• Home
  • »
  • News
  • »
  • entertainment
  • »
  • ದರ್ಶನ್ ಸರ್​ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ ಎಂದ ಅರುಣಾ ಕುಮಾರಿ: ವಂಚನೆ ಯತ್ನ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್​

ದರ್ಶನ್ ಸರ್​ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ ಎಂದ ಅರುಣಾ ಕುಮಾರಿ: ವಂಚನೆ ಯತ್ನ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್​

ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್​

ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್​

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬಂದ ಅರುಣಾ ಕುಮಾರಿ, ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತಸೆ. ಮರ್ಯಾದೆ ಪ್ರಶ್ನೆ ಹಾಗಾಗಿ ಮನೆ ಬಿಟ್ಟಿದ್ದೆ. ಎಲ್ಲವನ್ನೂ ಕಾನೂನಿಗೆ ಕೊಡ್ತೀನಿ. ನನ್ನ ತಾಯಿ, ತಂದೆ, ಮಗನಿಗೆ ತೊಂದರೆ ಆಗ್ತಿದೆ. ನಾನು ಸಿಂಗಲ್ ಪೇರೆಂಟ್. ನನಗೆ ಶಕ್ತಿ ಇಲ್ಲ. ಹಾಗಾಗಿ ಸುದ್ದಿಗೋಷ್ಠಿ ಮಾಡಿಲ್ಲ ಎಂದಿದ್ದಾರೆ. 

ಮುಂದೆ ಓದಿ ...
  • Share this:

ದರ್ಶನ್ ಅವರ ಹೆಸರು ಬಳಸಿಕೊಂಡು 25 ಕೋಟಿ ವಂಚನೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಅರುಣಾ ಕುಮಾರಿ ಅವರ ಹೆಸರು ತುಂಬಾ ಕೇಳಿ ಬರುತ್ತಿದೆ. ಅರುಣಾ ಕುಮಾರಿ ಅವರೇ ವಂಚನೆ ಮಾಡಲು ಯತ್ನಿಸಿದ್ದರು ಎಂದೂ ಆರೋಪಿಸಲಾಗಿತ್ತು. ಈಗ ಇದೇ ಅರುಣಾ ಕುಮಾರಿ ಪ್ರತ್ಯಕ್ಷವಾಗಿದ್ದಾರೆ.  ಎಲ್ಲೋ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಒಂದು ವಿಡಿಯೋ ಮಾಡಿ, ಅದರಲ್ಲಿ ನಿರ್ಮಾಪಕ ಉಮಾಪತಿ ಅವರ ವಿರುದ್ಧ ಆರೋಪಗಳನ್ನು ಮಾಡಿ ರಿಲೀಸ್​ ಮಾಡಿದ್ದರು. ಈಗ ವಂಚನೆ ಯತ್ನ ಆರೋಪ ಹೊತ್ತ ಅರುಣಾ ಕುಮಾರಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಸ್ಪಷ್ಟನೆ ನೀಡಿದ್ದಾರೆ. 


ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬಂದ ಅರುಣಾ ಕುಮಾರಿ, 'ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತಸೆ. ಮರ್ಯಾದೆ ಪ್ರಶ್ನೆ ಹಾಗಾಗಿ ಮನೆ ಬಿಟ್ಟಿದ್ದೆ. ಎಲ್ಲವನ್ನೂ ಕಾನೂನಿಗೆ ಕೊಡ್ತೀನಿ. ನನ್ನ ತಾಯಿ, ತಂದೆ, ಮಗನಿಗೆ ತೊಂದರೆ ಆಗ್ತಿದೆ. ನಾನು ಸಿಂಗಲ್ ಪೇರೆಂಟ್. ನನಗೆ ಶಕ್ತಿ ಇಲ್ಲ. ಹಾಗಾಗಿ ಸುದ್ದಿಗೋಷ್ಠಿ ಮಾಡಿಲ್ಲ' ಎಂದಿದ್ದಾರೆ.


'ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ. ನಾನು ಯಾವುದೇ ದುಡ್ಡೂ ತೆಗೆದುಕೊಂಡಿಲ್ಲ. ಪೊಲೀಸ್​ ಠಾಣೆಯಲ್ಲಿ ಎಲ್ಲ ಮಾಹಿತಿ ಕೊಟ್ಟಿದ್ದೇನೆ. ನಾನು ವಂಚನೆ ಮಾಡಿದ್ದೀನಿ ಅನ್ನುವುದಕ್ಕೆ ಸಾಕ್ಷಿ ಏನಿದೆ? ವಂಚನೆ ಮಾಡಿದ್ದೀನಿ ಎನ್ನುವುದಕ್ಕೆ ನನಗೆ ಸಾಕ್ಷಿ ತೋರಿಸಿ. ಎಲ್ಲವೂ ಸುಳ್ಳು... ಯಾವುದಕ್ಕೂ ಪ್ರೂಫ್ ಅನ್ನುವುದೇ ಇಲ್ಲ. ಕಾನೂನು ಇದೆಯಲ್ಲ, ಕಾನೂನು ನೋಡಿಕೊಳ್ಳುತ್ತೆ. ನಾನು ಅಪರಾಧಿ ಅಂತ ಕಾನೂನಲ್ಲಿ ಸಾಬೀತಾದ್ರೆ ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧಳಾಗಿದ್ದೇನೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ: Megha Shetty: ಆ ಕಾರಣದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದ್ರಾ ಮೇಘಾಶೆಟ್ಟಿ..!


'ನನ್ನ ಮರ್ಯಾದೆ ಪ್ರಶ್ನೆ. ತಂದೆ ತಾಯಿ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾನು ನನ್ನ ಮಗನಿಗೆ ಸಿಂಗಲ್ ಪೇರೆಂಟ್. ನನಗೂ ಆರೋಗ್ಯ ಸಮಸ್ಯೆಗಳು ಇವೆ. ನನಗೆ ಅನ್ಯಾಯ ಆಗಿದೆ. ಕಾನೂನು ನನಗೆ ನ್ಯಾಯ ಕೊಡಿಸುತ್ತೆ. ನಾನು ಹೆಣ್ಣಾಗಿ ಇಷ್ಟೇ ಕೇಳಿಕೊಳ್ಳುವುದು, ನನ್ನ ತಂದೆ ತಾಯಿ ಮರ್ಯಾದೆ ಹೋಗ್ತಿದೆ. ಅವರಿಗೋಸ್ಕರ ಈ ಘಟನೆಯನ್ನ ಇಲ್ಲೇ ಬಿಟ್ಟು ಬಿಡಿ'.


'ಏನಿದೆ ದಾಖಲೆ..? ಫೋರ್ಜರಿ ಆಗಿದಿಯಾ..? ಒಂದು ಫೇಕ್ ಡ್ಯಾಕ್ಯುಮೆಂಟ್ ಕ್ರಿಯೇಟ್ ಆಗಿದಿಯಾ...? ಲೋನ್ ಅಪ್ಲಿಕೇಷನ್ ಆಗಿದೆಯಾ...  ಸಾಬೀತು ಮಾಡ್ಸಿ. ಅಪರಾಧ ಅಂಥ ಪ್ರೂವ್ ಆಗ್ಲಿ... ನಾನು ವಂಚನೆ ಮಾಡಿಲ್ಲ. ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡಿದ್ದೀನಿ ಅಂತ ನಾನೆಲ್ಲೂ ಹೇಳಿಲ್ಲ. ಪ್ರತಿಯೊಂದು ಸ್ಟೇಟ್​ಮೆಂಟ್ ನಾನು ಪೊಲೀಸರಿಗೆ ಕೊಟ್ಟಿದ್ದೀನಿ. ಎರಡು ದಿನ ಕಾಯಿರಿ ನಿಮಗೆ ರಿಸಲ್ಟ್​ ತಿಳಿಯುತ್ತದೆ. ನಾಗವರ್ಧನ್ ಯಾರು...? ಅವರು ನನಗೆ ಗೊತ್ತೆ ಇಲ್ಲ. ಅವರು ಮೊದಲು ದಾಖಲೆ ತೋರಿಸಲಿ, ನಂತರ ಮಾತನಾಡಲಿ. ಸದ್ಯಕ್ಕೆ ನನ್ನನ್ನು ಬಿಟ್ಟುಬಿಡಿ' ಎಂದು ಹೊರಟು ಹೋಗಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟ ನಂತರವೂ ಹಳೇ ಚಾಳಿ ಮುಂದುವರೆಸಿದ ಚಕ್ರವರ್ತಿ ಚಂದ್ರಚೂಡ: ಸಿಟ್ಟಾದ ದಿವ್ಯಾ ಸುರೇಶ್​..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. 

Published by:Anitha E
First published: