ಬಾಲಿವುಡ್ ಸೆಲೆಬ್ರೆಟಿಗಳು (Bollywood celebrity) ಹೊಸ ವರ್ಷವನ್ನು (NewYear) ಸ್ವಾಗತ ಮಾಡುವುದು ಅಂತ ಹೇಳಿದರೆ ಮಾಮೂಲಿ ಮಾತಲ್ಲ ಬಿಡಿ, ಡಿಸೆಂಬರ್ 31 ರ ರಾತ್ರಿ ಸ್ನೇಹಿತರ ಜೊತೆ ಮತ್ತು ಕುಟುಂಬದವರೊಡನೆ ಒಂದು ಗ್ರ್ಯಾಂಡ್ ಆದ ಪಾರ್ಟಿ (Party) ಆಗಲೇಬೇಕು. ಆಗಲೇ ಹೊಸ ವರ್ಷವನ್ನು ಬರಮಾಡಿಕೊಳ್ಳುವುದರಲ್ಲಿ ವಿಶೇಷವಾದ ಮಜಾ ಅಂತ ಹೇಳಬಹುದು. ಮೊನ್ನೆ ನಟಿ ಕರೀನಾ ಕಪೂರ್ ಅವರು ಹೊಸ ವರ್ಷವನ್ನು ತಮ್ಮ ಪತಿ ಮತ್ತು ನಟ ಸೈಫ್ ಅಲಿ ಖಾನ್ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ಆಚರಿಸಿದ್ದು, ಕುಟುಂಬದ ಮುದ್ದಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನಟಿ ಹಂಚಿಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಬ್ಬ ನಟ ತಮ್ಮ ಹೊಸ ವರ್ಷವನ್ನು ಹೇಗೆ ಮತ್ತು ಎಲ್ಲಿ ಆಚರಿಸಿದ್ದಾರೆ ನೋಡಿ.
ದುಬೈನಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ ಶಾರುಖ್ ಮಗ ಆರ್ಯನ್
ಬಾಲಿವುಡ್ ನ ಬಾದ್ ಷಾ ಅಂತಾನೆ ಖ್ಯಾತಿ ಪಡೆದಿರುವ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಮತ್ತು ಅವರ ಮಗ ಆರ್ಯನ್ ಖಾನ್ ಹೊಸ ವರ್ಷವನ್ನು ಎಲ್ಲಿ ಆಚರಿಸಿದರು ಅಂತ ತಿಳಿದುಕೊಳ್ಳುವುದಕ್ಕೆ ತುಂಬಾನೇ ಕುತೂಹಲ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರು ದುಬೈನಲ್ಲಿ ಹೊಸ ವರ್ಷವನ್ನು ಪಾರ್ಟಿ ಮಾಡಿ ಸ್ವಾಗತಿಸಿದರು. ಆರ್ಯನ್ ಅವರ ಪಾರ್ಟಿ ಮಾಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು.
View this post on Instagram
ತನ್ನ ಕುಟುಂಬದವರೊಡನೆ ಅಲಿಬಾಗ್ ನಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ ಶಾರುಖ್
ಆರ್ಯನ್ ಖಾನ್ ದುಬೈನಲ್ಲಿ ತನ್ನ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದರೆ, ಮತ್ತೊಂದೆಡೆ, ಅವರ ಕುಟುಂಬವು ಅಲಿಬಾಗ್ ನಲ್ಲಿರುವ ತಮ್ಮ ಬಂಗಲೆಯಲ್ಲಿ ಹೊಸ ವರ್ಷವನ್ನು ಆಚರಿಸಿತು. ಹೊರಗಿನಿಂದ ತೆಗೆದ ಫೋಟೋದಲ್ಲಿ, ಶಾರುಖ್ ಅಲಿಬಾಗ್ ನಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಕಾಣಬಹುದು. ಸೆಲೆಬ್ರಿಟಿ ಕಪ್ಪು ಟಿ-ಶರ್ಟ್ ಧರಿಸಿ ಕಿಟಕಿಯ ಹಿಂದೆ ನಿಂತಿರುವುದನ್ನು ಇದು ತೋರಿಸುತ್ತದೆ. ವರದಿಗಳ ಪ್ರಕಾರ, ಶಾರುಖ್ ಅವರೊಂದಿಗೆ ಅವರ ಪತ್ನಿ ಗೌರಿ, ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಸಹ ಫಾರ್ಮ್ ಹೌಸ್ ನಲ್ಲಿದ್ದರು.
ಇದಕ್ಕೂ ಮೊದಲು, ಆರ್ಯನ್ ಖಾನ್ ಕ್ರಿಸ್ಮಸ್ ಮುನ್ನಾ ದಿನದಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರೊಂದಿಗೆ ಭದ್ರತಾ ಸಿಬ್ಬಂದಿ ಇದ್ದರು. ಆದರೆ ಇತರ ಯಾವುದೇ ಕುಟುಂಬ ಸದಸ್ಯರು ಅಲ್ಲಿ ಇರಲಿಲ್ಲ. ವಿಮಾನ ನಿಲ್ದಾಣದ ಟರ್ಮಿನಲ್ ಗೇಟ್ ಹೊರಗೆ ಪಾಪರಾಜಿ ವೀಡಿಯೋದಲ್ಲಿ ಆರ್ಯನ್ ತನ್ನ ಕಾರಿನಿಂದ ಹೊರ ಬರುವುದು ಸೆರೆಯಾಗಿತ್ತು. ಕ್ಯಾಮೆರಾಗಳಿಗೆ ಪೋಸ್ ನೀಡದೆ, ಅವರು ನೇರವಾಗಿ ಗೇಟ್ ನ ಕಡೆಗೆ ನಡೆದರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರನ್ನು ನಮಸ್ಕರಿಸಿ ಬರಮಾಡಿಕೊಂಡರು.
ಆರ್ಯನ್ ಇತ್ತೀಚೆಗೆ ಬಾಲಿವುಡ್ ನಲ್ಲಿ ಚಲನಚಿತ್ರ ನಿರ್ಮಾಪಕರಾಗಿ ತಮ್ಮ ಚೊಚ್ಚಲ ಪ್ರವೇಶವನ್ನು ಘೋಷಿಸಿದರು. ಮುಂದಿನ ವರ್ಷ ಜೋಯಾ ಅಖ್ತರ್ ಅವರ ‘ದಿ ಆರ್ಚೀಸ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಲಿರುವ ಸುಹಾನಾ ಖಾನ್ ಅವರಂತೆಯೇ, ಆರ್ಯನ್ ತಮ್ಮ ಮೊದಲ ಚಿತ್ರ ಸ್ಕ್ರಿಪ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಶಾರುಖ್ ಮತ್ತು ಗೌರಿ ಅವರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ