Bigg Boss OTT: ಈ ಮೂರು ಸಂಖ್ಯೆಯ ಕ್ಯಾಂಡಿಡೇಟ್ ಗಳು ಗೆಲ್ತಾರಂತೆ, ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಗುತ್ತಾ?

ಆರ್ಯವರ್ಧನ್​ ಗುರೂಜಿ ಅವರು ಇದೀಗ ಬಿಗ್​ ಬಾಸ್​ ವೇದಿಕೆ ಮೂಲಕ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಅಲ್ಲದೇ ಈ ಬಾರಿ ಯಾರು ಬಿಗ್​ ಬಾಸ್​ ವಿನ್​ ಆಗಿಲಿದ್ದಾರೆ ಎಂದು ಭವಿಷ್ಯ ಸಹ ನುಡಿದಿದ್ದಾರೆ.

ಆರ್ಯವರ್ಧನ್‌ ಗುರೂಜಿ

ಆರ್ಯವರ್ಧನ್‌ ಗುರೂಜಿ

  • Share this:
ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಿದೆ. ವೂಟ್‌ ಆ್ಯಪ್‌ನಲ್ಲಿ (Voot App)  ಇಂದಿನಿಂದ  ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆರಂಭವಾಗಿದ್ದು, ಈಗಾಗಲೇ 3 ಜನ ಸ್ಪರ್ಧಿಗಳು ಬಿಗ್​ ಬಾಸ್​ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಇನ್ನು, ಬಿಗ್​ ಬಾಸ್​ ಒಟಿಟಿ ಕಾರ್ಯಕ್ರಮ ಆರಂಭವಾಗಿದ್ದು, ವಾಸುಕಿ ಅವರ ಬಿಗ್​ ಬಾಸ್​ ಥಿಮ್​ ಸಾಮಗ್​ ಮೂಲಕ ಅದ್ಧೂರಿಯಾಗಿ ಚಾಲನೆ ದೊರಕಿದೆ.  ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡುತ್ತಿದ್ದಾರೆ.  ಇದರ ನಡುವೆ ಈಗ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ಮೊದಲಿಗೆ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ. ಕಾಲಿಡುತ್ತಿದ್ದಂತೆ ಗುರೂಜಿ ಅವರು ಬಿಗ್​ ಬಾಸ್​ ವಿನ್ನರ್ ಯಾರೆಂದು ಭವಿಷ್ಯ ನುಡುದಿದ್ದಾರೆ.

ಈ ನಂಬರ್​ನವರೇ ಈ ಬಾರಿ ಬಿಗ್​ ಬಾಸ್​ ವಿನ್ನರಂತೆ:

ಹೌದು, ನಾನು ಅಂದ್ರೆ ನಂಬರ್​, ನಂಬರ್ ಅಂದ್ರೆ ನಾನು ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಅವರು ಇದೀಗ ಬಿಗ್​ ಬಾಸ್​ ವೇದಿಕೆ ಮೂಲಕ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಈ ವೇಳೆ ಬಿಗ್​ ಬಾಸ್​ ಒಟಿಟಿ ವೇದಿಕೆಗೆ ಅವರನ್ನು ಕಿಚ್ಚ ಸುದೀಪ್​ ಅವರು ಅದ್ಧೂರಿಯಾಗಿ ವೆಲ್​ಕಮ್ ಮಾಡಿಕೊಂಡರು. ಅಲ್ಲದೇ ಗುರೂಜಿ ಅವರು ಇಲ್ಲಿಯೂ ತಮ್ಮ ನಂಬರ್ ಭವಿಷ್ಯ ಹೇಳಿದ್ದು, ಈ ಬಾರಿ ಯಾರು ಬಿಗ್​ ಬಾಸ್​ ವಿನ್​ ಆಗಿಲಿದ್ದಾರೆ ಎಂದು ಹೇಳಿದ್ದಾರೆ. ಆರ್ಯವರ್ಧನ್​ ಗುರೂಜಿ ಪ್ರಕಾರ 3, 5, 6 ನಂಬರ್‌ನ ಸ್ಪರ್ಧಿಗಳು ಈ ಸಲ ಬಿಗ್​ ಬಾಸ್​ ಒಟಿಟಿ ವಿನ್ನರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಳೇ 3ನೇ ಸ್ಪರ್ಧಿಯಾಗು ತುಳು ನಟ ರೂಪೇಶ್​ ಶೆಟ್ಟಿ ಮನೆಯನ್ನು ಪ್ರವೇಶಿಸಿದ್ದಾರೆ.





ಹಾಗದ್ರೆ ಗುರೂಜಿ ಗೆಲ್ಲಲ್ವಾ?:

ತಾವೇ ಹೇಳಿರುವ ಭವಿಷ್ಯ ಪ್ರಕಾರ ಆರ್ಯವರ್ಧನ್​ ಗುರೂಜಿ ಅವರು ಈ ಬಾರಿ ಬಿಗ್​ ಬಾಸ್​ ಗೆಲ್ಲುವುದಿಲ್ಲ. ಹೌದು, ಏಕೆಂದರೆ ಅವರು ವೇದಿಕೆ ಮೇಲೆ 3, 5, 6 ನಂಬರ್‌ನ ಸ್ಪರ್ಧಿಗಳು ಈ ಸಲ ಬಿಗ್​ ಬಾಸ್​ ಒಟಿಟಿ ವಿನ್ನರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಇಲ್ಲಿ ವಿಶೇಷವೆಂದರೆ ಆರ್ಯವರ್ಧನ್​ ಗುರೂಜಿ ಅವರು ಬಿಗ್​ ಬಾಸ್​ಗೆ ಮೊದಲ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಅಂದರೆ ಅವರ ಪ್ರಕಾರ ಅವರ ನಂಬರ್​ ಇದೀಗ 1 ಆಗಿರುತ್ತದೆ. ಹೀಗಾಗಿ ಅವರು ಬಿಗ್​ ಬಾಸ್​ ಒಟಿಟಿ ಗೆಲ್ಲುವುದಿಲ್ಲ ಎಂದು ಅವರೇ ಒಪ್ಪಿಕೊಂಡಂತಾಗಿದೆ. ಆದರೆ 3ನೇ ಸ್ಪರ್ಧಿಯಾಗಿ ತುಳು ನಟ ರೂಪೇಶ್​ ಶೆಟ್ಟಿ ಅವರು ಆಗಮಿಸಿದ್ದಾರೆ. ಉಳಿದಂತೆ 5 ಮತ್ತು 6ನೇ ಸ್ಪರ್ಧಿ ಇನ್ನೂ ಬರದ ಕಾರಣ ಅವರು ಯಾರೆಂದು ತಿಳಿದಿಲ್ಲ. ಇನ್ನು ಆರ್ಯವರ್ಧನ್ ಅವರ ನಿಜವಾದ ಹೆಸರು ವರದರಾಜ್‌ ಎಂದಾಗಿತ್ತಂತೆ ಆದರೆ ಈ ಹೆಸರು ಅವರಿಗೆ ಇಷ್ಟವಾಗಿಲ್ಲವೆಂದು ಬದಲಾಯಿಸಿಕೊಂಡರಂತೆ.

ಇದನ್ನೂ ಓದಿ: Bigg Boss OTT: ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಆರ್ಯವರ್ಧನ್​ ಗುರೂಜಿ

ಮಗಳ ಅಪ್ಪುಗೆ ಬಳಿಕ ದೊಡ್ಮನೆಗೆ ಗುರೂಜಿ ಎಂಟ್ರಿ:

ಇನ್ನು, ಸ್ಟೇಜ್‌ ಮೇಲೆ ಮಾತನಾಡಲು ತಡವರಿಸುತ್ತಿದ್ದ ಆರ್ಯವರ್ಧನ್ ಗುರೂಜಿ‌ ಅವರಿಗೆ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕುರಿತು ಮಾತಾಡಿಸಿದರು. ಬಿಗ್‌ ಬಾಸ್‌ ಮನೆಯ ಒಳಗೆ ಹೋಗುವ ಬಗ್ಗೆ ಮಾತನಾಡಿದಾಗ ಮಗಳನ್ನು ಅಪ್ಪಿಕೊಳ್ಳುವ ಆಸೆ ಹಂಚಿಕೊಂಡ ಗುರೂಜಿ ಅವರು, ಮಘಳನ್ನು ವೇದಿಕೆ ಮೇಲೆ ಒಮ್ಮೆ ಅಪ್ಪುಗೆ ಮಾಡಿ ಬಳಿಕ ದೊಡ್ಮನೆ ಒಳಗೆ ಪ್ರವೇಶಿಸಿದರು.
Published by:shrikrishna bhat
First published: