• Home
  • »
  • News
  • »
  • entertainment
  • »
  • Kantara Movie: ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನ, ರವಿ ಶಂಕರ್ ಗುರೂಜಿ ಏನಂದ್ರು?

Kantara Movie: ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನ, ರವಿ ಶಂಕರ್ ಗುರೂಜಿ ಏನಂದ್ರು?

ಆಶ್ರಮದಲ್ಲಿಯೇ ಕಾಂತಾರ ವೀಕ್ಷಿಸಿದ ರವಿ ಶಂಕರ್ ಗುರೂಜಿ

ಆಶ್ರಮದಲ್ಲಿಯೇ ಕಾಂತಾರ ವೀಕ್ಷಿಸಿದ ರವಿ ಶಂಕರ್ ಗುರೂಜಿ

"ಕಾಂತಾರ ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾ ಆಗಿದೆ. ಮಲೆನಾಡಿನ, ತುಳುನಾಡಿನ ಸಂಸ್ಕೃತಿಯನ್ನ ತುಂಬಾ ಚೆನ್ನಾಗಿಯೇ ಚಿತ್ರದಲ್ಲಿ ತೋರಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ರವಿ ಶಂಕರ್ ಗುರೂಜಿ ಚಿತ್ರ ನೋಡಿದ ಬಳಿಕ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Film) ಸಿನಿಮಾ ಕಾಡುತ್ತಲೇ ಇದೆ. ವರಾಹ ರೂಪಂ (Varah Roopam Song) ಹಾಡು ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿದೆ. ಸಿನಿಮಾ ನೋಡಿ ಹೊರ ಬಂದ ಜನರ ಮನದಲ್ಲಿ ವರಾಹ ರೂಪಂ ರಿಂಗಣಿಸುತ್ತದೆ. ಕಾಂತಾರ ಸಿನಿಮಾದ ಶಕ್ತಿ ಕೂಡ ಹಾಡು ಅನ್ನೋದು ಅಷ್ಟೇ ಸತ್ಯವೇ ಆಗಿದೆ. ಕಾಂತಾರ ಚಿತ್ರದಲ್ಲಿ ಅದ್ಭುತವಾದ (Good Story) ಕಥೆ ಕೂಡ ಇದೆ. ಅದನ್ನ ನಟ-ನಿರ್ದೇಶಕ ರಿಷಬ್ ಶೆಟ್ಟಿ ಚೆನ್ನಾಗಿಯೇ ತೆರೆ ಮೇಲೆ ತಂದಿದ್ದಾರೆ. ವಿಶ್ವದೆಲ್ಲೆಡೆ ಕಾಂತಾರ ಸಿನಿಮಾ ಇನ್ನು ಥಿಯೇಟರ್​ನಲ್ಲಿಯೇ ಇದೆ. ಜನರೇ ಇದನ್ನ ಮುಗಿ ಬಿದ್ದು ನೋಡುತ್ತಿದ್ದಾರೆ. ಯಾರೂ ಚಿತ್ರವನ್ನ ಓಡಿಸುತ್ತಿಲ್ಲ. ಜನರೇ ಚಿತ್ರವನ್ನ ಓಡಿಸುತ್ತಿದ್ದಾರೆ. ಇಂತಹ ಈ ಚಿತ್ರವನ್ನ ರವಿ ಶಂಕರ್ ಗುರೂಜಿ (Ravi Shankar Guruji) ಆಶ್ರಮದಲ್ಲೂ ಪ್ರದರ್ಶನ ಮಾಡಲಾಗಿದೆ.


ಆಶ್ರಮದಲ್ಲಿಯೇ ಕಾಂತಾರ ವೀಕ್ಷಿಸಿದ ರವಿ ಶಂಕರ್ ಗುರೂಜಿ


ಕಾಂತಾರ ಸಿನಿಮಾವನ್ನ ಜನ ಥಿಯೇಟರ್​ ಗೆ ಹೋಗಿ ನೋಡುತ್ತಿದ್ದಾರೆ. ಪೈರಸಿ ಕಾಪಿ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಆದರೂ ಅದನ್ನ ನೋಡದೇ ಇರೋ ಜನ ಥಿಯೇಟರ್​ಗೆ ಬಂದು ಕಾಂತಾರ ಚಿತ್ರದ ರಿಯಲ್ ಎಕ್ಸಪಿರಿಯೆನ್ಸ್ ಪಡೆಯುತ್ತಿದ್ದಾರೆ.




ಕಾಂತಾರ ಸಿನಿಮಾದಲ್ಲಿ ತುಳುನಾಡಿನ ರಿಚ್ ಕಲ್ಚರ್ ಇದೆ. ಅಲ್ಲಿಯ ವಿಶೇಷ ಆಚರಣೆ ಕೂಡ ಇದೆ. ಇದನ್ನ ಕಂಡ ಜನ ಅಷ್ಟೇ ಪ್ರೀತಿಯಿಂದಲೇ ಕಾಂತಾರದಲ್ಲಿ ಅದನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.


ಕಾಂತಾರ ಸಿನಿಮಾ ದೇಶ-ವಿದೇಶದಲ್ಲೂ ಚೆನ್ನಾಗಿಯೇ ಹೋಗುತ್ತಿದೆ. ಸಿನಿಮಾವನ್ನ ಜನ ಮತ್ತೆ ಮತ್ತೆ ನೋಡುತ್ತಲೇ ಇದ್ದಾರೆ. ಹಾಗೆ ಬಂದೋರು ಸುಮ್ನೆ ಕೂಡುತ್ತಿಲ್ಲ. ಸಿನಿಮಾ ಪ್ರತಿ ವಿಷಯನ್ನೂ ಚರ್ಚೆ ಮಾಡುತ್ತಿದ್ದಾರೆ.


ಯಾವ ದೃಶ್ಯಕ್ಕೆ ನೀನು ಹೆದರಿದೆ? ಮತ್ಯಾವ ದೃಶ್ಯ ನಿನಗೆ ಇಷ್ಟವಾಯಿತು. ಸಿನಿಮಾ ಚೆನ್ನಾಗಿದೇ ಅಲ್ವೇ? ಅಂತಲೂ ಅಷ್ಟೇ ಖುಷಿಯಿಂದಲೇ ಕೇಳುತ್ತಿದ್ದಾರೆ. ಕಾಂತಾರ ಸಿನಿಮಾ ಅಷ್ಟೊಂದು ಪ್ರಭಾವವನ್ನ ಜನರ ಮೇಲೆ ಬೀರಿದೆ, ಬೀರುತ್ತಲೇ ಇದೆ.


Art Of Living Ravi Shankar Guruji Watch Kantara at Bangalore Ashrama
ಆರ್ಟ್ ಆಫ್ ಲಿವಿಂಗ್ ಗುರೂಜಿ ಕಾಂತಾರ ನೋಡಿ ಏನಂದ್ರು


ಸಿನಿಮಾ ನೋಡಿದ ಜನ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡು ಚಿತ್ರವನ್ನ ಮೌತ್ ಪಬ್ಲಿಸಿಟಿ ಕೂಡ ಮಾಡುತ್ತಿದ್ದಾರೆ. ಇದರಿಂದ ಕಾಂತಾರ ಚಿತ್ರಕ್ಕೆ ರಿಪೀಟ್ ಆಡಿಯೆನ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ.


ಇದನ್ನೂ ಓದಿ: Puneeth Rajkumar: ದೊಡ್ಮನೆ ಸೇರಿದ ಕರ್ನಾಟಕ ರತ್ನ; ಅಪ್ಪು ಫೋಟೋ ಎದುರು ಪದಕವಿಟ್ಟು ಪತ್ನಿ, ಪುತ್ರಿ ನಮನ


ಆರ್ಟ್ ಆಫ್ ಲಿವಿಂಗ್ ಗುರೂಜಿ ಕಾಂತಾರ ನೋಡಿ ಏನಂದ್ರು
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿಯೇ ರವಿಶಂಕರ್ ಗುರೂಜಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಆಶ್ರಮದಲ್ಲಿರೋ ಎಲ್ಲರ ಜೊತೆಗೆ ಕುಳಿತು ಕನ್ನಡದ ಕಾಂತಾರ ಚಿತ್ರವನ್ನ ಓಪನ್ ಸ್ಟೇಜ್ ಮೇಲೆ ಕಂಡು ಖುಷಿ ಪಟ್ಟಿದ್ದಾರೆ.


Art Of Living Ravi Shankar Guruji Watch Kantara at Bangalore Ashrama
ರವಿ ಶಂಕರ್ ಗುರೂಜಿಗೆ ಧನ್ಯವಾದ ಹೇಳಿದ ಹೊಂಬಾಳೆ ಸಂಸ್ಥೆ


"ಕಾಂತಾರ ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾ ಆಗಿದೆ. ಮಲೆನಾಡಿನ, ತುಳುನಾಡಿನ ಸಂಸ್ಕೃತಿಯನ್ನ ತುಂಬಾ ಚೆನ್ನಾಗಿಯೇ ಚಿತ್ರದಲ್ಲಿ ತೋರಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ರವಿ ಶಂಕರ್ ಗುರೂಜಿ ಚಿತ್ರ ನೋಡಿದ ಬಳಿಕ ಹೇಳಿದ್ದಾರೆ.


ರವಿ ಶಂಕರ್ ಗುರೂಜಿಗೆ ಧನ್ಯವಾದ ಹೇಳಿದ ಹೊಂಬಾಳೆ ಸಂಸ್ಥೆ
ಕಾಂತಾರ ಸಿನಿಮಾ ವೀಕ್ಷಿದ ಗುರೂಜಿ ತುಂಬಾ ಖುಷಿಪಟ್ಟಿದ್ದಾರೆ. ಬೆಂಗಳೂರು ಆಶ್ರಮದಲ್ಲಿರೋರು ಕೂಡ ಕಾಂತಾರ ಚಿತ್ರವನ್ನ ನೋಡಿ ಸಂತೋಷ ಪಟ್ಟಿದ್ದಾರೆ. ಇದರಿಂದ ಚಿತ್ರ ನಿರ್ಮಾಣ ಸಂಸ್ಥೆ ಸಂತೋಷದಲ್ಲಿಯೇ ಇದೆ.


ಕಾಂತಾರ ಹೆಸರಿನ ಫೇಸ್ ಬುಕ್ ಪೇಜ್​​​ನಲ್ಲೂ ರವಿ ಶಂಕರ್ ಗುರೂಜಿ ಸಿನಿಮಾ ನೋಡುವ ವೀಡಿಯೋ ಶೇರ್ ಮಾಡಲಾಗಿದೆ. ಚಿತ್ರ ನೋಡಿ ಬಂದ ಗುರೂಜಿಯ ಆ ಹೇಳಿಕೆಯನ್ನೂ ಇದೇ ವೀಡಿಯೋದಲ್ಲಿಯೇ ನೋಡಬಹುದು.


ಇದನ್ನೂ ಓದಿ:Shivaraj Kumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದ ಸಿನಿಮಾದ ಯಂಗ್ ಲುಕ್ ರಿವೀಲ್! ಡೈರೆಕ್ಟರ್ ಹರ್ಷ ಏನಂತಾರೆ?


ಈ ಮೂಲಕ ನಿರ್ಮಾಣ ಸಂಸ್ಥೆ ಹೊಂಬಾಳೆ ಗುರೂಜಿಗೂ ಧನ್ಯವಾದವನ್ನ ಅರ್ಪಿಸಿದೆ. ಇನ್ನೂ ಕಾಂತಾರ ಸಿನಿಮಾ ಪ್ರೇಕ್ಷಕರನ್ನ ಸೆಳೆಯುತ್ತಲೇ ಇದ್ದು, ಡಿವೈನ್ ಬ್ಲಾಕ್​ಬಸ್ಟರ್ ಹಿಟ್ ಆಗಿ ಮುನ್ನುಗ್ಗುತ್ತಲೇ ಇದೆ.

First published: