'ರಾಜಾ ರಾಣಿ' ಚಿತ್ರ ಖ್ಯಾತಿಯ ನಟ ಆರ್ಯ ಹಾಗೂ 'ಯುವರತ್ನ' ಸಿನಿಮಾ ನಾಯಕಿ ನಟಿ ಸಯೇಶಾ ಸೆಹಗಲ್ ಅವರು ವಿವಾಹವು ಹೈದರಾಬಾದ್ನಲ್ಲಿ ಇಂದು ನಡೆಯಲಿದೆ. ಶನಿವಾರ ಖಾಸಗಿ ಹೊಟೇಲ್ವೊಂದರಲ್ಲಿ ಸಂಗೀತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಾರೀ ವಿಜೃಂಭಣೆಯಿಂದ ಕೂಡಿದ್ದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ತಾರೆಯರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಕಾಲಿವುಡ್ನಲ್ಲಿ 'ನಾನ್ ಕಡವುಲ್' ಸಿನಿಮಾ ಮೂಲಕ ಮುನ್ನಲೆಗೆ ಬಂದ ನಟ ಆರ್ಯ ಹಾಗೂ ಸಯೇಶಾ ನಡುವೆ ಕೆಲ ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ಸುದ್ದಿಯನ್ನು ಪ್ರೇಮಿಗಳ ದಿನದಂದು ಬಹಿರಂಗಪಡಿಸಿದ್ದ ಜೋಡಿಯು ಶೀಘ್ರದಲ್ಲೇ ವಿವಾಹವಾಗುವುದಾಗಿ ತಿಳಿಸಿದ್ದರು. ಅದರಂತೆ ಇಂದು ಇಬ್ಬರು ಹಸೆಮಣೆ ಹೇರಲಿದ್ದು, ಕುಟುಂಬ ಸದಸ್ಯರು ಸೇರಿದಂತೆ ಚಿತ್ರರಂಗದ ಹಲವರು ಯುವಜೋಡಿಗಳಿಗೆ ಆಶಿರ್ವದಿಸಲಿದ್ದಾರೆ.
ನಿನ್ನೆ ನಡೆದ ಸಂಗೀತ್ ಸಮಾರಂಭದಲ್ಲಿ ಟಾಲಿವುಡ್ ನಟನಾದ ಅಲ್ಲು ಅರ್ಜುನ್, ಬಾಲಿವುಡ್ ನಟರುಗಳಾದ ಸಂಜಯ್ ದತ್, ಸೂರಜ್ ಪಾಂಚೋಲಿ, ಜರೀನಾ ವಹಾಬ್ ಒಳಗೊಂಡಂತೆ ಇನ್ನು ಹಲವರು ಪಾಲ್ಗೊಂಡಿದ್ದರು.
ಮುಂಬೈ ಮೂಲದ ಸಯೇಶಾ ತೆಲುಗಿನ 'ಅಖಿಲ್' ಚಿತ್ರದ ಮೂಲಕ ನಾಯಕಿಯಾಗಿ ನಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳಿನಲ್ಲಿ ಆರ್ಯ ಜತೆಯಾಗಿ 'ಗಜನಿಕಾಂತ್ 'ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಬಳಿಕ ಇಬ್ಬರ ನಡುವೆ ಪ್ರೀತಿ ಕವಲೊಡೆದಿದೆ. ಸದ್ಯ ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ಚಿತ್ರದಲ್ಲಿ ಸಯೇಶಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಕನ್ನಡದಲ್ಲಿ 'ರಾಜರಥ' ಸಿನಿಮಾದ ವಿಶೇಷ ಪಾತ್ರದಲ್ಲೂ ಆರ್ಯ ಅಭಿನಯಿಸಿದ್ದರು.
Forever and Ever😍😍🤗🤗😘 @sayyeshaa pic.twitter.com/gtLu8ilP2c
— Arya (@arya_offl) March 10, 2019
This pic is the closest to my heart. Unbelievable moment to hold my best friend’s @arya_offl wedding invitation .. wishing him and @sayyeshaa all the best and lots of love .. God bless ! pic.twitter.com/6rDhNwOY1V
— Vishal (@VishalKOfficial) February 27, 2019
View this post on Instagram
Stylishstar #Alluarjun Attends #Arya_offl #sayyeshaa's Sangeeth ceremony in Hyderabad yesterday.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ