2021 ರ ಹೆಣ್ಣು ಮಕ್ಕಳ (Daughters Day)ದಿನದಂದು, ನಟ ಆರ್ಯ (Arya)ತನ್ನ ಕುಟುಂಬದ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದು, ಮತ್ತು 2 ತಿಂಗಳ ಅಪ್ಪ ಎಂದು ಬರೆದಿದ್ದಾರೆ. ಅವರು ತಮ್ಮ ಹೆಣ್ಣು ಮಗುವಿನ ಹೆಸರನ್ನು #ಅರಿಯಾನ(Ariana) ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಬಹಿರಂಗಪಡಿಸಿದ್ದಾರೆ. ಇದು ಗ್ರೀಕ್ ಮೂಲದ ಹೆಸರು, ಇದರ ಅರ್ಥ 'ಅತ್ಯಂತ ಪವಿತ್ರ ಎಂದು. ಆರ್ಯ ಮತ್ತು ಅವರ ಪತ್ನಿ ಸಯೇಶಾ(Sayyesha) ಜುಲೈ 24, 2021 ರಂದು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ನಟ ವಿಶಾಲ್ ಅವರು ಆರ್ಯ ಮತ್ತು ಸಯೇಶಾ ಅವರಿಗೆ ಹೆಣ್ಣು ಮಗುವಾಗಿರುವ ಸುದ್ದಿಯನ್ನು ಮೊದಲು ದೃಢಪಡಿಸಿದರು.
ಈ ಸುದ್ದಿಯನ್ನು ಪ್ರಕಟಿಸಲು ಸಂತೋಷವಾಗಿದೆ. ಚಿಕ್ಕಪ್ಪನಾಗುವುದು ತುಂಬಾ ಸಂತೋಷವಾಗಿದೆ. ನನ್ನ ಸಹೋದರ ಜಮ್ಮಿ (ಆರ್ಯ) ಮತ್ತು ಸಯೇಶಾಗೆ ಹೆಣ್ಣು ಮಗುವಾಗಿದೆ ಎಂದು ವಿಶಾಲ್ ಟ್ವೀಟ್ ಮಾಡಿದ್ದರು. ಈಗ ಚಿತ್ರೀಕರಣದ ಮಧ್ಯದಲ್ಲಿ ನೋಡಲು ಹೋಗಲಾಗುತ್ತಿಲ್ಲ, ಯಾವಾಗಲೂ ಅವರಿಗೆ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದರು.
ಸಯ್ಯೇಶಾಳ ತಾಯಿ ಶಾಹೀನ್ ತನ್ನ ಮೊಮ್ಮಗಳ ಬಗ್ಗೆ ಮುದ್ದಾದ ಮಾತುಗಳನ್ನು ಬರೆದಿದುಕೊಂಡಿದ್ದಾರೆ. ಅವರು ತಮ್ಮ ಪ್ರೀತಿಯ ಮೊಮ್ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. "ನನ್ನ ಮೊಮ್ಮಗಳಿಗೆ ಎರಡು ತಿಂಗಳ ವಯಸ್ಸು ಮತ್ತು ನೀವು ನನ್ನ ಸ್ನೇಹಿತರು ಅವಳ ಹೆಸರನ್ನು ತಿಳಿದಿರಬೇಕು. ಆಕೆಯ ಹೆಸರು ಅರಿಯಾನಾ. ಇದರ ಅರ್ಥ ಶುದ್ಧವಾಗಿದೆ. ನಾವು ಅದನ್ನು ಇಷ್ಟಪಟ್ಟಿದ್ದೇವೆ. ಅವಳ ತಂದೆ @aryaoffl ಈ ಹೆಸರು ಆತನ ಹೆಸರಿಗೆ ಹತ್ತಿರವಾಗಿರುತ್ತದೆ! @Sayyeshaa ಸಹ ಈ ಹೆಸರನ್ನು ಇಷ್ಟಪಟ್ಟಿದ್ದು, ನಮಗೂ ಕೂಡ ಇಷ್ಟವಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ಮೊಮ್ಮಗಳು ಮುದ್ದಾಗಿದ್ದಾಳೆ ಎಂದಿದ್ದಾರೆ.
View this post on Instagram
ಇದನ್ನೂ ಓದಿ: ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ Rashmika Mandanna: ಆರಂಭವಾಗಿದೆ ಪರ-ವಿರೋಧದ ಚರ್ಚೆ
ಹೆಣ್ಣುಮಕ್ಕಳ ದಿನವನ್ನು ಆಚರಿಸಲು, ಸಯೀಶಾಳ ತಾಯಿ ಶಾಹೀನ್ ಮಗಳ ಬಗ್ಗೆ ಸಹ ಬರೆದುಕೊಂಡಿದ್ದಾರೆ. "ನನ್ನ ಪ್ರೀತಿಯ ಮಗಳಿಗೆ ಮಗಳ ದಿನದ ಶುಭಾಶಯಗಳು. ನೀನು ಬೆಸ್ಟ್ ,ನಿನ್ನ ತಾಯಿಯಾಗಲು ನಾನು ಎಷ್ಟು ಪುಣ್ಯ ಮಾಡಿದ್ದೆ ಎಂದು ಹೇಳಲು ಇದು ಒಳ್ಳೆಯ ದಿನ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಯೇಶಾ, ನೀವು ಜಗತ್ತಿನ ಅತ್ಯುತ್ತಮ ತಾಯಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಲವ್ ಯೂ ಎಂದು ಬರೆದಿದ್ದಾರೆ.
You’re the bestest mama in the world! I love youuuu ❤️❤️😘😘😘 https://t.co/YN29RBgjfP
— Sayyeshaa (@sayyeshaa) September 26, 2021
ತಮ್ಮ ತಮಿಳು ರೊಮ್ಯಾಂಟಿಕ್ ಕಾಮಿಡಿ ಗಜಿನಿಕಾಂತ್ ಚಿತ್ರೀಕರಣದ ವೇಳೆ ಆರ್ಯ ಮತ್ತು ಸಾಯೇಶಾ ಪರಸ್ಪರ ಭೇಟಿಯಾಗಿ ಪ್ರೀತಿಸುತ್ತಿದ್ದರು. 2019 ರಲ್ಲಿ ಹೈದರಾಬಾದ್ನಲ್ಲಿ ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಾಲಿವುಡ್ ಜೋಡಿ ವಿವಾಹವಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ