HOME » NEWS » Entertainment » ARYAN KHAN IS NOT ALLOWED TO BE SHIRTLESS AT HOME SHAH RUKH KHAN REVEALED IT IN AN INTERVIEW STG AE

ಮನೆಯಲ್ಲಿ ಶರ್ಟ್‌ಲೆಸ್‌ ಆಗಿರಲು ಮಗ ಆರ್ಯನ್​ಗೆ ಅನುಮತಿ ಇಲ್ಲ ಎಂದ ಶಾರೂಖ್ ಖಾನ್

ಶಾರುಖ್​ ಖಾನ್​ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಲವರ್​ ಬಾಯ್​. ಹೆಣ್ಣು ಮಕ್ಕಳ ಬಗ್ಗೆ ಅವರಿಗಿರುವ ಗೌರವ ಹಾಗೂ ಅವರನ್ನು ನಡೆಸಿಕೊಳ್ಳುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

news18-kannada
Updated:May 14, 2021, 12:03 PM IST
ಮನೆಯಲ್ಲಿ ಶರ್ಟ್‌ಲೆಸ್‌ ಆಗಿರಲು ಮಗ ಆರ್ಯನ್​ಗೆ ಅನುಮತಿ ಇಲ್ಲ ಎಂದ ಶಾರೂಖ್ ಖಾನ್
ಶಾರುಖ್​ ಖಾನ್​- ಆರ್ಯನ್​ ಖಾನ್​
  • Share this:
ಕಿಂಗ್​ ಆಫ್​ ರೊಮ್ಯಾನ್ಸ್​.... ಶಾರೂಖ್ ಖಾನ್ ಇರದಿದ್ರೆ ಇಂದು ಎಷ್ಟೋ ಪ್ರೇಮಿಗಳು ಪ್ರೀತಿಯನ್ನು ಅಷ್ಟು ಆಳವಾಗಿ ನೋಡಲು ಸಾಧ್ಯವಿರುತ್ತಿರಲಿಲ್ಲವೆನೋ..! 90 ರ ದಶಕದ ಬಹುತೇಕರಿಗೆ ಶಾರೂಖ್ ಪ್ರೇಮದ ದೇವರಂತೆ ಕಂಡಿದ್ದು ಸುಳ್ಳಲ್ಲ. ಆಗಲೂ ಶಾರೂಖ್ ಖಾನ್‌ಗೆ ಮಹಿಳಾ ಅಭಿಮಾನಿಗಳು ದೊಡ್ಡದಾಗಿಯೇ ಇತ್ತು. ಅದು ಇಂದಿಗೂ ಇನ್ನೂ ಮುಂದುವರೆಯುತ್ತಲೇ ಸಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ವಿಷಯಕ್ಕೆ ಬರುವುದಾದರೆ ಬಾಲಿವುಡ್ ಬಾದ್ ಷಾ ಒಂದು ಹೆಜ್ಜೆ ಮುಂದೆಯೇ ನಿಲ್ಲುತ್ತಾರೆ. ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರು. ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳಬೇಕು ಎನ್ನುವ ಮಾತುಗಳಿಂದ ಇಂದಿನ ಯುವ ಸಮುದಾಯವನ್ನೂ ಪ್ರಭಾವಿಸುತ್ತಿರುವ ಸೂಪರ್ ಸ್ಟಾರ್ ಕಿಂಗ್ ಖಾನ್. ಒಮ್ಮೆ ಸಂದರ್ಶನವೊಂದರಲ್ಲಿ, ಶಾರುಖ್ ಅವರು ತಮ್ಮ ಮಗ ಆರ್ಯನ್ ಅವರನ್ನು ಯಾವಾಗಲೂ ಮನೆಯಲ್ಲಿಯೂ ಶರ್ಟ್ ಹಾಕುವಂತೆ ಏಕೆ ಹೇಳುತ್ತೇನೆ ಎನ್ನುವ ಅಂಶವನ್ನು ಬಹಿರಂಗ ಪಡಿಸಿದ್ದರು.

ಒಬ್ಬ ಪುರುಷನು ತನ್ನ ಕುಟುಂಬದೊಳಗಿರುವ ಹೆಣ್ಣು ಮಕ್ಕಳ ನಡುವೆ ಮತ್ತು ಸ್ನೇಹಿತರ ಮುಂದೆ ಹೇಗಿರಬೇಕು ಎನ್ನುವುದರ ಕುರಿತು ಮಾತನಾಡುವಾಗ ತಾವು ತಮ್ಮ ಮಗ ಆರ್ಯನ್‌ಗೆ ಈ ಸಲಹೆ ನೀಡಿರುವುದಾಗಿ ತಿಳಿಸಿದ್ದರು. 2017ರಲ್ಲಿ ನೀಡಿರುವ ಸಂದರ್ಶನದಲ್ಲಿ, ಶಾರೂಖ್ ತಮ್ಮ ಮನೆಯಲ್ಲಿ ಈ ನಿಯಮವು ಸಮಾನತೆಗೆ ಹೆಚ್ಚು ಆದ್ಯತೆ ನೀಡುತ್ತದೆ ಎನ್ನುವ ಅಂಶವನ್ನು ವಿವರಿಸಿದ್ದರು.

Bollywood Famous Actor Shahrukh Khan 3 time married Gauri khan
ಶಾರುಖ್ ಖಾನ್ ಮತ್ತು ಗೌರಿ ಖಾನ್


'ಅಲ್ಲದೇ ಒಬ್ಬ ಮಹಿಳೆಗೆ ಮಾಡಲಾಗದ ಯಾವುದನ್ನೂ ಪುರುಷ ಮಾಡಬಾರದು ಎಂದು ನಾನು ನಂಬುತ್ತೇನೆ' ಎಂದಿದ್ದರು. ಆ ಮೂಲಕ ಸಮಾನತೆಯ ಪ್ರಾಮುಖ್ಯತೆಯನ್ನು ತಮ್ಮ ನಂಬಿಕೆಯನ್ನು ಬಲವಾಗಿ ಪ್ರಸ್ತುತ ಪಡಿಸಿದ್ದರು. ಅಲ್ಲದೇ ತಮ್ಮ ಮನೆಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮನಾದ ಸವಲತ್ತುಗಳನ್ನು ನೀಡಲಾಗಿದ್ದು, ಹೆಚ್ಚಿನ ಸವಲತ್ತನ್ನು ಗಂಡಿಗೆ ಮಾತ್ರವೇ ನೀಡಿಲ್ಲ ಎನ್ನುವ ಮೂಲಕ ನಿಜವಾದ ಪುರುಷ ಹೇಗಿರಬೇಕು ಎಂಬುದರ ಬಗ್ಗೆ ವ್ಯಾಖ್ಯಾನಿಸಿದ್ದರು.

ಇದನ್ನೂ ಓದಿ: Upendra: ಸಂಕಷ್ಟದಲ್ಲಿರುವವರಿಗೆ ನೆರವು: ಉಪೇಂದ್ರ ಜೊತೆ ಕೈ ಜೋಡಿಸಿದ ಬಾಲನಟ..!

ಅಲ್ಲದೇ ಸಮಾನತೆ ಎನ್ನುವುದು ನೈತಿಕ, ಸಾಮಾಜಿಕ ನಿಯಮಗಳ ಅನುಸರಣೆಯಲ್ಲಿರಬೇಕು ಅದನ್ನು ಮರೆಯುವಂತಿರಬಾರದು ಎನ್ನುವುದನ್ನು ಪರಿಣಾಮಕಾರಿ ಉದಾಹರಣೆಯೊಂದಿಗೆ ಸಮರ್ಥಿಸಿಕೊಂಡರು. ಪುರುಷರು ಮಹಿಳೆಯರನ್ನು ಗೌರವದಿಂದಲೇ ಕರೆಯಬೇಕು. ಮಹಿಳೆಯರನ್ನು ನೀನು ಎಂದು ಏಕ ವಚನದಲ್ಲಿ  ಸಂಬೋಧಿಸುವುದು ನಿಜಕ್ಕೂ ಹೆಣ್ಣನ್ನು ನಡೆಸಿಕೊಳ್ಳುವ ವಿಧಾನವಲ್ಲ, ಆಕೆಯನ್ನು ಗೌರವದಿಂದ ಕರೆಯಿರಿ. ಕರೆದು ನೋಡಿ ನಿಮ್ಮ ಬದುಕಿನಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಎಂದು ಗಮನಿಸಿ ಎಂದಿದ್ದಾರೆ.

ಇನ್ನು ಶಾರೂಖ್ ಅವರಿಗೆ ಮೂವರು ಮಕ್ಕಳಿದ್ದಾರೆ. ಅಬ್ರಂ ಖಾನ್, ಸುಹಾನಾ ಖಾನ್ ಮತ್ತು ಆರ್ಯನ್. ಶಾರೂಖ್ ಹಾಗೂ ಗೌರಿ ಅವರದ್ದು ಪ್ರೇಮ ವಿವಾಹ. ಇವರ ವಿವಾಹ 1991ರಲ್ಲಿ ಆಗಿದ್ದು, ಗೌರಿ ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಕಿ.ಇದನ್ನೂ ಓದಿ: Nidhi Subbaiah: ಫೇಸ್​ಬುಕ್​ ಲೈವ್​ನಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ನಿಧಿ ಸುಬ್ಬಯ್ಯ

ಶಾರೂಖ್ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಕ್ ಮಿ ಎನಿಥಿಂಗ್ ಎನ್ನುವ ಸೆಷನ್ ಅನ್ನು ಟ್ವಿಟ್ಟರ್​ನಲ್ಲಿ ಆಯೋಜಿಸಿದ್ದರು. ಅದರಲ್ಲಿ ಅಭಿಮಾನಿಯೊಬ್ಬ 'ನಾನು ಒಂದು ಹುಡುಗಿಯನ್ನು ಪಟಾಯಿಸಬೇಕು ಎಂದಿರುವೆ ಇದಕ್ಕೆ ನಿಮ್ಮ ಸಲಹೆ ಏನು?' ಎಂದಿದ್ದರು.

'ಪಟಾಯಿಸಬೇಕು' ಎನ್ನುವ ಪದವನ್ನು ಕೇಳಿ ಶಾರೂಖ್ ಬೇಸರ ವ್ಯಕ್ತಪಡಿಸಿದ್ದರು. 'ನೀವು ಹೆಣ್ಣು ಮಕ್ಕಳನ್ನು ಪಟಾಯಿಸಬೇಕು ಎಂದು ಕರೆಯಬೇಡಿ. ಆಕೆಗೆ ಗೌರವನ್ನು ತೋರಿಸಿ ಸಾಕು. ಅವರೇ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ' ಎಂದಿದ್ದರು.ಶಾರೂಖ್ ಅವರ ಒಳ ಉಡುಪಿನ ಬಣ್ಣದ ಬಗ್ಗೆ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ 'ಉತ್ತಮ ಅಭಿರುಚಿಯ ಮತ್ತು ಪಾಂಡಿತ್ಯ ಪೂರ್ಣ ಪ್ರಶ್ನೆಗಳಿಗೆ ಈ ಸೆಷನ್ ಮಾಡಲಾಗಿದೆ' ಎಂದು ಉತ್ತರಿಸುವ ಮೂಲಕ ಅಭಿಮಾನಿಗಳಲ್ಲೂ ಹೊಸ ರೀತಿಯ ಆಲೋಚನೆಯನ್ನು ಹುಟ್ಟು ಹಾಕಿದ್ದರು.


ಸದ್ಯ ಪಠಾನ್ ಸಿನಿಮಾದಲ್ಲಿ ಬ್ಯುಸಿ ಇರುವ ಕಿಂಗ್ ಖಾನ್ ಆ್ಯಕ್ಷನ್ ಡ್ರಾಮಾ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿದ್ಧಾರ್ಥ್ ಆನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
Published by: Anitha E
First published: May 14, 2021, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories