• Home
  • »
  • News
  • »
  • entertainment
  • »
  • Ramayan:‌ ರಾಮಾಯಣ್ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಗೋವಿಲ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ

Ramayan:‌ ರಾಮಾಯಣ್ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಗೋವಿಲ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ

ಅರುಣ್ ಗೋವಿಲ್‌ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ

ಅರುಣ್ ಗೋವಿಲ್‌ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ

90ರ ದಶಕದಲ್ಲಿ ಭಾರತದ ಮನೆಮಾತಾಗಿದ್ದ ‘ರಾಮಾಯಣ್’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ಅವರು ಇತ್ತೀಚೆಗೆ ವಿಮಾನ ನಿಲ್ದಾಣಲ್ಲಿದ್ದಾಗ, ಇಬ್ಬರು ಪ್ರಯಾಣಿಕರು ಆಗಮಿಸಿ ಅವರಿಗೆ ನಮಸ್ಕರಿಸಿದ್ದಾರೆ. ಅದರಲ್ಲೂ, ಮಹಿಳೆಯಂತೂ ಅರುಣ್‌ ಅವರ ಕಾಲು ಹಿಡಿದು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.

ಮುಂದೆ ಓದಿ ...
  • Share this:

ತೆರೆಮೇಲೆ ಪುರಾಣ ಪಾತ್ರಗಳನ್ನು ಮಾಡಿದ ಕಲಾವಿದರನ್ನು (Artist) ಎದುರು ನೋಡಿದಾಗ ಜನಸಾಮಾನ್ಯರು ಅವರನ್ನು ಪೂಜನೀಯವಾಗಿ ಕಾಣುವ ಅನೇಕ ನಿದರ್ಶನಗಳು ಈಗಲೂ ನಡೆಯುತ್ತಿರುತ್ತವೆ. ಕಾಲಿಗೆ ನಮಸ್ಕರಿಸುವುದು, ಆಶೀರ್ವಾದ (Blessing) ಪಡೆಯುವುದು ಇವುಗಳು ತುಂಬಾನೇ ಸಹಜವಾಗಿರುತ್ತವೆ. ಅದೇ ರೀತಿ ಮಹಿಳೆಯೊಬ್ಬರು ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಕಲಾವಿದರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. 80–90ರ ದಶಕದಲ್ಲಿ ದೂರದರ್ಶನದಲ್ಲಿ ಮೂಡಿಬರುತ್ತಿದ್ದ 'ರಾಮಾಯಣ್' ಧಾರಾವಾಹಿ (Ramayan Serial) ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇನಿಲ್ಲ. ಈ ಧಾರವಾಹಿಯ ಪಾತ್ರಧಾರಿಗಳನ್ನೇ ಜನ ದೇವರಾದ ರಾಮ, ಲಕ್ಷ್ಮಣ, ಸೀತೆ ಎನ್ನುವಷ್ಟು ಪಾತ್ರಗಳನ್ನು ಒಪ್ಪಿಕೊಂಡಿದ್ದರು. ಜನ ಈ ಕಲಾವಿದರನ್ನು ಎದುರಿಗೆ ನೋಡಿದಾಗ ಅಷ್ಟೇ ಗೌರವಯುತವಾಗಿ, ಪೂಜನೀಯವಾಗಿ ನೋಡುತ್ತಿದ್ದರು.


ರಾಮನ ಪಾತ್ರಧಾರಿಯ ಕಾಲಿಗೆ ನಮಸ್ಕರಿಸಿದ ಮಹಿಳೆ
90ರ ದಶಕದಲ್ಲಿ ಭಾರತದ ಮನೆಮಾತಾಗಿದ್ದ ‘ರಾಮಾಯಣ್’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ಅವರು ಇತ್ತೀಚೆಗೆ ವಿಮಾನ ನಿಲ್ದಾಣಲ್ಲಿದ್ದಾಗ, ಇಬ್ಬರು ಪ್ರಯಾಣಿಕರು ಆಗಮಿಸಿ ಅವರಿಗೆ ನಮಸ್ಕರಿಸಿದ್ದಾರೆ. ಅದರಲ್ಲೂ, ಮಹಿಳೆಯಂತೂ ಅರುಣ್‌ ಅವರ ಕಾಲು ಹಿಡಿದು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.


ತೆರೆಮೇಲೆ ಭಗವಂತ ಶ್ರೀರಾಮನಾಗಿ ನಟಿಸಿದ ಸುಮಾರು 35 ವರ್ಷಗಳ ನಂತರವೂ ʼರಾಮಾಯಣ್ʼ ಧಾರವಾಹಿಯ ನಟ ಅರುಣ್ ಗೋವಿಲ್ ಅವರು ಅಭಿಮಾನಿಗಳಿಂದ ಅದೇ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಅರುಣ್ ಗೋವಿಲ್ ಅವರ ಕಾಲನ್ನು ಸ್ಪರ್ಶಿಸಿ ಮಹಿಳೆಯೊಬ್ಬರು ನಮಸ್ಕಾರ ಮಾಡಿದ್ದಾರೆ.


ಮಹಿಳೆಗೆ ಶಲ್ಯ ನೀಡಿದ ಅರುಣ್ ಗೋವಿಲ್
ಮಹಿಳೆಯೊಬ್ಬರು ಮಂಡಿಯೂರಿ ಅವರ ಮುಂದೆ ನಮಸ್ಕರಿಸುತ್ತಿರುವಾಗ ಅರುಣ್ ಆಶ್ಚರ್ಯಚಕಿತರಾಗಿ ನಿಂತಿರುವುದನ್ನು ವಿಡಿಯೋ ತೋರಿಸುತ್ತದೆ. ಹಾಗೆ ಮಾಡದಂತೆ ತಡೆಯುವಂತೆ ನಟ ಸನ್ನೆ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಮಹಿಳೆ ಜೊತೆ ಇದ್ದ ಸಹಪ್ರಯಾಣಿಕ ಕೂಡ ಸ್ವಲ್ಪ ದೂರದಲ್ಲೇ ನಿಂತು ನೆಲವನ್ನು ಮುಟ್ಟಿ ನಮಸ್ಕರಿಸುತ್ತಾರೆ.


ಇದನ್ನೂ ಓದಿ:  Return to Dust: ಚಿತ್ರಮಂದಿರಗಳಿಂದ ಕಣ್ಮರೆಯಾದ ಸೂಪರ್ ಹಿಟ್ ಚೈನೀಸ್ ಚಲನಚಿತ್ರ ರಿಟರ್ನ್ ಟು ಡಸ್ಟ್! ಕಾರಣ ಏನು?


ಅರುಣ್ ಹಾಗೆಯೇ ಮಹಿಳೆಯನ್ನು ಹರಸಿ ಆಶೀರ್ವಾದದ ಸಂಕೇತವಾಗಿ, ತಮ್ಮಲ್ಲಿದ್ದ ಶ್ರೀರಾಮ ಹೆಸರು ಮುದ್ರಿತ ಶಲ್ಯವೊಂದನ್ನು ಅವರ ಕೊರಳಿಗೆ ಹಾಕುತ್ತಾರೆ. ಮೊದಲಿಗೆ ಆಕೆಯು ಆ ವಸ್ತ್ರವನ್ನು ಸ್ವೀಕರಿಸಲು ನಿರಾಕರಿಸಿದರೂ, ಆನಂತರ ಗೋವಿಲ್ ಬಲವಂತ ಮಾಡಿದ್ದಕ್ಕೆ ಆ ವಸ್ತ್ರವನ್ನು ಪಡೆದು ಅದನ್ನು ಮಡಚಿ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಳ್ಳುತ್ತಾರೆ.


ರಾಮಾನಂದ ಸಾಗರ್ ನಿರ್ಮಾಣದ ‘ರಾಮಾಯಣ್’ ಧಾರವಾಹಿಯ ಮೂಲಕ ಅರುಣ್ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಅರುಣ್ ಗೋವಿಲ್ ಮೂಲಕ ಕಂಡಿದ್ದ ಜನರು ಗೋವಿಲ್ ಬಗ್ಗೆ ಗೌರವ ಹೊಂದಿದ್ದರು.


"ನನ್ನನ್ನು ರಾಮ ಎಂದೇ ಕರೆಯುತ್ತಾರೆ"
ರಾಮಾಯಣ್ ಧಾರವಾಹಿಯ ರಾಮನ ಪಾತ್ರನ ಬಗ್ಗೆ ಈ ಹಿಂದೆ ಅಭಿಪ್ರಾಯ ಹಂಚಿಕೊಂಡಿದ್ದ ಅರುಣ್‌, "ನಾನು 'ರಾಮ್' ಆಗಬೇಕೆಂದು ದೇವರು ಬಯಸಿದ್ದ ಎನಿಸುತ್ತದೆ, ಎಷ್ಟು ಜನರಿಗೆ ಈ ಅಪರೂಪದ ಅವಕಾಶ ಸಿಗುತ್ತದೆ. ಜನರು ನನ್ನನ್ನು ಅರುಣ್ ಗೋವಿಲ್ ಎಂದು ಕರೆಯುವುದಿಲ್ಲ, ಅವರು ನನ್ನನ್ನು 'ರಾಮ್' ಎಂದು ಕರೆಯುತ್ತಾರೆ ಮತ್ತು ಇದು ದೊಡ್ಡ ವಿಷಯ" ಎಂದು ಖುಷಿ ವ್ಯಕ್ತಪಡಿಸಿದ್ದರು.


ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ ಈವೆರಗೆ 4.65 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 21,000ಕ್ಕೂ ಹೆಚ್ಚು ಲೈಕ್ಸ್‌ ಮತ್ತು 4,500ಕ್ಕೂ ಹೆಚ್ಚು ಬಳಕೆದಾರರು ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Samantha Fitness: ನಟಿ ಸಮಂತಾ ಫಿಟ್ನೆಸ್ ಸೀಕ್ರೆಟ್​ ಈ ಸ್ಪೆಷಲ್ ಇಡ್ಲಿಯಂತೆ


ಲಾಕ್‌ಡೌನ್ ಸಮಯದಲ್ಲೂ ಮನರಂಜನೆ ನೀಡಿದ್ದ ʼರಾಮಾಯಣ್ʼ
2020ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಈ ಧಾರವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಹಲವು ವರ್ಷಗಳ ಬಳಿಕವೂ ಜನರು ಈ ಧಾರವಾಹಿಯನ್ನು ಈ ಸಮಯದಲ್ಲಿ ವೀಕ್ಷಿಸಿದ್ದರು. ಮತ್ತು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮವಾಗುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿತು.

Published by:Ashwini Prabhu
First published: