೇಜ್ ಬಾಬು! ಇದೇನಾಯ್ತು?
ವೈಷ್ಣೋದೇವಿ ದೇವಾಲಯದಲ್ಲಿ 57 ವರ್ಷದ ಶಾರುಖ್ ಖಾನ್ ಅವರು ಕಪ್ಪು ಹೂಡಿ ಧರಿಸಿ, ಮುಖವನ್ನು ಮುಚ್ಚಿಕೊಂಡು, ಇತರ ಯಾತ್ರಾರ್ಥಿಗಳೊಂದಿಗೆ, ಜನಸಮೂಹದೊಂದಿಗೆ ಬೆರೆತು, ಅವರ ಸುತ್ತಲಿನ ಭದ್ರತೆಯೊಂದಿಗೂ ಅಸ್ಪಷ್ಟವಾಗಿ ಕಾಣಿಸಿಕೊಂಡರು.
ಮೊದಲು ಮೆಕ್ಕಾಗೆ ಭೇಟಿ ನೀಡಿ ನಂತರ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಅವರ ಜಾತ್ಯತೀತ ನಂಬಿಕೆಗಳಿಗಾಗಿ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಶ್ಲಾಘಿಸುತ್ತಿದ್ದಾರೆ.
"ವೈಷ್ಣೋದೇವಿ ದೇವಸ್ಥಾನದಲ್ಲಿ ಶಾರುಖ್ ಖಾನ್. ಮೊದಲು ಮೆಕ್ಕಾದಲ್ಲಿ ಉಮ್ರಾ, ಈಗ ಇಲ್ಲಿ. ಅವರು ನಿಜವಾಗಿಯೂ ಇಡೀ ಭಾರತವನ್ನು ಪ್ರತಿನಿಧಿಸುತ್ತಾರೆ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಮಿಸ್ಟರ್ ಖಾನ್ ಅವರು ವೈಷ್ಣೋದೇವಿ ದರ್ಶನಕ್ಕೆ ಹೋದರು. ನಾನು ಈ ರೀತಿಯ ಸಮಯಗಳಿಗಾಗಿ ಪ್ರಾರ್ಥಿಸುತ್ತಿದ್ದೆ. ಶಾರುಖ್ ಖಾನ್, ನಾನು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ” ಎಂದು ಬರೆದಿದ್ದಾರೆ.
ಪ್ರಸಿದ್ಧ ವೈಷ್ಣೋದೇವಿ ದೇವಾಲಯದ ಬಗ್ಗೆ ಇನ್ನಷ್ಟು ತಿಳಿಯಿರಿ..
ವೈಷ್ಣೋದೇವಿ ದೇವತೆಯನ್ನು 'ಮಾತಾ ರಾಣಿ', 'ತ್ರಿಕೂಟ', 'ಅಂಬೆ' ಮತ್ತು 'ವೈಷ್ಣವಿ' ಎಂದೂ ಸಹ ಕರೆಯಲಾಗುತ್ತದೆ. ಅವಳು ದುರ್ಗಾ ದೇವಿಯ ಅಭಿವ್ಯಕ್ತಿಯಾಗಿದ್ದು, ಶಿವನ ಪುರುಷ ಶಕ್ತಿಯ ಜೊತೆಗೆ ಬ್ರಹ್ಮಾಂಡವನ್ನು ಸಮತೋಲನಗೊಳಿಸುವ ಪ್ರಾಥಮಿಕ ಮತ್ತು ಏಕೈಕ ದೈವಿಕ ಸ್ತ್ರೀ ಶಕ್ತಿ ಎಂದು ಪರಿಗಣಿಸಲಾಗಿದೆ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ದೇವತೆಗಳ ಶಕ್ತಿಗಳನ್ನು ಸಂಯೋಜಿಸಿದ ನಂತರ ವೈಷ್ಣವಿ ದೇವಿಯು ಅವತಾರವನ್ನು ಸ್ವೀಕರಿಸುತ್ತಾಳೆ ಎಂದು ನಂಬಲಾಗಿದೆ. ಆಕೆಗೆ ಸಮರ್ಪಿತವಾದ ದೇವಾಲಯವು ಭಾರತದ ಕತ್ರಾದಲ್ಲಿದೆ, ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾದ ತೀರ್ಥಯಾತ್ರೆಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ