Bigg Boss OTT: ಆರ್ಯವರ್ಧನ್ ಲೆಕ್ಕಗಳೆಲ್ಲಾ ಉಲ್ಟಾಪಲ್ಟ; ಗುರೂಜಿ ಬಿಡೋದೆಲ್ಲ ಬರೀ ಬೊಗಳೆ!

ಸೋನು ಎಲ್ಲಾ ಆಟದಲ್ಲಿ ಗೆಲ್ಲುತ್ತಾರೆ ಎಂದು ಗುರೂಜಿ ಅವರು ಹೇಳಿದ್ದರು. ಆದರೆ, ಸೋನುಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಆರ್ಯವರ್ಧನ್ ಅವರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿತ್ತು. ಈ ಕಾರಣಕ್ಕೆ ಸೋಮಣ್ಣ ಅವರು ಗುರೂಜಿ ಅವರನ್ನು ಟೀಕೆ ಮಾಡಿದ್ದಾರೆ.

ಆರ್ಯವರ್ಧನ್​ ಗುರೂಜಿ

ಆರ್ಯವರ್ಧನ್​ ಗುರೂಜಿ

  • Share this:
OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ನಲ್ಲಿ (Bigg Boss OTT) ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಖಾಸಗಿ ಮಾಧ್ಯಮಗಳಲ್ಲಿ ಸಂಖ್ಯಾಶಾಸ್ತ್ರ (Numerology) ಹಾಗೂ ಭವಿಷ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದ ಆರ್ಯವರ್ಧನ್​ ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲೂ (Reality Show) ಭಾರೀ ಸುದ್ದಿಯಾಗ್ತಿದ್ದಾರೆ.  ಅನೇಕ ಬಾರಿ ಸೋಶಿಯಲ್ ಮಿಡಿಯಾದಲ್ಲಿ (Social Media) ಟ್ರೋಲ್ ಆಗಿದ್ದ ಆರ್ಯವರ್ಧನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದ್ರೆ ಬಿಗ್​ ಮನೆಯೊಳಗೆ ಆರ್ಯವರ್ಧನ್ ಬಗ್ಗೆ ಗುಸುಗುಸು ಪಿಸುಪಿಸು ಜೋರಾಗಿದೆ. 

ಸೋನು ಗೌಡ ಬಗ್ಗೆ ಆರ್ಯವರ್ಧನ್​ ಭವಿಷ್ಯ

ಆರ್ಯವರ್ಧನ್​ ಕೆಲ ಮಾತುಗಳು ಕೆಲ ಸ್ಪರ್ಧಿಗಳಿಗೆ ಇಷ್ಟವಾಗುತ್ತಿಲ್ಲ. ಬಿಗ್ ಬಾಸ್ ನೀಡೋ ಟಾಸ್ಕ್​ಗಳಲ್ಲಿ ಆರ್ಯವರ್ಧನ್ ಗುರೂಜಿ ಅವರು ಟಾಸ್ಕ್ ಸಂದರ್ಭದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಪ್ರಿಡಿಕ್ಟ್ ಮಾಡುತ್ತಾರೆ ಎಂದು ಮನೆ ಮಂದಿ ಚರ್ಚೆ ಮಾಡುತ್ತಿದ್ರು.

ಸೋನು ಎಲ್ಲಾ ಆಟದಲ್ಲಿ ಗೆಲ್ಲುತ್ತಾರೆ ಎಂದು ಗುರೂಜಿ ಅವರು ಹೇಳಿದ್ದರು. ಆದರೆ, ಸೋನುಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಆರ್ಯವರ್ಧನ್ ಅವರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿತ್ತು. ಈ ಕಾರಣಕ್ಕೆ ಸೋಮಣ್ಣ ಅವರು ಗುರೂಜಿ ಅವರನ್ನು ಟೀಕೆ ಮಾಡಿದ್ದಾರೆ.



ಗುರೂಜಿ ಮಾತು ಕೇಳಿ ನಕ್ಕ ಸೋಮಣ್ಣ

ಬಿಗ್​ ಬಾಸ್​ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಗುರೂಜಿ ಅವರು ಕ್ಯಾಮೆರಾಗೆ ಹೇಳುತ್ತಿದ್ದರು. ಇದನ್ನು ನೋಡಿ ಸೋಮಣ್ಣ ನಕ್ಕಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಅವರ ಬಗ್ಗೆ ಹೇಳಿಕೊಂಡು ನಕ್ಕಿದ್ದಾರೆ. ಗುರೂಜಿ ಅವರು ಲೆಕ್ಕಾಚಾರದಲ್ಲಿ ಸದಾ ತಪ್ಪುತ್ತಿದ್ದಾರೆ. ಅವರು ಭವಿಷ್ಯ ನಿಜವಾಗಲ್ಲ. ವ್ಯಕ್ತಿ ಆಗಿ ಅವರು ಇಷ್ಟ ಆಗುತ್ತಾರೆ ಅಷ್ಟೇ. ಆದರೆ, ಸಂಖ್ಯಾಶಾಸ್ತ್ರಜ್ಞರಾಗಿ ಅವರು ಫ್ಲಾಪ್. ಅವರು ಬಿಡೋದಲ್ಲ ಬರೀ ಬೊಗಳೆ ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಉಳಿದ ಸ್ಪರ್ಧಿಗಳು ನಕ್ಕಿದ್ದಾರೆ.

ಆರ್ಯವರ್ಧನ್ ಗುರೂಜಿ ಹೊಸ ಲುಕ್ ವೈರಲ್
 ಬಿಗ್​ಬಾಸ್​ ಮನೆಯಲ್ಲಿ ಬೆಳಗ್ಗೆ ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ ಎಂದು ಬಾಯ್ತುಂಬ ಹೊಗಳಿದ್ದಾರೆ. ಪ್ರೋಮೋದಲ್ಲಿ ಇಷ್ಟೇ ವಿಚಾರ ತೋರಿಸಲಾಗಿದೆ. ನಂತರದ ವಿಡಿಯೋದಲ್ಲಿ ಗುರೂಜಿ ಅವರು ಮೀಸೆ ಹಾಗೂ ತಲೆ ಕೂದಲು ಇಲ್ಲದೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಸಾಕಷ್ಟು ವೈರಲ್ ಆಗುತ್ತಿದೆ.

ಆರ್ಯವರ್ಧನ್ ಅವರು ಹಲವು ವಿಚಾರಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ತಾವು ನಿಜ ಜೀವನದಲ್ಲಿ ದೆವ್ವ ನೋಡಿರುವ ಬಗ್ಗೆ ಅವರು ಹೇಳಿದ್ದರು. ಜತೆಗೆ ಅವರ ಆಸ್ತಿ ಮೌಲ್ಯ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ.

ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಐಪಿಎಲ್​ ಭವಿಷ್ಯದ ಮೂಲಕ ಗುರೂಜಿ ಟ್ರೋಲ್​

ಕಳೆದ ಬಾರಿಯ ಐಪಿಎಲ್ ಸಮಯದಲ್ಲಿ ಇವರು ಹೇಳಿತ್ತಿದ್ದ ಭವಿಷ್ಯ ಬಹಳಷ್ಟು ಸದ್ದು ಮಾಡಿತ್ತು. ಏಕೆಂದರೆ ತಮ್ಮ ಸಂಖ್ಯಾಶಾಸ್ತ್ರದ ಮೂಲಕವೇ ಯಾವ ತಂಡ ಪಂದ್ಯ ಗೆಲ್ಲಲಿದೆ ಯಾವ ಆಟಗಾರರು ಅಂದು ಚೆನ್ನಾಗಿ ಆಡಲಿದ್ದಾನೆ ಎನ್ನುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ಯಡಿಯೂರಪ್ಪನವರ ರಾಜೀನಾಮೆ ಕುರಿತು ಭವಿಷ್ಯ

ರಾಜಕೀಯ ವಲಯದ ಬಗ್ಗೆ ಸಹ ನಿಖರ ಭವಿಷ್ಯ ನುಡಿದು ಸಂಚಲನ ಮೂಡಿಸಿದ್ದರು ಆರ್ಯವರ್ಧನ ಗುರೂಜಿ. ಅಂದಹಾಗೆ ಯಡಿಯೂರಪ್ಪನವರ ರಾಜೀನಾಮೆ ಕುರಿತು ನುಡಿದ ಭವಿಷ್ಯ ಹೇಳಿದ್ದಂತೆ ನಿಜವಾಗಿತ್ತು, ಇದು ನಿಜಕ್ಕೂ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆಗಷ್ಟ್​ ವೇಳೆಗೆ ಯಡಿಯೂರಪ್ಪನವರ ರಾಜೀನಾಮೆ ನೀಡುತ್ತಾರೆ ಎಂದಿದ್ದ ಗುರೂಜಿಯವರ ಮಾತಿನಂತೆ ಯಡಿಯೂರಪ್ಪನವರು ಕಳೆದ ವರ್ಷ ಜುಲೈ 16ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
Published by:Pavana HS
First published: