Aryan Khan: ನನ್ನ ಮರ್ಯಾದೆ ಹರಾಜು ಹಾಕಿದ್ರಿ, NCB ಅಧಿಕಾರಿಗಳ ಮುಂದೆ ಆರ್ಯನ್ ಹೇಳಿದ್ದೇನು?

Aryan Khan Case: ಇನ್ನು ಆರ್ಯನ್ ಖಾನ್ ಈ ಅಧಿಕಾರಿಯ ಬಳಿ, ನೀವು ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಎನ್ನುವ ರೀತಿ ಮಾದ್ಯಮಗಳಲ್ಲಿ ಬಿಂಬಿಸಿದ್ದೀರಿ. ಅಲ್ಲದೇ, ನಾನು ಡ್ರಗ್ ಕಳ್ಳಸಾಗಣೆಗೆ ಬಂಡವಾಳ ಹಾಕಿದ್ದೀನಿ ಎಂದೆಲ್ಲ ಸುದ್ದಿ ಹರಡಿದ್ದೀರಿ. ಈ ಆರೋಪಗಳು ನಿಜಕ್ಕೂ ಸರಿ ಇದಿಯಾ? ಈ ರೀತಿ ಮಾಡಿದ್ದು ತಪ್ಪು ಅಲ್ವಾ? ಎಂದು ಪ್ರಶ್ನಿಸಿದ್ದರಂತೆ.

ಆರ್ಯನ್ ಖಾನ್

ಆರ್ಯನ್ ಖಾನ್

  • Share this:
ಹಡಗಿನಲ್ಲಿ ಡ್ರಗ್ಸ್ ಪಾರ್ಟಿ (Drugs Party) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೀನ್ ಚಿಟ್ ಪಡೆದಿರುವ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಬಗ್ಗೆ ಇದೀಗ ಹೊಸ ಮಾಹಿತಿಗಳಿ ರಿವೀಲ್ ಆಗುತ್ತಿದ್ದು, ಅವರ ಜೊತೆ ನಡೆಸಿದ ವಿಚಾರಣೆ ಹಾಗೂ ಮಾತುಕತೆಯ ಬಗ್ಗೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಉಪ ಮಹಾ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್  ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ವಿಶೇಷ ತನಿಖಾ ತಂಡದ(SIT) ನೇತೃತ್ವ ವಹಿಸಿದ್ದ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದ್ದು, ಆ ಸಮಯದಲ್ಲಿ ಆರ್ಯನ್​ ತನಗೆ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತಿತ್ತು. ಆರ್ಯನ್ ಖಾನ್ ನನ್ನು ನಂಬಿಸುವುದು ಆ ಕ್ಷಣದಲ್ಲಿ ಕಷ್ಟವಾಗಿತ್ತು ಎಂದು ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಪ್ರಶ್ನೆಗಳ ಸುರಿ ಮಳೆ ಸುರಿಸಿದ್ದ ಆರ್ಯನ್ 

ಇನ್ನು ಆರ್ಯನ್ ಖಾನ್ ಈ ಅಧಿಕಾರಿಯ ಬಳಿ, ನೀವು ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಎನ್ನುವ ರೀತಿ ಮಾದ್ಯಮಗಳಲ್ಲಿ ಬಿಂಬಿಸಿದ್ದೀರಿ. ಅಲ್ಲದೇ, ನಾನು ಡ್ರಗ್ ಕಳ್ಳಸಾಗಣೆಗೆ ಬಂಡವಾಳ ಹಾಕಿದ್ದೀನಿ ಎಂದೆಲ್ಲ ಸುದ್ದಿ ಹರಡಿದ್ದೀರಿ. ಈ ಆರೋಪಗಳು ನಿಜಕ್ಕೂ ಸರಿ ಇದಿಯಾ? ಈ ರೀತಿ ಮಾಡಿದ್ದು ತಪ್ಪು ಅಲ್ವಾ? ಎಂದು ಪ್ರಶ್ನಿಸಿದ್ದರಂತೆ. ಅಲ್ಲದೇ, ನನ್ನ ಹತ್ರ ನಿಮಗೆ ಡ್ರಗ್ಸ್ ಸಿಗಲಿಲ್ಲ. ಆದರೂ ನನ್ನನ್ನು ಬಂಧಿಸಲಾಗಿದೆ. ಈ ರೀತಿ ಮಾಡಿ ನೀವು ದೊಡ್ಡ ತಪ್ಪು ಮಾಡಿದ್ದೀರಿ, ನನ್ನ ಪ್ರತಿಷ್ಠೆಯನ್ನು ಹಾಳು ಮಾಡಿದ್ದೀರಿ ಎಂದು ನೋವಿನಿಂದ ಹೇಳಿಕೊಂಡಿದ್ದಾರಂತೆ.

ಇಷ್ಟಕ್ಕೆ ಸುಮ್ಮನಾಗದ ಆರ್ಯನ್, ನಾನೇಕೆ ಜೈಲಿನಲ್ಲಿ ಇರಬೇಕು, ನನ್ನ ತಪ್ಪು ಏನಿದೆ? ನಿಜವಾಗಿಯೂ ಜೈಲಿನಲ್ಲಿರಲು ನಾನು ಅರ್ಹ ವ್ಯಕ್ತಿಯಾ?, ನಾನೇನು ತಪ್ಪು ಮಾಡಿದ್ದೇನೆ ಎಂದು ಆರ್ಯನ್ ಖಾನ್​ ಬೇಸರ ವ್ಯಕ್ತಪಡಿಸಿದ್ದರು ಎಂದು​ ಸಂಜಯ್ ಕುಮಾರ್ ಸಿಂಗ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಫೋಟೋ ರಿವೀಲ್ ಮಾಡಿದ ನಟಿ ಪ್ರಣಿತಾ, ಕ್ಯೂಟ್​ ವಿಡಿಯೋ ಮಿಸ್​ ಮಾಡ್ದೇ ನೋಡಿ

ಏನಿದು ಪ್ರಕರಣ? 

ಕಳೆದ ವರ್ಷ ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಮಾಡಿತ್ತು. ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕ್ರೂಸ್ ಹಡಗಿನ ಕಾರ್ಡೆಲಿಯಾ ಮೇಲೆ ದಾಳಿ ನಡೆಸಲಾಗಿತ್ತು. ಡ್ರಗ್ಸ್ ಪಾರ್ಟಿಯ ಖಚಿತ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ಅಧಿಕಾರಿಗಳು ಮತ್ತು ಕೆಲವು ಸಾಕ್ಷಿಗಳ ತಂಡ ರೇಡ್ ಮಾಡಿತ್ತು.

ಆ ವೇಳೆ ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು ₹ 1.33 ಲಕ್ಷ ನಗದನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು.

ಪ್ರಕರಣದ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಜೈಲಿನಲ್ಲಿದ್ದ ಶಾರುಖ್ ಖಾನ್ ಪುತ್ರನಿಗೆ 2021ರ ಅಕ್ಟೋಬರ್ 28 ರಂದು ಜಾಮೀನು ನೀಡಲಾಗಿತ್ತು. ಇದೀಗ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎನ್​ಸಿಬಿಯಿಂದ ಆರ್ಯನ್​ ಖಾನ್​ಗೆ ಕ್ಲೀನ್​ ಚಿಟ್​, ಸಾಕ್ಷ್ಯಾಧಾರ ಕೊರತೆ 6 ಜನರು ನಿರಾಳ

ಕಳೆದ ತಿಂಗಳು ಡ್ರಗ್ಸ್​ ಪ್ರಕರಣದಲ್ಲಿ 14 ಮಂದಿ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರು ಮಂದಿ ವಿರುದ್ಧ  ಯಾವುದೇ ಆರೋಪ ಸಾಬೀತಾಗಿಲ್ಲ. ಡಾಕ್ಯುಮೆಂಟ್ ಸಲ್ಲಿಸಲು ಕೋರ್ಟ್​ ನೀಡಿದ್ದ  60 ದಿನಗಳ ವಿಸ್ತರಣಾ ಅವಧಿಯು ಮೇ 29 ರಂದು ಮುಕ್ತಾಯಗೊಳ್ಳುತ್ತಿದ್ದಂತೆ ಎನ್‌ಸಿಬಿ ತನ್ನ 'ಅಂತಿಮ' ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
Published by:Sandhya M
First published: