• Home
  • »
  • News
  • »
  • entertainment
  • »
  • RRR: ನಾಚೊ ನಾಚೊ ಡ್ಯಾನ್ಸ್ ಮೇನಿಯಾ! ಹುಕ್​ಸ್ಟೆಪ್ ಟ್ರೈ ಮಾಡಿ 4 ಲಕ್ಷ ಜನರ ಕಾಲು ಟ್ವಿಸ್ಟ್

RRR: ನಾಚೊ ನಾಚೊ ಡ್ಯಾನ್ಸ್ ಮೇನಿಯಾ! ಹುಕ್​ಸ್ಟೆಪ್ ಟ್ರೈ ಮಾಡಿ 4 ಲಕ್ಷ ಜನರ ಕಾಲು ಟ್ವಿಸ್ಟ್

ಜೂ. ಎನ್​ಟಿಆರ್ ಹಾಗೂ ರಾಮ್​ ಚರಣ್

ಜೂ. ಎನ್​ಟಿಆರ್ ಹಾಗೂ ರಾಮ್​ ಚರಣ್

ಎಸ್​ ಎಸ್​ ರಾಜಮೌಳಿ ನಿರ್ದೇಶನದ ನಾಟು ನಾಟು ಅಥವಾ ನಾಚೊ ನಾಚೊ ಸಾಂಗ್ ಎಲ್ಲರೂ ಕೇಳಿರುತ್ತಾರೆ. ಸ್ಟಾರ್ ನಟರು ಈ ಸಾಂಗ್​ನಲ್ಲಿ ಮಾಡಿರೋ ಸ್ಟೆಪ್ ಮಾಡೋಕೆ ಪ್ರಯತ್ನ ಪಟ್ಟು 4 ಲಕ್ಷಕ್ಕೂ ಹೆಚ್ಚು ಜನರ ಕಾಲು ಟ್ವಿಸ್ಟ್ ಆಗಿದ್ಯಂತೆ.

  • News18 Kannada
  • Last Updated :
  • Bangalore, India
  • Share this:

ಎಸ್​ಎಸ್​ ರಾಜಮೌಳಿ (SSR) ನಿರ್ದೇಶನದ ತ್ರಿಬಲ್ ಆರ್ (RRR) ಸಿನಿಮಾ ಈ ಬಾರಿ ಸೌತ್ ಇಂಡಸ್ಟ್ರಿಯಲ್ಲಿ ಹಿಟ್ ಆದ ಕೆಲವು ಸಿನಿಮಾಗಳಲ್ಲಿ ಒಂದು. ಬಾಹುಬಲಿ ನಿರ್ದೇಶಕ ತ್ರಿಬಲ್ ಆರ್ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ರಿಲೀಸ್ ಆಗಿ ಸಖತ್ ಹವಾ ಸೃಷ್ಟಿ ಮಾಡಿತು. ಜಪಾನ್​ನಲ್ಲಿ (Japan) ಅದ್ಭುತ ಪ್ರತಿಕ್ರಿಯೆ ಪಡೆದ ಈ ಸಿನಿಮಾದ ಹಾಡುಗಳು ಸಿನಿಮಾದಷ್ಟೇ ಸೂಪರ್ ಹಿಟ್ ಆಗಿವೆ. ಈ ಸಿನಿಮಾದ ನಾಟು ನಾಟು (Natu natu) ಅಥವಾ ನಾಚೊ ನಾಚೊ (Nacho Nacho), ಅಥವಾ ನಮ್ಮಾಟ ನೋಡು ಹಾಡಿಗೆ ಭಾರೀ ರೆಸ್ಪಾನ್ಸ್ ಬಂದಿದೆ. ಇನ್​ಸ್ಟಾಗ್ರಾಮ್ ರೀಲ್ಸ್ (Insgtaram Reels) ಸೇರಿದಂತೆ ಎಲ್ಲ ಫ್ಲಾಪ್​ಫಾರ್ಮ್​ಗಳಲ್ಲಿಯೂ ಇದೇ ಕಥೆ. ಜನರು ಈ ಹಾಡಿನ ಹುಕ್​ಸ್ಟೆಪ್ (Hook Step) ಪ್ರಯತ್ನಿಸಿ ಬಹಳಷ್ಟು ವಿಡಿಯೋಗಳನ್ನು (Videos) ಸೋಷಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡುತ್ತಿದ್ದಾರೆ.


ನಾಚೊ ನಾಚೊ ಹೊಸ ರೆಕಾರ್ಡ್


ನೆಟ್​ಫ್ಲಿಕ್ಸ್ ಇಂಡಿಯಾ ನಾಚೊ ನಾಚೊ ಸಿನಿಮಾದ ಕುರಿತು ಹೊಸ ಅಪ್ಡೇಟ್ ಹಂಚಿಕೊಂಡಿದ್ದು ಈ ಹಾಡು ಎಷ್ಟು ಕ್ರೇಜ್ ಸೃಷ್ಟಿಸಿದೆ ಎನ್ನುವುದನ್ನು ರಿವೀಲ್ ಮಾಡಿದೆ. 4,25,936 ಜನರು ನಾಚೊ ನಾಚೊ ಹಾಡಿನ ಹುಕ್​ ಸ್ಟೆಪ್ ರೀ-ಕ್ರಿಯೇಟ್ ಮಾಡೋಕೆ ಹೋಗಿ ಕಾಲು ಟ್ವಿಸ್ಟ್ ಮಾಡಿಕೊಂಡಿದ್ದಾರೆ ಎಂದು ನೆಟ್​ಫ್ಲಿಕ್ಸ್ ತಿಳಿಸಿದೆ. ಅಂತೂ ಡ್ಯಾನ್ಸ್ ಗೊತ್ತಿರೋರು, ಗೊತ್ತಿಲ್ಲದೆ ಇರೋರು ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ತ್ರಿಬಲ್ ಆರ್ ಸಿನಿಮಾದ ಹಿಟ್ ಹಾಡು


ತ್ರಿಬಲ್ ಆರ್ ಸಿನಿಮಾ ಭಾಷೆಯ ಗಡಿಯನ್ನು ಮೀರಿ ಎಲ್ಲಾ ಕಡೆಗಳಲ್ಲಿ ಸೂಪರ್  ಹಿಟ್ ಆಗಿ ಹೊರಹೊಮ್ಮಿದೆ. ಸಿನಿಮಾ ನೋಡಿದ ಮಂದಿ ಇದನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ರಾಮ್​ ಚರಣ್ ತೇಜ ಹಾಗೂ ಜೂನಿಯರ್ ಎನ್​ಟಿಆರ್ ಡ್ಯಾನ್ಸ್ ಮಾಡುವ ನಾಟು ನಾಟು ಸಾಂಗ್ ಎಲ್ಲೆಡೆ ಹಿಟ್ ಆಗಿದೆ. ಇದರ ಸ್ಟೆಪ್ ಭಾರೀ ಕಷ್ಟ ಎನಿಸುವುದು ಮಾತ್ರವಲ್ಲದೆ ತುಂಬಾ ಸ್ಫೀಡಾಗಿರುವ ಸ್ಟೆಪ್ ಎಂಬಂತೆ ಕಾಣಿಸುತ್ತದೆ.
ಟ್ರಿಕ್ಕಿಯಾಗಿದೆ ಈ ಹುಕ್​ಸ್ಟೆಪ್


ಈ ಹುಕ್​ಸ್ಟೆಪದ ಟ್ರಿಕ್ಕಿಯಾಗಿದೆ. ಇದನ್ನು ಒಮ್ಮೆ ಸರಿಯಾಗಿ ಗಮನಿಸಿಕೊಂಡರೆ ಮಾಡುವುದು ಸುಲಭ. ಆದರೂ ಅಷ್ಟು ಈಝಿಯಾಗಿ ಕ್ಯಾಚ್ ಮಾಡುವುದಕ್ಕೆ ಸಾಧ್ಯವಾಗುವಂತೆ ಇಲ್ಲ. ಹೀಗಿದ್ದರೂ ಈ ಸ್ಟೆಪ್ ಬಹಳಷ್ಟು ಜನರು ರೀಕ್ರಿಯೇಟ್ ಮಾಡಿ ಹಾಡನ್ನು ಟ್ರೆಂಡ್ ಮಾಡಿದ್ದಾರೆ.


ಹಾಡು ಬರೆದಿದ್ಯಾರು?


ನಾಟು ನಾಟು ಹಾಡನ್ನು ಎಂ.ಎಂ ಕೀರವಾಣಿ ಅವರು ಕಂಪೋಸ್ ಮಾಡಿದ್ದಾರೆ. ತ್ರಿಬಲ್ ಆರ್ ಸಿನಿಮಾದ ಸೌಂಡ್ ಟ್ರ್ಯಾಕ್​ ಸಖತ್ ಹಿಟ್ ಆಗಿದೆ. ಚಂದ್ರಬೋಸ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. 2021 ನವೆಂಬರ್ 10ರಂದು ಹಾಡು ರಿಲೀಸ್ ಆಗಿ ದೊಡ್ಡಮಟ್ಟದಲ್ಲಿ ಹವಾ ಸೃಷ್ಟಿಸಿದೆ.
ಇದರ ಪೂರ್ತಿ ವಿಡಿಯೋ ಸಾಂಗ್ 2022 ಏಪ್ರಿಲ್ 11ರಂದು ಬಿಡುಗಡೆಯಾಯಿತು. ಹಿಂದಿಯಲ್ಲಿ ಈ ಹಾಡು ನಾಚೊ ನಾಚೊ ಎಂದು ಡಬ್ ಆಗಿತ್ತು. ತಮಿಳಿನಲ್ಲಿ ನಾಟು ಕುತ್ತು, ಕನ್ನಡದಲ್ಲಿ ಹಳ್ಳಿ ನಾಟು ಹಾಗೂ ಮಲಯಾಳಂನಲ್ಲಿ ಕರಿಂತೋಳ್ ಎಂದು ರಿಲೀಸ್ ಆಯಿತು.


ಈಗ ಈ ಹಾಡು ಮತ್ತೊಂದು ದಾಖಲೆ ಬರೆದಿದ್ದು 4 ಲಕ್ಷಕ್ಕೂ ಅಧಿಕ ಜನರು ಈ ಹಾಡಿನ ಮೋಡಿಗೆ ಮರುಳಾಗಿ ಇದರ ಹುಕ್​ಸ್ಟೆಪ್ ಟ್ರೈ ಮಾಡಿದ್ದಾರೆ. ಸಾಮಾನ್ಯ ಪ್ರಾಕ್ಟೀಸ್ ಇಲ್ಲದೆ ಇದನ್ನು ಟ್ರೈ ಮಾಡುವುದು ಕಷ್ಟ.

Published by:Divya D
First published: