• Home
  • »
  • News
  • »
  • entertainment
  • »
  • Puneeth Rajkumar: ಪುನೀತ್ ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್! ಅಪ್ಪು ಸ್ಮರಿಸಿಕೊಂಡ ಅರವಿಂದ್ ಕೇಜ್ರಿವಾಲ್

Puneeth Rajkumar: ಪುನೀತ್ ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್! ಅಪ್ಪು ಸ್ಮರಿಸಿಕೊಂಡ ಅರವಿಂದ್ ಕೇಜ್ರಿವಾಲ್

ಪುನೀತ್ ಸ್ಮರಿಸಿಕೊಂಡ ಅರವಿಂದ್ ಕೇಜ್ರಿವಾಲ್

ಪುನೀತ್ ಸ್ಮರಿಸಿಕೊಂಡ ಅರವಿಂದ್ ಕೇಜ್ರಿವಾಲ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮೊದಲೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಿತು. ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ದೇಶದ ಅನೇಕ ಗಣ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು.

  • Share this:

ನವದೆಹಲಿ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷವಾಗಿದೆ. ಬರೀ ಅವರ ಸಮಾಧಿ ಬಳಿ ಅಲ್ಲದೇ ರಾಜ್ಯಾದ್ಯಂತ ಅವರ ಒಂದನೇ ವರ್ಷದ ಪುಣ್ಯ ತಿಥಿ (Death Anniversary) ನಡೆದಿದೆ. ಈ ವೇಳೆ ಬರೀ ಚಿತ್ರರಂಗವಷ್ಟೇ (Film Industry) ಅಲ್ಲದೇ, ವಿವಿಧ ಕ್ಷೇತ್ರದ ಗಣ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ (Delhi CM) ಅರವಿಂದ್ ಕೇಜ್ರಿವಾಲ್‌ (Arvind Kejrival) ಕೂಡ ಇದೇ ಸಂದರ್ಭದಲ್ಲಿ ‘ದೊಡ್ಮನೆ ರಾಜಕುಮಾರ’ನಿಗೆ ಗೌರವ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಅವರು, ‘’ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ” ಅಂತ ಅಪ್ಪು (Appu) ಗುಣಗಾನ ಮಾಡಿದ್ದಾರೆ.


ಪುನೀತ್‌ ರಾಜ್‌ಕುಮಾರ್ ಸ್ಮರಿಸಿಕೊಂಡ ದೆಹಲಿ ಸಿಎಂ


ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮೊದಲೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಿತು. ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ದೇಶದ ಅನೇಕ ಗಣ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ‘’ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ” ಅಂತ ಸ್ಮರಿಸಿಕೊಂಡಿದ್ದಾರೆ.



“ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ”


ಹೌದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ” ಅಂತ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. ಡಾ ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿಯಂದು ಅವರನ್ನು ನಾನು ಗಾಢವಾಗಿ ನೆನಪಿಸಿಕೊಳ್ಳುತ್ತೇನೆ. ಅವರ ಚಲನಚಿತ್ರಗಳು, ಹಾಡುಗಳು, ದಯೆ ಮತ್ತು ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದಿಗೂ ತೊರೆದಿಲ್ಲ ಎಂದು ನಮಗೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್ ಅಂತ ಟ್ವೀಟ್ ಮೂಲಕ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ.




ಇದನ್ನೂ ಓದಿ: Ashwini Punit Rajkumar: ನೆನಪಿನ ಸಾಗರದಲ್ಲಿ, ಎಂದು ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್!


ವಿದ್ಯಾರ್ಥಿಗಳಿಗೆ ಪಾಠವಾಗುತ್ತಾ ಅಪ್ಪು ಜೀವನ?


ಇನ್ನು ಪುನೀತ್ ರಾಜ್‌ಕುಮಾರ್ ಅವರ ಜೀವನ, ಸಾಧನೆ, ಸಮಾಜಸೇವೆಯನ್ನು ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಪುನೀತ್ ರಾಜ್‌ಕುಮಾರ್ ಅವರ ಬದುಕು ಮಾದರಿ. ಅವರ ಚಿತ್ರಗಳು ಕೂಡ ಸಮಾಜಕ್ಕೆ ಅದ್ಭುತ ಸಂದೇಶವನ್ನು ನೀಡಿವೆ. ಹಾಗಾಗಿ ಮಕ್ಕಳಿಗೆ ಅವರ ಬದುಕನ್ನು ಓದಿಸಬೇಕು. ಈ ಕುರಿತು ಕೂಡಲೇ ಸರಕಾರ ಗಮನ ಹರಿಸಬೇಕು ಎಂದು ಸಾಕಷ್ಟು ಅಭಿಮಾನಿಗಳು ಸರಕಾರದ ಗಮನ ಸೆಳೆದಿದ್ದರು.




ನವೆಂಬರ್ 1ರಂದು ಕರ್ನಾಟಕ ರತ್ನ ಪ್ರದಾನ


ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್‍ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಆ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್‍ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವಿಧಾನಸೌಧದಲ್ಲಿ ಈ ಅದ್ಧೂರಿ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಸಲು ಸಕಲ ಸಿದ್ಧತೆ ನಡೆದಿದೆ. ತೆಲುಗು ನಟ ಜೂನಿಯರ್ ಎನ್‍ಟಿಆರ್ ಗೆ ಕರ್ನಾಟಕ ಸರ್ಕಾರ ಆಹ್ವಾನ ನೀಡಿದೆ.


ಇದನ್ನೂ ಓದಿ: Punit Rajkumar: 'ನಾನು ಹುಷಾರಾಗಿದ್ದೀನಿ, ಡೋಂಟ್ ವರಿ' ಎಲ್ಲೆಡೆ ಪೋಸ್ಟ್ ವೈರಲ್, ಅಪ್ಪು ಮತ್ತೆ ಹುಟ್ಟಿ ಬನ್ನಿ!


ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್


ಪುನೀತ್ ಪತ್ನಿ ಅಶ್ವಿನಿ ಅವರು ಭಾವನಾತ್ಮಕ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೆನಪಿನ ಸಾಗರದಲ್ಲಿ ಎಂಬ ಸಾಲುಗಳೊಂದಿಗೆ ಪತ್ರ ಆರಂಭಿಸಿದ್ದಾರೆ. 'ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳಲ್ಲಿ, ನಾವು ಮಾಡುವ ಸತ್ಕಾರ್ಯಗಳಲ್ಲಿ, ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗು ಕೋಟ್ಯಾಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ ಅಂತ ಪತ್ರದಲ್ಲಿ ಹೇಳಿದ್ದಾರೆ.

Published by:Annappa Achari
First published: